Monday, December 23, 2024

ಕೈಗೆ ಕಚ್ಚಿದ್ರು ಕುಡಿತದ ಅಮಲಿನಲ್ಲಿ ಹಾವು ಬಿಡದ ಯುವಕ.!

ತುಮಕೂರು; ಹಾವು ಕಂಡ್ರೆ ಸಾಕು ಎಂತಹವರ ಎದೆಯಲ್ಲು ನಡುಕ ಶುರುವಾಗುತ್ತದೆ. ಆದ್ರೆ ಇಲ್ಲೊಬ್ಬ ಭೂಪ ಎಣ್ಣೆ ಮತ್ತಲ್ಲಿ ಹಾವು ಹಿಡಿದು ಹುಚ್ಚಾಟ ಮೇರೆದಿದ್ದಾನೆ. ಆತನ ಹುಚ್ಚಾಟಕ್ಕೆ ಇಡೀ ಏರಿಯಾ ಜನರೇ ಒಂದು ಕ್ಷಣ ಭಯಬೀತರಾಗಿದ್ದಾರೆ.

ಒಂದು ಕಡೆ ರಸ್ತೆ ಬದಿ ತನ್ನ ಪಾಡಿಗೆ ಹೋಗುತ್ತಿದ್ದರೆ, ಇನ್ನೊಂದು ಕಡೆ ಸಾರ್ವಜನಿಕರು ಬೇಡ ಬೇಡ ಅಂದ್ರು ಹಾವನ್ನ ಹಿಡಿದು ಕೈಯಲ್ಲಿ ಸುತ್ತಿಕೊಂಡು ಯುವಕ ಹುಚ್ಚಾಟ ಮೇರೆದ ದೃಶ್ಯ ತುಮಕೂರು ನಗರದ ಶಿರಾ ಗೇಟ್ ಬಳಿ ಕಂಡುಬಂದಿದೆ.

ನಗರದ ಶಿರಾ ಗೇಟ್ ಬಳಿ ನಾಗರ ಹಾವು ಕಾಣಿಸಿಕೊಂಡಿದ್ದು, ಇದನ್ನ ನೋಡಿದ ಸಲೀಂ ಎಂಬ ಯುವಕ ಕುಡಿದ ಮತ್ತಿನಲ್ಲಿ ಆ ಹಾವನ್ನ ಹಿಡಿದು ಕೈಯಲ್ಲಿ ಸುತ್ತಿಕೊಂಡು ಹೆಗಲ ಮೇಲೆ ಹಾಕಿ ಕೊಂಡು ಸುಮಾರು ಅರ್ಧ ಕಿಲೋಮೀಟರ್ ನಷ್ಟು ಓಡಾಡಿದ್ದಾನೆ. ಈ ವೇಳೆ ಮೂರ್ನಾಲ್ಕು ಬಾರಿ ಹಾವು ಕಚ್ಚಿದ್ರು ಇದ್ಯಾವುದಕ್ಕು ಜಗ್ಗದೇ ಎಣ್ಣೆ ಮತ್ತಲ್ಲಿ ತನ್ನ ಹುಚ್ಚಾಟ ಮೇರೆದಿದ್ದಾನೆ.

ಇನ್ನು ಹಾವಿನ ಜೊತೆ ಯುವಕ ಸರಸ ಆಡಲು ಹೋಗಿ ತನ್ನ ಪ್ರಾಣಕ್ಕೆ ಕುತ್ತು ತಂದು ಕೊಂಡಿದ್ದು, ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಾವು ಕಟ್ಟಿಟ್ಟ ಬುತ್ತಿ ಎಂದು ವೈದ್ಯರ ಮೂಲಗಳು ಹೇಳಿವೆ.

RELATED ARTICLES

Related Articles

TRENDING ARTICLES