Sunday, January 19, 2025

ರಾಕಿ ಭಾಯ್​ ಹೊಡೆತಕ್ಕೆ ಸೌತ್​​ ಸಿನಿ ಶೇಕ್​.. ಫಿಲ್ಮ್​ಫೇರ್ ಕೂಡ ಬೆಂಗಳೂರಲ್ಲೇ.!

ಬೆಂಗಳೂರು: ಸ್ಯಾಂಡಲ್​ವುಡ್​​ ಅಂದ್ರೆನೆ ರಾಕಿಭಾಯ್.. ರಾಕಿಭಾಯ್​ ಅಂದ್ರೆ ಕರ್ನಾಟಕ ಎನ್ನೊವಾಗೆ ಯಶ್ ಸಿಕ್ಕಾಪಟ್ಟೆ ಹವಾ ಕ್ರಿಯೇಟ್​ ಮಾಡಿದ್ದಾರೆ. ಆ ಕೆಜಿಎಫ್​ನ ಗತ್ತು, ಗಮ್ಮತ್ತಿಗೆ ಪ್ಯಾನ್ ಇಂಡಿಯಾ ಅಕ್ಷರಶಃ ತತ್ತರಿಸಿ ಹೋಗಿದೆ. ಅದೇ ವಿಚಾರಕ್ಕೆ ಸೈಮಾ ಅವಾರ್ಡ್ ಕಾರ್ಯಕ್ರಮ ನಮ್ಮ ಹೆಮ್ಮೆಯ ಬೆಂಗಳೂರಲ್ಲೇ ನಡೀತು. ಸದ್ಯ ಫಿಲ್ಮ್​ಫೇರ್ ಕೂಡ ಆಯೋಜನೆ ಆಗ್ತಿದ್ದು, ಅದ್ರ ಎಕ್ಸ್​ಕ್ಲೂಸಿವ್ ಸ್ಟೋರಿ ನಿಮಗಾಗಿ ನಮ್ಮ ವರದಿ.

ಹೌದು.. ಕನ್ನಡಿಗರ ಫಿಲ್ಮ್ ಮೇಕಿಂಗ್ ಗತ್ತು ಇಡೀ ಇಂಡಿಯಾಗೆ ಗೊತ್ತು. ಭಾರತೀಯ ಚಿತ್ರರಂಗದಲ್ಲಿ ಸೌತ್ ಸಿನಿಮಾಗಳದ್ದೇ ದರ್ಬಾರ್. ಅದ್ರಲ್ಲೂ ನಮ್ಮ ಕನ್ನಡದ ಚಿತ್ರಗಳು ನಿರೀಕ್ಷೆಗೂ ಮೀರಿ ಕಮಾಲ್ ಮಾಡ್ತಿವೆ. ಅದೆಲ್ಲಕ್ಕೂ ಮುನ್ನುಡಿ ಬರೆದದ್ದೇ ಕೆಜಿಎಫ್ ಅನ್ನೋ ಮಾಸ್ಟರ್​ಪೀಸ್ ಸಿನಿಮಾ. ಯಶ್, ಪ್ರಶಾಂತ್​ ನೀಲ್ ಮಾಡಿದ ಮೋಡಿಗೆ ಇಡೀ ಇಂಡಿಯಾ ಸ್ಟನ್ ಆಗಿದೆ.

ಪರಭಾಷೆಗಳಿಗೆ ನಮ್ಮವ್ರು ಹೋಗಿ ಪಡೆದು ಬರ್ತಿದ್ದ ಅವಾರ್ಡ್​ಗಳು ಇದೀಗ ಪರಭಾಷಿಗರನ್ನೇ ನಮ್ಮೂರಿಗೆ ಕರೆಸಿ ಕೊಡುವಂತಾಗಿದೆ. ಇತ್ತೀಚಿಗೆ ಸೌತ್​ ಇಂಡಿಯಾದಲ್ಲಿ ಹೆಸರು ಮಾಡಿದ ಸೈಮಾ ಅವಾರ್ಡ್​ ಕಾರ್ಯಕ್ರಮದ ನಮ್ಮ ಬೆಂಗಳೂರಲ್ಲಿ ನಡೆದಿತ್ತು. ಅದ್ರ ಅಸಲಿ ರೂವಾರಿ ಯಶ್ ಅನ್ನೋದು ಆ ನಂತ್ರ ಎಲ್ರಿಗೂ ತಿಳಿಯಿತು. ಇದೀಗ ಫಿಲ್ಮ್​ಫೇರ್ ಅವಾರ್ಡ್​ಗಳ ಸರತಿ ಶುರುವಾಗಿದೆ.

ಇದೇ ಅಕ್ಟೋಬರ್ 9ಕ್ಕೆ ನಮ್ಮ ಸಿಲಿಕಾನ್ ಸಿಟಿಗೆ ಪಂಚಭಾಷಾ ತಾರೆಯರು ಆಗಮಿಸಲಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗದ ಸ್ಟಾರ್​ಗಳು, ಟೆಕ್ನಿಷಿಯನ್ಸ್ ಬರ್ತಿದ್ದಾರೆ. ಇದು 67ನೇ ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್ ಆಗಿದ್ದು, ಇಷ್ಟು ದಿನ ಹೈದ್ರಾಬಾದ್, ಚೆನ್ನೈನಲ್ಲಿ ನಡೀತಿತ್ತು. ಇದೇ ಮೊದಲ ಬಾರಿ ನಮ್ಮಲ್ಲಿ ನಡೀತಿರೋದು ಇಂಟರೆಸ್ಟಿಂಗ್.

ವಿಶೇಷ ಅಂದ್ರೆ ಕನ್ನಡದ ಐಂದ್ರಿತಾ ರೇ, ತೆಲುಗಿನ ಪೂಜಾ ಹೆಗ್ಡೆ, ಸೀತಾರಾಮಂ ಖ್ಯಾತಿಯ ಮ್ರುನಾಲ್ ಠಾಕೂರ್, ಕೀರ್ತಿ ಶೆಟ್ಟಿ ಹಾಗೂ ಮಲಯಾಳಂನ ಸಾನ್ಯ ಅಯ್ಯಪ್ಪನ್ ಸ್ಟೇಜ್ ಪರ್ಫಾಮೆನ್ಸ್ ನೀಡಲಿದ್ದಾರೆ. ಇವರ ಡ್ಯಾನ್ಸ್​ ಕಿಕ್ಕೇರಿಸಲಿದ್ದು, ನಮ್ಮೂರಲ್ಲಿ ಸೊಂಟ ಬಳುಕಿಸ್ತಾರೆ ಅನ್ನೋದು ನಿಜಕ್ಕೂ ಖುಷಿ ಅನಿಸಿದೆ.

ರಮೇಶ್ ಅರವಿಂದ್ ಹಾಗೂ ದಿಗಂತ್ ಈ ಬಾರಿಯ ಫಿಲ್ಮ್ ಫೇರ್ ಅವಾರ್ಡ್​ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಇನ್ನು ಇದನ್ನ ಕನ್ನಡದಲ್ಲಿ ಮಾಡೋಕೆ ಮುಂದಾಗಿರೋದು ಕಮರ್ ಫಿಲ್ಮ್ ಫ್ಯಾಕ್ಟರಿಯ ನಿರ್ಮಾಪಕ ಕಮರ್, ಶಿವರಾಜ್​ಕುಮಾರ್-ರಮ್ಯಾ ಜೊತೆ ಆರ್ಯನ್, ಜಗ್ಗುದಾದಾ ಅನ್ನೋ ಸಿನಿಮಾಗಳನ್ನ ಮಾಡಿದ್ದ ಕಮರ್, ಸದ್ಯ ತರುಣ್- ದಿಗಂತ್​ಗೆ ಹೊಸ ಸಿನಿಮಾ ನಿರ್ಮಿಸ್ತಿದ್ದಾರೆ. ಇವ್ರು ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ತಮ್ಮದೇ ಮುಂದಾಳತ್ವದಲ್ಲಿ ಮಾಡ್ತಿದ್ದು, ಮಸ್ತ್ ಮನರಂಜನೆ ಕೊಡೋಕೆ ವೇದಿಕೆ ಸಿದ್ದಗೊಳಿಸ್ತಿದ್ದಾರೆ.

ಒಟ್ಟಾರೆ ಇಂತಹ ಸ್ಟಾರ್ ಅಟ್ರ್ಯಾಕ್ಷನ್ ಕಾರ್ಯಕ್ರಮಗಳು ನಮ್ಮಲ್ಲೂ ಆಗೋಕೆ ಕಾರಣೀಭೂತರಾದ ಯಶ್ ಅವ್ರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES