ಹುಬ್ಬಳ್ಳಿ : ಉಣಕಲ್ ಕ್ರಾಸ್ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ಕಮ್ಮರ್ ಮೆದುಳು ನಿಷ್ಕ್ರಿಯಗೊಂಡು ಅಸುನೀಗಿದರು.
ಹೆಲ್ಮೆಟ್ ಧರಿಸಿದೆ ವೇಗವಾಗಿ ಹೋಗಿ ಆಕ್ಸಿಡೆಂಟ್ ಆಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಡಲೇ ಪವನ್ ಕಮ್ಮರ್ನನ್ನು ಸ್ಥಳೀಯರು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪವನ್ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ನಾಲ್ವರಿಗೆ ಮರುಜನ್ಮ ನೀಡಿದ್ದಾರೆ.
ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಕಿಡ್ನಿ, ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಲಿವರ್ ಹಾಗೂ ಕಿಮ್ಸ್‌ಗೆ ಆಸ್ಪತ್ರೆಗೆ ಎರಡು ಕಣ್ಣುಗಳ ದಾನ ಮಾಡಲಾಗಿದೆ ಎಂದು ಡಾ. ವೆಂಕಟೇಶ ಮೊಗೇರ ತಿಳಿಸಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಡಾ. ಭರತ ಕ್ಷತ್ರಿ, ಡಾ.ಎಸ್.ಬಿ.ಬಳಿಗಾರ, ಡಾ. ಈಶ್ವರ ಹೊಸಮನಿ, ಡಾ. ವಿದ್ಯಾ ನೇತೃತ್ವದ ತಂಡ ಯಶಸ್ವಿಯಾಗಿ ಕಸಿ ನಡೆಸಿದ್ದು, ಪೋಷಕರ ನಿರ್ಧಾರವನ್ನ ಶ್ಲಾಘಿಸಿದ್ದಾರೆ.