Monday, December 23, 2024

ಹೊಂಬಾಳೆ ಕಾರ್ತಿ ಜೊತೆ ಕಿಚ್ಚ.. ಅಧಿಕೃತ ಘೋಷಣೆ ಬಾಕಿ

ಸಾಲು ಸಾಲು ಸಿನಿಮಾಗಳ ಫ್ಲಾಪ್​ನಿಂದ ಕಂಗೆಟ್ಟಿದ್ದ ಕಿಚ್ಚ ಸುದೀಪ್, ಕೊನೆಗೂ ರೈಟ್ ಟ್ರ್ಯಾಕ್​ಗೆ ಕಾಲಿಡೋ ಮನ್ಸೂಚನೆ ನೀಡಿದ್ದಾರೆ. ಹೊಂಬಾಳೆಯ ಕಾರ್ತಿಕ್ ಗೌಡ ಜೊತೆ ಕೈಜೋಡಿಸಿ, ಶುಭಸುದ್ದಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಜಿಎಫ್, ಕಾಂತಾರದಂತಹ ಬ್ಲಾಕ್ ಬಸ್ಟರ್ ಹಿಟ್ಸ್ ಕೊಟ್ಟವ್ರ ಜೊತೆ ಕಿಚ್ಚನ ಕರಾಮತ್ತು ಹೇಗಿರಲಿದೆ ಅನ್ನೋದ್ರ ಸ್ಪೆಷಲ್ ಖಬರ್ ನಿಮಗಾಗಿ.

ಕೆಜಿಎಫ್, ಕಾಂತಾರ ಪ್ರೊಡ್ಯೂಸರ್ ಬ್ಯಾನರ್​ನಲ್ಲಿ ಸುದೀಪ್

ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ನಟನೆಗೆ ಫಿದಾ ಆಗದವರೇ ಇಲ್ಲ. ಮನೋಜ್ಞ ನಟನೆಯಿಂದಲೇ ಅಭಿನಯ ಚಕ್ರವರ್ತಿ ಅನ್ನೋ ಬಿರುದು ಪಡೆದವ್ರು ಸ್ಯಾಂಡಲ್​ವುಡ್ ಮಾಣಿಕ್ಯ. ಆದ್ರೆ ಅದ್ಯಾಕೋ ಇತ್ತೀಚೆಗೆ ಅವ್ರ ಟೈಂ ಸರಿಯಿಲ್ಲ. ಯಾವುದೇ ಚಿತ್ರಕ್ಕೆ ಕೈಹಾಕಿದ್ರೂ ನಿರೀಕ್ಷಿತ ಮಟ್ಟದ ಗೆಲುವು ಸಿಗ್ತಿಲ್ಲ. ಪ್ರೇಕ್ಷಕರಿಂದ ಮೆಚ್ಚುಗೆ ಪಡೀತಿಲ್ಲ. ಬಾಕ್ಸ್ ಆಫೀಸ್ ಸೌಂಡ್ ಆಗ್ತಿಲ್ಲ.

ಸೈರಾ ನರಸಿಂಹರೆಡ್ಡಿ, ದಬಾಂಗ್-3, ಕೋಟಿಗೊಬ್ಬ-3 ಹೀಗೆ ಎಲ್ಲವೂ ನೆಲಕಚ್ಚಿದವು. ವಿಕ್ರಾಂತ್ ರೋಣ ಆದ್ರೂ ಕಿಕ್ ಕೊಡುತ್ತೆ ಅಂದ್ಕೊಂಡ್ರೆ ಆ ಭರವಸೆ ಹುಸಿ ಆಯ್ತು. ಮೇಕಿಂಗ್​ನಿಂದ ಸಿನಿಮಾ ಜೀವಂತ ಅನಿಸಿದ್ರೂ, ಕಥೆಯಿಂದ ಕಿಚ್ಚನ ಅಭಿನಯ ಕಾಣದಂತೆ ಮಾಯವಾಯ್ತು.

ವಾಟ್ ನೆಕ್ಸ್ಟ್ ಕಿಚ್ಚ ಅಂದ್ರೆ, ಬಿಲ್ಲ ರಂಗ ಭಾಷ, ಅಶ್ವತ್ಥಾಮ ಎನ್ನಲಾಗ್ತಿತ್ತು. ಆದ್ರೆ ಅದಕ್ಕೂ ಮುನ್ನ ನಂದಕಿಶೋರ್ ಜೊತೆ ಲಾವ ಅನ್ನೋ ಸಿನಿಮಾಗೆ ಕೈಹಾಕಲಿದ್ದಾರೆ ಎನ್ನಲಾಗಿತ್ತು. ಇದೀಗ ಅವೆಲ್ಲವನ್ನ ಮೀರುವಂತಹ ಬಿಗ್ ನ್ಯೂಸ್ ಸಿಕ್ಕಿದೆ. ಹೊಂಬಾಳೆ ಫಿಲಂಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಜೊತೆ ಕಿಚ್ಚನಿರೋ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ.

ಹೌದು.. ಕಾರ್ತಿಕ್ ಗೌಡರನ್ನ ಕಿಚ್ಚ ಸುದೀಪ್ ತಬ್ಬಿರೋ ಫೋಟೋಗೆ ‘ಟು ನ್ಯೂ ಬಿಗಿನಿಂಗ್ಸ್ ಸುದೀಪ್ ಸರ್’ ಅಂತ ಕಾರ್ತಿಕ್ ಅವ್ರು ಮಾಡಿರೋ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗ್ತಿದೆ. ಅಲ್ಲಿಗೆ ಕೆಜಿಎಫ್, ಕಾಂತಾರ ಚಿತ್ರಗಳ ಮೇಕರ್ಸ್​ ಜೊತೆ ಸದ್ಯದಲ್ಲೇ ಕಿಚ್ಚ ಸುದೀಪ್ ಸಿನಿಮಾ ಮಾಡಲಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES