Monday, December 23, 2024

ಟಾಲಿವುಡ್ ಘೋಸ್ಟ್ ಔಟ್.. ಕನ್ನಡದ ಘೋಸ್ಟ್ ಕಿಕ್​ಸ್ಟಾರ್ಟ್

ಓಲ್ಡ್​ಮಾಂಕ್​ ಸಿನಿಮಾ ಸಕ್ಸಸ್​ ಆಗ್ತಿದ್ದ ಹಾಗೆ ನಟ ಶ್ರೀನಿ, ಹ್ಯಾಟ್ರಿಕ್​ ಹೀರೋ ಶಿವಣ್ಣನಿಗೆ ಬಲೆ ಬೀಸಿದ್ರು. ಸಖತ್​ ಬ್ಯುಸಿ ಇದ್ದ ಬೈರಾಗಿ ಕೂಡ ನೋ ಎನ್ನದೇ ಒಂದೇ ಮಾತಿಗೆ ಯೆಸ್​​ ಅಂದಿದ್ರು. ಶಿವಣ್ಣನ ಬರ್ತ್ ಡೇ ದಿನವೇ ಡಿಫರೆಂಟ್​​​ ಪೋಸ್ಟರ್​​ ರಿಲೀಸ್​ ಮಾಡಿ ಎಲ್ಲರ ಗಮನ ಸೆಳೆದಿದ್ದ ಶ್ರೀನಿ, ಇದೀಗ ಘೋಸ್ಟ್​ ಚಿತ್ರಕ್ಕೆ ಚಾಲನೆ​​ ಕೊಟ್ಟಿದ್ದಾರೆ. ಯೆಸ್​​.. ಘೋಸ್ಟ್​ ಚಿತ್ರದ ಸ್ಪೆಷಲ್​ ಅಪ್ಡೇಟ್ಸ್​​ ತಿಳಿಬೇಕಾ..? ನೀವೇ ಓದಿ.

  • ಘೋಸ್ಟ್​​ ಅಡ್ಡಾಗೆ ಮಲಯಾಳಂ​​ ಸ್ಟಾರ್​​ ಜಯರಾಮ್​​ ಎಂಟ್ರಿ

ಹ್ಯಾಟ್ರಿಕ್​ ಹೀರೋ ಶಿವಣ್ಣ ಸ್ಯಾಂಡಲ್​ವುಡ್​​, ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರೋ ನಟ. ಇದೀಗ ಓಲ್ಡ್​​ಮಾಂಕ್​​​​ ಚಿತ್ರದ ಸಕ್ಸಸ್​​​ಫುಲ್​ ಡೈರೆಕ್ಟರ್​ ಶ್ರೀನಿ ನಿರ್ದೇಶನದಲ್ಲಿ ಡಾ.ಶಿವಣ್ಣ ವಿಭಿನ್ನ ಗೆಟಪ್​ನಲ್ಲಿ ಮಿಂಚಲಿದ್ದಾರೆ. ಈಗಾಗ್ಲೇ ಘೋಸ್ಟ್​ ಚಿತ್ರದ ಪೋಸ್ಟರ್​​​​ ಹುಟ್ಟು ಹಾಕಿರೋ ಕ್ರೇಜ್​​ ನೋಡಿದ್ರೆ ಸಿನಿಮಾ ಸಿಲ್ವರ್​ ಸ್ಕ್ರೀನ್​ ಮೇಲೆ ಧೂಳೆಬ್ಬಿಸೋದು ಗ್ಯಾರಂಟಿ ಅನ್ನಿಸ್ತಿದೆ.

ಘೋಸ್ಟ್​​ ಟೈಟಲ್​ ಟಾಲಿವುಡ್​ನಲ್ಲೂ ಅಬ್ಬರಿಸ್ತಿದೆ. ನಾಗಾರ್ಜುನ್​​​ ಅಭಿನಯದ ಘೋಸ್ಟ್​​​ ಸಿನಿಮಾ ತೆರೆ ಕಂಡು ಕಮಾಲ್​ ಮಾಡ್ತಿದೆ. ಇದೇ ಟೈಟಲ್​ ಮೇಲೆ ಶ್ರೀನಿ ಕರಾಮತ್ತಿನಲ್ಲಿ ಕನ್ನಡದಲ್ಲೊಂದು ಆ್ಯಕ್ಷನ್​​ ಎಂಟರ್​ಟೈನರ್​​​ ಸಿನಿಮಾ ಮೂಡಿ ಬರ್ತಿದೆ. ಈ ಚಿತ್ರಕ್ಕೆ ಸಂದೇಶ್​ ಪ್ರೊಡಕ್ಷನ್​​​ ಕೈ ಜೋಡಿಸಿರೋದ್ರಿಂದ ಇನ್ನಷ್ಟು ಬಲ ಬಂದಿದೆ.

ಘೋಸ್ಟ್​​ ಸಿನಿಮಾದ ಅಪ್ಡೇಟ್ಸ್​​ಗಾಗಿ ಎದುರು ನೋಡ್ತಿದ್ದ ಚಿತ್ರಪ್ರೇಮಿಗಳಿಗೆ ಗುಡ್​​​ ನ್ಯೂಸ್​ ಸಿಕ್ಕಿದೆ. ಚಿತ್ರದ ಸ್ಕ್ರಿಪ್ಟ್​ ಇಟ್ಟು ಪೂಜೆ ಸಲ್ಲಿಸಿರುವ ಚಿತ್ರತಂಡ ಶೂಟಿಂಗ್​ಗೆ ಕಿಕ್​ ಸ್ಟಾರ್ಟ್​ ಕೊಟ್ಟಿದೆ. ಸದ್ಯದಲ್ಲೇ ಸಿನಿಮಾದ ಸ್ಟಾರ್​​​ಕಾಸ್ಟಿಂಗ್​​ ಬಗ್ಗೆ ಅಪ್​ಡೇಟ್ಸ್​ ಕೂಡ ಸಿಗಲಿದೆ. ಪೂಜಾ ಕಾರ್ಯದಲ್ಲಿ ಸಂದೇಶ್​ ನಾಗರಾಜ್​ ಕೂಡ ಭಾಗಿಯಾಗಿದ್ದು ಇಡೀ ಚಿತ್ರತಂಡ ಪಾಲ್ಗೊಂಡಿದೆ.

ಘೋಸ್ಟ್ ಟೀಮ್​ ಮಲಯಾಳಂ​ ಸೂಪರ್​ ಸ್ಟಾರ್​​ ಜಯರಾಮ್​​​​​​ ಅವರನ್ನು ಸಂಪರ್ಕ ಮಾಡಿದ್ದು ಚಿತ್ರತಂಡಕ್ಕೆ ಸೇರ್ಪಡೆ ಆಗೋ ಸಾದ್ಯತೆ ಇದೆ. ಕಿಂಗ್​ ಆಫ್​ ಆಲ್​ ಮಾಸಸ್​ ಅವತಾರದಲ್ಲಿ ಹ್ಯಾಟ್ರಿಕ್​ ಹೀರೋ ಜಗಮಗಿಸಿಲಿದ್ದಾರೆ. ಇದ್ರ ಜತೆಗೆ ಶ್ರೀನಿ ಆರ್ಟಿಫಿಶಿಯಲ್​​​ ಇಂಟೆಲಿಜೆನ್ಸ್​ ತಂತ್ರಜ್ನಾನ ಬಳಸಿ ಸಿಕ್ಕಾಪಟ್ಟೆ ವರ್ಕ್​​ ಔಟ್​ ಮಾಡ್ತಿರೋದ್ರಿಂದ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES