Friday, January 3, 2025

ದಿವ್ಯಾಗೆ ಮಗುವಿರುವುದು ನನಗೆ ಗೊತ್ತಿರಲಿಲ್ಲ : ಅಮ್ಜದ್​ ಖಾನ್

ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್​ ಹಾಗೂ ನಟ ಅಮ್ಜದ್​ ಖಾನ್​ ಸಂಸಾರದಲ್ಲಿ ಬಿರುಕು ಮೂಡಿದೆ. ಅವರ ದಾಂಪತ್ಯದ ಕಿರಿಕ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

ಪತಿ ವಿರುದ್ಧ ದಿವ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ. ಅವುಗಳಿಗೆ ಅಮ್ಜದ್​ ಖಾನ್​ ಸ್ಪಷ್ಟನೆ ನೀಡಿದ್ದಾರೆ. ‘ನಾನು ಆಕೆ ಮೇಲೆ ಯಾವ ಹಲ್ಲೆಯನ್ನೂ ನಡೆಸಿಲ್ಲ. ಬೇಕಾದ್ರೆ ನಮ್ಮ ಮನೆಯ ಸಿಸಿ ಕ್ಯಾಮರಾ ಚೆಕ್​ ಮಾಡಿ. ಆಕೆ ಕೆಲವು ಕೆಟ್ಟ ಸ್ನೇಹಿತರ ಜೊತೆ ಸೇರಿ ಇದೆಲ್ಲಾ ಮಾಡ್ತಿದ್ದಾಳೆ. ಅಬಾರ್ಷನ್​ ಮಾಡಿಸಲು ನಾಟಕ ಆಡ್ತಿರೋ ಹಾಗಿದೆ. ಏನೇ ಆದ್ರೂ ನನಗೆ ಮಗು ಬೇಕೇ ಬೇಕು. ಕಮಿಷನರ್​ಗೆ ದೂರು ನೀಡಲು ರೆಡಿಯಾಗಿದ್ದೇನೆ’ ಎಂದು ಅಮ್ಜದ್​ ಖಾನ್ ಹೇಳಿದ್ದಾರೆ.

ಇನ್ನು, ದಿವ್ಯಾ ಶ್ರೀಧರ್ ಅವರು ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ‘ಆಕಾಶ ದೀಪ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. 2015ರಲ್ಲಿ ಪ್ರಸಾರ ಕಂಡ ತಮಿಳಿನ ‘ಕೆಳದಿ ಕಣ್ಮಣಿ’ ಧಾರಾವಾಹಿಯ ಸಹ ನಟ ಅಮ್ಜದ್ ಖಾನ್​ ಅವರನ್ನು ದಿವ್ಯಾ ಮದುವೆ ಆಗಿದ್ದರು. ಆದರೆ ಈಗ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತಿ ವಿರುದ್ಧ ಹಲ್ಲೆ, ಕಿರುಕುಳ ಆರೋಪವನ್ನು ದಿವ್ಯಾ ಹೊರಿಸಿದ್ದಾರೆ.

RELATED ARTICLES

Related Articles

TRENDING ARTICLES