Monday, December 23, 2024

ಎವರ್​ಗ್ರೀನ್ ಅನಂತ್​ನಾಗ್​ರಿಗೆ ಗೌರವ ಡಾಕ್ಟರೇಟ್

ಆಲ್​ ಟೈಮ್​ ಎವರ್​ಗ್ರೀನ್​​​ ನಟ​​​​ ಅನಂತ್​​ನಾಗ್​​ ಇನ್ಮುಂದೆ ಡಾ. ಅನಂತ್​​ನಾಗ್​​​​ ಆಗಿದ್ದಾರೆ. ಸಿನಿಕರಿಯರ್​​ನಲ್ಲಿ ಅರ್ಧ ಶತಮಾನ ಪೂರೈಸಿರುವ ಲೆಜೆಂಡ್ರಿ ಆ್ಯಕ್ಟರ್​​. ಯೆಸ್​​​.. ಕರುನಾಡು ಕಂಡ ಅಪರೂಪದ ಚೇತನ. ಚಿತ್ರರಂಗದ ಕಳಸ ಅನಂತ್​​ನಾಗ್ ಅವ್ರಿಗೆ ​​​​​ ಬೆಂಗಳೂರು ವಿವಿ ಗೌರವ ಡಾಕ್ಟರೇಟ್​​​ ಪ್ರದಾನ ಮಾಡಿದೆ. ಇದ್ರ ಜತೆಗೆ ಅನಂತ್​​​ ಸಕ್ಸಸ್​​ ಹಿಂದಿರೋ ಪವರ್​​ಫುಲ್​ ಮ್ಯಾನ್​ ಬಗ್ಗೆ ಅನಂತ್​ ನಾಗ್​ ರಿವೀಲ್​ ಮಾಡಿದ್ರು. ಆ ವ್ಯಕ್ತಿ ಯಾರು ನಾವ್​ ಹೇಳ್ತೀವಿ. ನೀವೇ ಒದಿ.

  • ಅನಂತ್​​ ಸಕ್ಸಸ್​​​ ಹಿಂದೆ ಡಾ.ರಾಜ್​​​ಕುಮಾರ್​ ಪವರ್

​​ಕೆಜಿಎಫ್​​​​​. ಇಡೀ ಸಿನಿಲೋಕ ಅಚ್ಚರಿ ಪಡುವಂತೆ ಮಾಡಿದ ಸಿನಿಮಾ. ಈ ಚಿತ್ರದಲ್ಲಿನ ಒಂದೇ ಒಂದು ದನಿ ರಾಕಿಭಾಯ್​ ಚರಿತ್ರೆ ಹೃದಯ ನಾಟುವಂತೆ ಮಾಡಿದ್ವು. ಯೆಸ್​​​​​.. ಆ ದನಿ ಇನ್ಯಾರದ್ದು ಅಲ್ಲ. ಆನಂದ್​​ ಇಂಗಳಗಿ. ಇಟ್ಸ್​ ನನ್​ ಅದರ್​ ದ್ಯಾನ್​​ ಅನಂತ್​​ನಾಗ್​​​. ಸಾರ್ರಿ ಡಾ.ಅನಂತ್​​ನಾಗ್​​​​​​. ಆ ಕಂಚಿನ ಕಂಠ ಸರಿದೂಗುವ ಇನ್ನೊಂದು ದನಿ ಇಲ್ಲ. ಸಾಟಿಯಾಗುವ ನಟರಿಲ್ಲ. ಇಂತಹ ಅದ್ಭುತ ಕಲಾವಿದನಿಗೆ ಇಂದು ಗೌರವ ಡಾಕ್ಟರೇಟ್​ ಲಭಿಸಿದೆ. ಈ ಸಮಯದಲ್ಲಿ ಅನಂತ್​ನಾಗ್​ ಮಾತನಾಡಿ, ಡಾ. ರಾಜ್​​ ಕುಮಾರ್​ ನನ್ನ ಜೀವನದ ಮುಂದಿನ ದೋಣಿ ಎಂದ್ರು.

ಬೆಂಗಳೂರು ಉತ್ತರ ವಿವಿಯಿಂದ ಅನಂತ್​​ ನಾಗ್​​ ಅವರ ​​ ಕಲಾಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗಿದೆ. ನಗರದ ರೇಸ್​ ಕೋರ್ಸ್​ ರಸ್ತೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​​ ಅಶ್ವತ್ಥ ನಾರಾಯಣ ಹಾಗೂ ಅನಂತ್​​ ನಾಗ್​ ಅವರ ಫ್ಯಾಮಿಲಿ ಉಪಸ್ಥಿತಿಯಲ್ಲಿ ಡಾಕ್ಟರೇಟ್​ ಪ್ರಧಾನ ಮಾಡಿ ಸನ್ಮಾನಿಸಲಾಯಿತು. ಈ ನಡುವೆ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಇವ್ರು ಯಾರ ಆ್ಯಕ್ಟಿಂಗ್​ ಕಾಪಿ ಮಾಡಲ್ಲ. ಇವ್ರ ಆ್ಯಕ್ಟಿಂಗ್​ ಕೂಡ ಕಾಪಿ ಮಾಡೋಕೆ ಸಾಧ್ಯವಿಲ್ಲ ಎಂದರು.

ಮಿಂಚಿನ ಓಟ, ಬಯಲು ದಾರಿ, ನಾ ನಿನ್ನ ಬಿಡಲಾರೆ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ರಂಜಿಸಿದ ಮೋಸ್ಟ್​ ಹ್ಯಾಂಡ್ಸಮ್​ ನಟ ಅನಂತ್​​ ನಾಗ್​​​. ಕನ್ನಡ, ಹಿಂದಿ, ತಮಿಳು, ತೆಲುಗು, ಹಿಂದಿ ಸೇರಿದಂತೆ 160ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ವರ್ಸಟೈಲ್​ ಆ್ಯಕ್ಟರ್​​​. ಸಿನಿಮಾ ಮಾತ್ರವಲ್ಲದೇ ಜೆ.ಹೆಚ್​​ ಪಟೇಲ್​ ಅಧಿಕಾರಾವಧಿಯಲ್ಲಿ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ ಮಹಾನ್​ ವ್ಯಕ್ತಿ. ಈ ಸಂದರ್ಭದಲ್ಲಿ ಡಾಕ್ಟರೇಟ್​​ ಸ್ವೀಕರಿಸಿ ಮಾತನಾಡಿದ ಅನಂತ್​ನಾಗ್​​ ಸಕ್ಸಸ್​ ಹಿಂದಿನ ಸೂತ್ರವನ್ನು ರಿವೀಲ್​ ಮಾಡಿದ್ರು.

ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಅದರಿಂದ ಬೇಸರವಾಗಿ ಮತ್ತೆ ಸಿನಿಮಾಗೆ ಮರಳಿದ್ದು, ಹಾಗೆ ಶಾಲಾ ಕಾಲೇಜಿನ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಲ್ಲದೆ ಶಿವ ಪಾರ್ವತಿಯ ಕಥೆಯನ್ನು ಹಂಚಿಕೊಂಡ್ರು.

ಸಂಕಲ್ಪ ಚಿತ್ರದಿಂದ ಹಿಡಿದು ಇಂದಿನ ಗಾಳಿಪಟ 2 ಚಿತ್ರದವರೆಗೂ ನಟನಾಗಿ, ಪೋಷಕ ನಟನಾಗಿ ಮಿಂಚುತ್ತಿರುವ ಏಕೈಕ ಕಲಾವಿದ ಅನಂತ್​ ನಾಗ್​​​. ಸಾರ್ರಿ ಮತ್ತೆ ನೆನಪಿಸ್ತಾ ಇದ್ದೇವೆ. ಕರುನಾಡಿನ ಹೆಮ್ಮೆಯ ಪ್ರತೀಕ ಡಾ.ಅನಂತ್​ನಾಗ್​​​​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES