Thursday, January 23, 2025

ಆಫ್ರಿಕಾ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ; ಸ್ಯಾಮ್ಸನ್​​ ಆಟ ವ್ಯರ್ಥ

ಲಕ್ನೋ: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ರನ್​ಗಳಿಂದ ಸೋಲು ಕಂಡಿದೆ.

ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ರೋಚಕ ಸೆಣೆಸಾಟ ನಡೆಸಿತಾದರೂ ಅಂತಿಮವಾಗಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಗೆಲುವಿನ ನಗುಬೀರುವಲ್ಲಿ ಯಶಸ್ವಿಯಾಗಿದೆ.

ನಾಯಕ ಧವನ್ ನೇತೃತ್ವದ ಸಂಜು ಸ್ಯಾಮ್ಸನ್ 86 ರನ್​​ ಹಾಗೂ ಶ್ರೇಯಸ್​​ ಅಯ್ಯರ್ 50 ರನ್​ ಗಳಿಸಿ ಭಾರತ ತಂಡಕ್ಕೆ ಅದ್ಭುತ ಹೋರಾಟ ನಡೆಸಿತಾದರೂ ಕೇವಲ 9 ರನ್‌ಗಳ ಅಂತರದಿಂದ ಭಾರತ ಸೋಲು ಅನುಭವಿಸಿದೆ.

ಮಳೆಯಿಂದಾಗಿ ಎರಡು ತಂಡಗಳಿಗೂ 40 ಓವರ್‌ಗಳ ಪಂದ್ಯವನ್ನು ನಿಗದಿಗೊಳಿಸಲಾಗಿದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 250 ರನ್‌ಗಳ ಗುರಿಯನ್ನು ಭಾರತಕ್ಕೆ ನಿಗದಿಪಡಿಸಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 240 ರನ್‌ಗಳಿಗೆ ತನ್ನ ಆಟವನ್ನು ಅಂತ್ಯಗೊಳಿಸಿ 9 ರನ್‌ಗಳ ಅಂತರದಿಂದ ಸೋಲು ಒಪ್ಪಿಕೊಂಡಿದೆ.

RELATED ARTICLES

Related Articles

TRENDING ARTICLES