Monday, December 23, 2024

ಕಿಲ್ಲರ್ ಲುಕ್​ನಲ್ಲಿ ಗನ್ ಹಿಡಿದು ಘರ್ಜಿಸಿದ ಮಾರ್ಟಿನ್ ಧ್ರುವ

ಬರ್ತ್ ಡೇ ಸೆಲೆಬ್ರೇಷನ್​ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬ್ರೇಕ್ ಹಾಕಿದ್ರೂ, ಮಾರ್ಟಿನ್ ಚಿತ್ರದ ನ್ಯೂ ಪೋಸ್ಟರ್ ಲಾಂಚ್ ಆಗಿದೆ. ಕಿಲ್ಲರ್ ಲುಕ್​​ನಿಂದ ಸಖತ್ ಸದ್ದು ಮಾಡ್ತಿದ್ದಾರೆ ಮಸಲ್ ಮ್ಯಾನ್ ಧ್ರುವ. ಬೀಸ್ಟ್ ವಿಜಯ್ ಗತ್ತಿನಲ್ಲಿರೋ ಅದ್ರ ಗಮ್ಮತ್ತು ಎಂಥದ್ದು ಅನ್ನೋದ್ರ ಜೊತೆ ಮಾರ್ಟಿನ್ ಎಕ್ಸ್​ಕ್ಲೂಸಿವ್ ಅಪ್ಡೇಟ್ಸ್ ಫಿಲ್ಮಿ ಪವರ್​ನಲ್ಲಿ.

  • 6 ಭಾಷೆಯಲ್ಲಿ ಡಿಸೆಂಬರ್​ಗೆ ಟೀಸರ್.. ರಾಮನವಮಿಗೆ ರಿಲೀಸ್

ಮಾರ್ಟಿನ್​ನಲ್ಲಿ ಧ್ರುವ ಮಾಸ್ ಲುಕ್, ಕ್ಯಾಮೆರಾ ಕೈಚಳಕ, ಫಿಸಿಕಲ್ ಫಿಟ್ನೆಸ್ ಹೀಗೆ ಎಲ್ಲವೂ ಮಾಸ್​ಪ್ರಿಯರ ನಾಡಿಮಿಡಿತ ಹೆಚ್ಚಿಸಿದ್ದವು. ಸಿಂಗಲ್ ಟೀಸರ್​ನಿಂದಲೇ ಹಲ್​ಚಲ್ ಎಬ್ಬಿಸಿದ್ದ ಮಾರ್ಟಿನ್, ಇದೀಗ ಐದು ಭಾಷೆಯಿಂದ ಆರು ಭಾಷೆಗಳತ್ತ ಒಂದು ಹೆಜ್ಜೆ ಮುಂದಿಟ್ಟಿದೆ. ಯೆಸ್.. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಐದು ಭಾಷೆಯಲ್ಲಿ ತಯಾರಾಗ್ತಿದ್ದ ಈ ಸಿನಿಮಾದ ಆ ಲಿಸ್ಟ್​ಗೆ ಇಂಗ್ಲಿಷ್​ ಭಾಷೆಯೂ ಸೇರ್ಪಡೆ ಆಗಿದೆ.

ಇಂದು ಧ್ರುವ ಸರ್ಜಾ ಬರ್ತ್ ಡೇ ವಿಶೇಷ ಪ್ಯಾನ್ ಇಂಡಿಯಾ ಮಾರ್ಟಿನ್​ನ ನ್ಯೂ ಪೋಸ್ಟರ್ ಲಾಂಚ್ ಮಾಡಿದೆ ಚಿತ್ರತಂಡ. ಎಪಿ ಅರ್ಜುನ್ ಆ್ಯಕ್ಷನ್ ಕಟ್ ಹೇಳ್ತಿರೋ ಹಾಗೂ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿರೋ ಬಹುಕೋಟಿ ವೆಚ್ಚದ ಮಾರ್ಟಿನ್, ಟೀಸರ್ ಜೊತೆ ಧ್ರುವ ಕಿಲ್ಲರ್ ಲುಕ್ಸ್​ನಿಂದ ಮ್ಯಾಜಿಕ್ ಮಾಡ್ತಿದೆ.

ಸದ್ಯ ಬಾಯಲ್ಲಿ ಸಿಗಾರ್, ಕೈಯಲ್ಲಿ ದೊಡ್ಡದೊಂದು ಗನ್ ಹಿಡಿದಿರೋ ಧ್ರುವ ಪೋಸ್ಟರ್ ಮಿಂಚು ಹರಿಸ್ತಿದೆ. ಇದು ರೀಸೆಂಟ್ ತಮಿಳು ರಿಲೀಸ್ ಬೀಸ್ಟ್ ಸಿನಿಮಾದಲ್ಲಿ ನಟ ವಿಜಯ್ ಸ್ಟೈಲ್​​ನ ಮೀರಿಸುವಂತಿದೆ. ಅದನ್ನೇ ಹೋಲುವಂತಿದ್ರೂ, ಇಲ್ಲಿ ಮಾಸಿಸಂ ನಿರೀಕ್ಷೆಗೂ ಮೀರಿದ ರೇಂಜ್​ಗಿದೆ. ಇನ್ನು ಚಿತ್ರದ ಟೀಸರ್ ಇದೇ ಡಿಸೆಂಬರ್​ಗೆ ಗ್ರ್ಯಾಂಡ್ ಆಗಿ ಲಾಂಚ್ ಆಗಲಿದೆ.

2023ರ ಮಾರ್ಚ್​ನಲ್ಲಿ ರಾಮನವಮಿ ವಿಶೇಷ ಮಾರ್ಟಿನ್ ಸಿನಿಮಾ ವರ್ಲ್ಡ್​ವೈಡ್ ತೆರೆಗಪ್ಪಳಿಸಲಿದೆಯಂತೆ. ಇಂಡಿಯನ್ ಅನ್ನೋ ಟ್ಯಾಟ್ಯೂನೊಂದಿಗೆ ಧ್ರುವ ಕಾಣಿಸಿಕೊಂಡಿದ್ದು, ಅವ್ರು ಸೋಲ್ಜರ್ ಅಥ್ವಾ ಗ್ಯಾಂಗ್​ಸ್ಟರ್ ಅನ್ನೋದು ನಿರೀಕ್ಷಿಸಬೇಕಿದೆ. ಕೆಜಿಎಫ್, ಕಬ್ಜ ನಂತ್ರ ಅದೇ ಮಟ್ಟದಲ್ಲಿ ಮೇಕಿಂಗ್ ಮಾಡ್ತಿರೋ ಈ ಸಿನಿಮಾ, ಇಂಡಿಯನ್ ಸಿನಿದುನಿಯಾದಲ್ಲಿ ಬೆಂಚ್ ಮಾರ್ಕ್ ಕ್ರಿಯೇಟ್ ಮಾಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES