Wednesday, January 22, 2025

ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಇನ್ನೊಂದು ಗುಂಪಿನ ನಡುವೆ ಕಿರಿಕ್.!

ಬೆಂಗಳೂರು: ಸಿನಿಮಾ ವೀಕ್ಷಣೆಗೆ ಆಸನದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಬಿಗ್ ಬಾಸ್ ಸ್ಪರ್ಧಿ, ಗಾಯಕ ವಾಸುಕಿ ವೈಭವ್ ಹಾಗೂ ಇನ್ನೊಂದು ಗುಂಪಿನ ನಡುವೆ ಕಿರಿಕ್ ಆದ ಘಟನೆ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ನಡೆದಿದೆ.

ನಿನ್ನೆ ಸಂಜೆ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಅವರ ತಂಡ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಲು ಹೋಗಿತ್ತು. ಈ ವೇಳೆ ವಾಸುಕಿ ಕುಳಿತಿದ್ದ ಸೀಟ್ ಮುಂದೆ ಹೋಗಲು ಬಂದ ನಾಲ್ಕೈದು ಮಂದಿ ಗುಂಪಿಗೆ ವಾಸುಕಿ ಟೀಮ್​ ಬೇಗ ಹೋಗುವಂತೆ ಹೇಳಿದ್ದಾರೆ. ಆಗ ಹೋಗದೆ ಇರೋದಕ್ಕೆ ಎರಡು ಗುಂಪಿನ ನಡುವೆ ಪರಸ್ಪರ ವಾಗ್ವಾದ ಆಗಿ ಪೊಲೀಸರು ಬರೋವಾಗೆ ಆಗಿದೆ.

ವಾಸುಕಿ ವೈಭವ್ ಹಾಗೂ ಸ್ನೇಹಿತರಾದ ದರ್ಶನ್  ಗೌಡ, ಗೆಳತಿ ಟಿಕೆಟ್ ತೆಗೆದುಕೊಂಡು ಮೊದಲೇ ಸೀಟ್ ನಲ್ಲಿ ಕುಳಿತಿದ್ದರು. ತಮ್ಮ ಆಸನ ಮುಂದೆ ಬಂದ ಗುಂಪಿಗೆ ಬೇಗ ಹೋಗುವಂತೆ ವಾಸುಕಿ ಫ್ರೆಂಡ್ ದರ್ಶನ್ ಗೌಡ ಹಾಗೂ ಗೆಳತಿ ಹೇಳಿದ್ದಾರೆ. ಆಗ ಕುಪಿತರಾದ ಮುರುಳಿ, ಬಸವರಾಜ್ ಹಾಗೂ ಸ್ನೇಹಿತರು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಇನ್ನು ಕಾಂತಾರ ಸಿನಿಮಾ ವಿರಾಮದ ವೇಳೆ ಸುಮ್ಮನಿರದ ಗುಂಪು ಮತ್ತೆ ವೈಭವ್​ ಗುಂಪಿನೊಂದಿಗೆ ಜಗಳ ಮಾಡಿದ್ದಾರೆ. ವಾಸುಕಿ ಸ್ನೇಹಿತರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ, ಬಸವರಾಜ್, ಮುರುಳಿ, ಇತರರನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

RELATED ARTICLES

Related Articles

TRENDING ARTICLES