Sunday, December 22, 2024

ಭಾರತ್​ ಜೋಡೊ ಯಾತ್ರೆಯಲ್ಲಿ ಮಗನಿಗೆ ಸಾಥ್​ ನೀಡಿದ ಸೋನಿಯಾ.!

ಮಂಡ್ಯ: ಮಂಡ್ಯದ ಪಾಂಡವಪುರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರಂಭವಾಗಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೆಜ್ಜೆ ಹಾಕಿದ್ದಾರೆ.

ದಸರಾ ಹಿನ್ನಲೆಯಲ್ಲಿ ಭಾರತ್ ಜೋಡೊ ಯಾತ್ರೆಗೆ ಎರಡು ದಿನ ವಿಶ್ರಾಂತಿ ಪಡೆದುಕೊಂಡಿದ್ದ ರಾಹುಲ್​ ಗಾಂಧಿ ಇಂದು ಮತ್ತೆ ತಮ್ಮ ಪಾದಯಾತ್ರೆ ಆರಂಭಿಸಿದ್ದಾರೆ. ಇನ್ನು ಮಗ ರಾಹುಲ್​ ಗಾಂಧಿಗೆ ಸೋನಿಯಾ ಗಾಂಧಿ ಸಾಥ್​ ನೀಡಿದರು.

ಸುಮಾರು 15 ನಿಮಿಷ ಭಾರತ್‌ ಜೋಡೊ ಯಾತ್ರೆಯಲ್ಲಿ ಸೋನಿಯಾ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಳಿಕ ಸೋನಿಯಾ ಗಾಂಧಿ ದೆಹಲಿಗೆ ವಾಪಸ್​​ ತೆರಳಲಿದ್ದಾರೆ. ಸೋನಿಯಾ ಭಾಗಿಯಿಂದ ಭಾರತ್‌ ಜೋಡೊಗೆ ಮತ್ತಷ್ಟು ಮೆರುಗು ತಂದಿದೆ.

ಅಕ್ಟೋಬರ್​ 3ಕ್ಕೆ ಮೈಸೂರಿಗೆ ಬಂದಿದ್ದ ಸೋನಿಯಾ ಗಾಂಧಿ ಅವರು ಕಬಿನಿ ಹಿನ್ನೀರಿನ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದರು. ನಿನ್ನೆ ನಾಗರಹೊಳೆ ಅಭಯಾರಣ್ಯಗೆ ರಾಹುಲ್​ ಹಾಗೂ ಸೋನಿಯಾ ಭೇಟಿ ನೀಡಿದ್ದರು.

RELATED ARTICLES

Related Articles

TRENDING ARTICLES