ನವದೆಹಲಿ : ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸುರೇಶ್ಗೆ ವಿಚಾರಣೆ ಬರುವಂತೆ ಇಡಿ ಸಮನ್ಸ್ ನೀಡಿತ್ತು. ಆದ್ರೆ, ಸಧ್ಯಕ್ಕೆ ವಿಚಾರಣೆ ಬರಲು ಆಗುವುದಿಲ್ಲ. ಮುಂದೊಂದು ದಿನ ಬರುವುದಾಗಿ ಡಿಕೆ ಬ್ರದರ್ಸ್ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಆದ್ರೆ, ಇಡೀ ಡಿಕೆ ಸಹೋದರರ ಮನವಿಗೆ ಒಪ್ಪದೇ ಅಕ್ಟೋಬರ್. 7ರಂದು ವಿಚಾರಣೆ ಹಾಜರಾಗಲೇಬೇಕೆಂದು ಮತ್ತೊಂದು ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಅನಿವಾರ್ಯವಾಗಿ ಡಿಕೆಶಿ ಹಾಗೂ ಸುರೇಶ್ ನಿನ್ನೆ (ಅ.06) ರಾತ್ರಿಯೇ ದೆಹಲಿಗೆ ತೆರಳಿದ್ದರು. ಯಂಗ್ ಇಂಡಿಯಾ ಸಂಸ್ಥೆಗೆ 25 ಲಕ್ಷ ರೂ. ದೇಣಿಗೆ ನೀಡಿದ್ದೆ. ಅದರ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದೇನೆ. ನಮ್ಮ ಕಂಪನಿಗಳಿಗೆ ಸೇರಿದ ಮತ್ತಷ್ಟು ದಾಖಲೆ ನೀಡಲು ಕೇಳಿದ್ದು, ದಾಖಲೆಗಳನ್ನು ನೀಡಲು ಕಾಲಾವಕಾಶ ಕೇಳಿದ್ದಕ್ಕೆ ಒಪ್ಪಿದ್ದಾರೆ.
ಇನ್ನು, ಡಿಕೆಶಿ ಹಾಗೂ ನನ್ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಮತ್ತೆ ಅಗತ್ಯ ಬಿದ್ದರೆ ವಿಚಾರಣೆಗೆ ಕರೆದರೆ ಬರುವಂತೆ ಸೂಚನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಇದೀಗ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಬೆಂಗಳೂರಿಗೆ ವಾಪಸ್ ಆಗಲು ನೇರವಾಗಿ ಇಡಿ ಕಚೇರಿಯಿಂದ ದೆಹಲಿ ಏರ್ಪೋರ್ಟ್ಗೆ ತೆರಳಿದರು.