Saturday, November 23, 2024

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕನ ಬೆನ್ನಿಗೆ ನಿಂತ ಕಮಲ್ ಹಸನ್

ತಮಿಳುನಾಡಿನ ಮೂಲ ಜನರ ಧಾರ್ಮಿಕ ಅಸ್ಮಿತೆಯ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. Tamils Are Not Hindu ಎಂಬ ವಾಕ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಸಮಯದಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನೀಡಿರುವ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಿಡುಗಡೆ ಆದ ಬೆನ್ನಲ್ಲೇ ವೆಟ್ರಿಮಾರನ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮುಖಂಡ ಎಚ್. ರಾಜಾ ಇದನ್ನು ಖಂಡಿಸಿದ್ದಾರೆ. ಆದರೆ ಕಮಲ್ ಹಾಸನ್ ವೆಟ್ರಿಮಾರನ್ ಹೇಳಿಕೆಗೆ ಬೆಂಬಲ ನೀಡಿದ್ದಾರೆ.

ವೆಟ್ರಿಮಾರನ್ ಮಾತಿಗೆ ಬಿಜೆಪಿಯ ಎಚ್. ರಾಜಾ ಪ್ರತಿಕ್ರಿಯೆ ನೀಡಿದ್ದಾರೆ ‘ವೆಟ್ರಿಮಾರನ್ ರೀತಿ ನಾನು ಇತಿಹಾಸವನ್ನು ಚೆನ್ನಾಗಿ ಬಲ್ಲವನಲ್ಲ. ಆದರೆ ರಾಜ ರಾಜ ಚೋಳ ನಿರ್ಮಿಸಿದ ಎರಡು ಮಸೀದಿ ಅಥವಾ ಚರ್ಚ್ಗಳನ್ನು ಅವರು ತೋರಿಸಲಿ’ ಎಂದು ಎಚ್. ರಾಜಾ ಹೇಳಿದ್ದಾರೆ. ಈ ಚರ್ಚೆಯಲ್ಲಿ ನಟ ಕಮಲ್ ಹಾಸನ್ ಅವರ ಎಂಟ್ರಿ ಕೂಡ ಆಗಿದೆ. ವೆಟ್ರಿಮಾರನ್ ಹೇಳಿಕೆಯನ್ನು ಕಮಲ್ ಬೆಂಬಲಿಸಿದ್ದಾರೆ. ‘ರಾಜ ರಾಜ ಚೋಳನ ಕಾಲದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ. ಹಿಂದೂ ಅಂತ ಕರೆದಿದ್ದು ಬ್ರಿಟಿಷರು’ ಎಂದಿರುವ ಕಮಲ್ ಹಾಸನ್ ಅವರು, ‘8ನೇ ಶತಮಾನದಲ್ಲಿ ಹಲವು ಧರ್ಮಗಳು ಇದ್ದವು’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES