Tuesday, January 21, 2025

ಉಪ್ಪಿಗೂ ಮುನ್ನ ಡಾರ್ಲಿಂಗ್ ಕೃಷ್ಣಗೆ ಶಶಾಂಕ್ ಆ್ಯಕ್ಷನ್ ಕಟ್

ರಾಕಿಭಾಯ್ ಯಶ್ ಹಾಗೂ ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್​ರನ್ನ ಬೆಳ್ಳಿತೆರೆಗೆ ಇಂಟ್ರಡ್ಯೂಸ್ ಮಾಡಿದ ಡೈರೆಕ್ಟರ್ ಶಶಾಂಕ್, ಉಪ್ಪಿಗೂ ಮುನ್ನ ಡಾರ್ಲಿಂಗ್​ ಕೃಷ್ಣಗೆ ಫ್ರೇಮ್ ಇಡ್ತಿದ್ದಾರೆ. ಯೆಸ್. ಉಪ್ಪಿ ಡೇಟ್ಸ್ ಪಡೆದು, ಕೊರೋನಾ ಬಳಿಕ ಕಿಕ್​ಸ್ಟಾರ್ಟ್​ ಮಾಡೋ ಧಾವಂತದಲ್ಲಿದ್ದ ಶಶಾಂಕ್, ನ್ಯೂ ಮೂವಿಗೆ ಅಸ್ತು ಅಂದಿದ್ದಾರೆ.

ರಾಕಿಭಾಯ್- ರಾಧಿಕಾರನ್ನ ಇಂಟ್ರಡ್ಯೂಸ್ ಮಾಡಿದ ಡೈರೆಕ್ಟರ್

ಚೊಚ್ಚಲ ಚಿತ್ರದಲ್ಲೇ ಸಿಕ್ಸರ್ ಭಾರಿಸಿದ ಕ್ರಿಯಾಶೀಲ ನಿರ್ದೇಶಕ ಶಶಾಂಕ್, ಎರಡನೇ ಸಿನಿಮಾದಲ್ಲೇ ರಾಕಿಭಾಯ್ ಯಶ್ ಹಾಗೂ ರಾಧಿಕಾ ಪಂಡಿತ್​ರಂತಹ ಅತ್ಯದ್ಭುತ ಕಲಾವಿದರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ರು. ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಕೃಷ್ಣಲೀಲಾ, ಮುಂಗಾರುಮಳೆ-2, ತಾಯಿಗೆ ತಕ್ಕ ಮಗ ಹೀಗೆ ಸಾಲು ಸಾಲು ಸಿನಿಮಾಗಳನ್ನ ಮಾಡಿದ ಶಶಾಂಕ್ ಲವ್ 360 ಚಿತ್ರದಿಂದ ಮತ್ತಿಬ್ಬರು ಹೊಸ ಪ್ರತಿಭೆಗಳನ್ನ ಇಂಟ್ರಡ್ಯೂಸ್ ಮಾಡಿದ್ರು.

ಜಗವೇ ನೀನು ಗೆಳತಿಯೇ ಅನ್ನೋ ಹಾಡಿಂದ ಸಿನಿಮಾ ಕೂಡ ಹೈಪ್ ಪಡೀತು. ಆ ಸಿನಿಮಾ ಪರಭಾಷೆಗಳಿಗೂ ಡಬ್ ಆಗಲು ಅಡಿಯಿಟ್ಟಿದೆ. ಇದೀಗ ಅದ್ರ ಬೆನ್ನಲ್ಲೇ ಉಪೇಂದ್ರ ಡೇಟ್ಸ್ ಪಡೆದಿದ್ದ ಶಶಾಂಕ್, ಅವ್ರಿಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅಂದುಕೊಂಡ್ರೆ, ಅದಕ್ಕೂ ಮುನ್ನ ಮತ್ತೊಂದು ಪ್ರಾಜೆಕ್ಟ್​ಗೆ ಕೈ ಹಾಕಿದ್ದಾರೆ.

ಹೌದು.. ಬಿ.ಸಿ, ಪಾಟೀಲ್​ರ ಕೌರವ ಪ್ರೊಡಕ್ಷನ್ ಹೌಸ್ ಜೊತೆಗೂಡಿ ಶಶಾಂಕ್ ಸಿನಿಮಾಸ್​ ಬ್ಯಾನರ್​ನಡಿ ಶಶಾಂಕ್ ಅವ್ರು ಹೊಸ ಸಿನಿಮಾನ ನಟಿಸಿ, ನಿರ್ಮಿಸಲು ಮುಂದಾಗಿದ್ದಾರೆ. ವಿಜಯದಶಮಿ ಹಬ್ಬದ ವಿಶೇಷ ಸಿನಿಮಾಗೆ ಅಫಿಶಿಯಲಿ ಪೂಜಾ ಕಾರ್ಯಕ್ರಮ ಮಾಡಿ ಶುಭಾರಂಭ ಮಾಡಿದ್ದಾರೆ. ಸದ್ಯದಲ್ಲೇ ಟೈಟಲ್ ಅನೌನ್ಸ್ ಮಾಡೋದಾಗಿ ಫೋಟೋಸ್ ಸಮೇತ ತಮ್ಮ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಉಪೇಂದ್ರ ಕಬ್ಜ ಹಾಗೂ ತಮ್ಮದೇ ನಿರ್ದೇಶನದ ಯು & ಐ ಚಿತ್ರಗಳಲ್ಲಿ ಬ್ಯುಸಿ ಆಗಿರೋದ್ರಿಂದ ಅವುಗಳನ್ನ ಮುಗಿಸಿ, ಫ್ರೀ ಆಗೋ ಟೈಂಗೆ ಡಾರ್ಲಿಂಗ್ ಕೃಷ್ಣ ಜೊತೆ ಸಿನಿಮಾ ಮಾಡಲಿದ್ದಾರೆ ಶಶಾಂಕ್. ಅದಾದ ಬಳಿಕ ಅವ್ರ ಕನಸಿನ ಸಿನಿಮಾನ ಉಪ್ಪಿ ಜೊತೆ ಮಾಡೋದು ಪಕ್ಕಾ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES