Monday, December 23, 2024

ರಾಜರತ್ನ ಅಪ್ಪು ‘ಗಂಧದಗುಡಿ’ ಪಯಣಕ್ಕೆ ದಿನಗಣನೆ..!

ರಾಜರತ್ನ ಅಪ್ಪು ಇನ್ನಿಲ್ಲವಾಗಿ ವರ್ಷ ಆಗ್ತಾ ಬಂತು. ಆದ್ರೆ ಆತ್ಮದಂತೆ ಕನ್ನಡಿಗರ ಜೊತಗೇ ಇದ್ದು ಬಿಟ್ಟಿದ್ದಾರೆ ದೊಡ್ಮನೆಯ ರಾಜಕುಮಾರ ಪುನೀತ್ ರಾಜ್​ಕುಮಾರ್. ದೇವರಾಗಿ ಲಕ್ಕಿಮ್ಯಾನ್ ಚಿತ್ರದಲ್ಲಿ ದರ್ಶನ ಕೊಟ್ಟಿದ್ದಾಯ್ತು. ಇದೀಗ ಗಂಧದಗುಡಿ ಚಿತ್ರದಿಂದ ಬೆಳ್ಳಿಪರದೆ ಬೆಳಗಲು ಮತ್ತೆ ಬರ್ತಿದ್ದಾರೆ ಸ್ಯಾಂಡಲ್​ವುಡ್ ಅರಸ.

  • ಅಕ್ಟೋಬರ್ 9ಕ್ಕೆ ಟ್ರೈಲರ್.. 28ಕ್ಕೆ ಅಪ್ಪು ದರ್ಶನ ಕನ್ಫರ್ಮ್​

ಗಂಧದಗುಡಿ ಅಂದಾಕ್ಷಣ ನಟಸಾರ್ವಭೌಮ ಡಾ. ರಾಜ್​ಕುಮಾರ್ ನೆನಪಾಗ್ತಿದ್ರು. ಆದ್ರೆ ಇಂದಿನ ಜನರೇಷನ್​ಗೆ ರಾಜರತ್ನ ಅಪ್ಪು ಮಾತ್ರ ಕಣ್ಮುಂದೆ ಬರ್ತಾರೆ. ಕಾರಣ ಇದು ಅವ್ರ ಡ್ರೀಮ್ ಪ್ರಾಜೆಕ್ಟ್. ಎಲ್ಲಕ್ಕಿಂತ ಹೆಚ್ಚಾಗಿ ವಿಧಿಯೇ ನಿರ್ಧರಿಸಿದ ಕಟ್ಟ ಕಡೆಯ ಅಪ್ಪು ಸಿನಿಮಾ.

ಅಪ್ಪು ಅನ್ನೋ ಅನರ್ಗ್ಯ ರತ್ನನ ರಿಯಲ್ ಎಕ್ಸ್​ಪೀರಿಯೆನ್ಸ್. ಕಾಡು, ಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಬಗ್ಗೆ ಅವರಿಗಿದ್ದ ಕೌತುಕತೆಯ ಚಿತ್ರಣವಿದು. ನ್ಯಾಷನಲ್ ಜಿಯೋಗ್ರಫಿ ಚಾನೆಲ್​ನಲ್ಲಿ ಮಾತ್ರ ಕಾಣಸಿಗ್ತಿದ್ದ ದಟ್ಟಾರಣ್ಯ, ವನ್ಯ ಜೀವಿಗಳ ಕುರಿತ ದೃಶ್ಯಚಿತ್ತಾರ ಪವರ್ ಸ್ಟಾರ್ ಮೂಲಕ ಬಿಗ್​ಸ್ಕ್ರೀನ್​ಗೆ ಬರುವಂತಾಗಿದೆ.

ನ್ಯಾಷನಲ್ ಅವಾರ್ಡ್​ ವಿನ್ನರ್ ಡೈರೆಕ್ಟರ್ ಅಮೋಘವರ್ಷ ನಿರ್ದೇಶಿಸಿ, ಅಪ್ಪು ಜೊತೆ ಮಾಡಿರೋ ಜರ್ನಿ ಈ ಗಂಧದಗುಡಿ. ಇದು ನಮ್ಮ ಕರುನಾಡಿವ ಅರಣ್ಯ ಸಂಪತ್ತು, ಅಲ್ಲಿನ ಪ್ರಾಣಿ ಹಾಗೂ ಪಕ್ಷಿ ಸಂಕುಲದ ಕೈಗನ್ನಡಿ ಆಗಲಿದೆ. ಬರೀ ಡಾಕ್ಯುಮೆಂಟರಿ ಆಗಿರದೆ, ಸಾಂಗ್ಸ್ ನಿಂದ ಕಮರ್ಷಿಯಲ್ ಸಿನಿಮಾದಂತೆ ಹೊಸ ರೂಪ ಪಡೆದುಕೊಂಡಿದೆ.

ಟೀಸರ್​ನಿಂದ ವ್ಹಾವ್ ಫೀಲ್ ಕೊಟ್ಟಿದ್ದ ಗಂಧದಗುಡಿಯನ್ನ ಕನ್ನಡಿಗರಿಗೆ ಉಣಬಡಿಸೋಕೆ ಅಪ್ಪು ಅವ್ರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಮುಂದಾಗಿದ್ದಾರೆ. ಪಿಆರ್​ಕೆ ಬ್ಯಾನರ್​ನಡಿ ಈ ಸಿನಿಮಾ ಇದೇ ಅಕ್ಟೋಬರ್ 28ಕ್ಕೆ ಪುನೀತ್ ರಾಜ್​ಕುಮಾರ್ ಮೊದಲ ಪುಣ್ಯ ಸ್ಮರಣೆ ವಿಶೇಷ ತೆರೆ ಕಾಣ್ತಿದೆ. ಅದಕ್ಕೂ ಮುನ್ನ ಇದೇ ಅಕ್ಟೋಬರ್ 9ಕ್ಕೆ ಚಿತ್ರದ ಟ್ರೈಲರ್ ಲಾಂಚ್ ಆಗ್ತಿದೆ. ಟ್ರೈಲರ್​ನಲ್ಲಿ ಗಂಧದಗುಡಿಯ ಗಮ್ಮತ್ತು ರಿವೀಲ್ ಆಗಲಿದ್ದು, ಕನ್ನಡ ಕಲಾಭಿಮಾನಿಗಳಿಗೆ ಒಂದು ವಿಭಿನ್ನ ಎಕ್ಸ್​ಪೀರಿಯೆನ್ಸ್​ನ ಕೊಡಲಿದೆ ಈ ಪ್ರಯೋಗ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES