Wednesday, January 22, 2025

ಕಾನೂನು ಗೌರವಕ್ಕೆ ಇಡಿ ವಿಚಾರಣೆಗೆ ಹಾಜರು; ಡಿಕೆ ಶಿವಕುಮಾರ್​​

ನವದೆಹಲಿ: ನ್ಯಾಷನಲ್​ ಹೆರಾಲ್ಡ್​ ಹಾಗೂ ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ(ಜಾರಿ ನಿರ್ದೇಶನಾಲಯ) ಡಿ.ಕೆ ಶಿವಕುಮಾರ್​ಗೆ ನೋಟಿಸ್​ ನೀಡಿದ ಹಿನ್ನಲೆಯಲ್ಲಿ ಇಂದು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿಕೆಶಿ ಮಾತನಾಡಿ, ಇಡಿಯವರು ವಿಚಾರಣೆಗೆ ಕರೆದಿದ್ದಾರೆ, ಬಂದಿದ್ದೇನೆ. ಇಡಿಯವವರು ಯಾವ ವಿಚಾರ ಕೇಳುತ್ತಾರೆ ಎಂಬುದು ಗೊತ್ತಿಲ್ಲ. ನನಗೆ ಹಾಗೂ ನನ್ನ ತಮ್ಮನಿಗೆ ನೋಟಿಸ್​ ನೀಡಿದ್ದಾರೆ. ವಿಚಾರಣೆಗೆ ಬಂದಿದ್ದೇವೆ ಎಂದರು.

ಇನ್ನು ಕಾಂಗ್ರೆಸ್​ ನೇತೃತ್ವದಲ್ಲಿ ಕರ್ನಾಟಕದಲ್ಲಿ ಭಾರತ್​ ಜೋಡೋ ಯಾತ್ರೆ ನಡೆಯುತ್ತಿದೆ. ಇದರ ನೇತೃತ್ವ ವಹಿಸಿಕೊಂಡಿದ್ದೇನೆ. ಇದರ ಹೊರತಾಗಿ ಇಂದು ಕಾನೂನು ಗೌರವಿಸಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ.

ಕಳೆದ ಎಂಟು ದಿನಗಳ ಇಂದೆ ಇಡಿಯಿಂದ ನೋಟಿಸ್​ ಬಂದಿತ್ತು. ಅ. 23 ರ ನಂತರ ವಿಚಾರಣಗೆ ಹಾಜರಾಗುತ್ತೇನೆ ಎಂದಿದ್ದೆ, ಇದಕ್ಕೆ ನಿರಾಕರಿಸಿ ಇಂದು ವಿಚಾರಣೆಗೆ ಹಾಜರಾಗುವಂತೆ ಈ ಮೇಲ್​ ಮೂಲಕ ನನಗೆ ಕೇಳಿಕೊಂಡಿತ್ತು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗುತ್ತೇನೆ.

RELATED ARTICLES

Related Articles

TRENDING ARTICLES