Sunday, December 22, 2024

ಗಂಡನ ವಿರುದ್ಧ ಲವ್​ ಜಿಹಾದ್​ ಆರೋಪ ಮಾಡಿದ ನಟಿ

ಕಿರುತೆರೆ ನಟಿ ಬಾಳಲ್ಲಿ ಬಿರುಗಾಳಿ ಉಂಟಾಗಿದ್ದು, ಮದ್ವೆಯಾದ ಐದೇ ವರ್ಷಗಳಲ್ಲೇ ಸುಂದರಿಗೆ ನರಕ ದರ್ಶನ ಉಂಟಾಗಿದೆ.

ಕನ್ನಡದ ‘ಆಕಾಶದೀಪ’ ಸೀರಿಯಲ್​ನ ನಟಿ ದಿವ್ಯಾ 2017ರಿಂದ ಆರ್ನವ್ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು. ರೀಸೆಂಟ್ ಆಗಿ ಮದ್ವೆ ಆಗಿ, ಮಗು ಆಗ್ತಿರೋ ಸುದ್ದಿ ನೀಡಿದ್ದ ನಟಿ. ‘ಕೆಳದಿ ಕಣ್ಮಣಿ’ ಅನ್ನೋ ತಮಿಳು ಸೀರಿಯಲ್​ನಲ್ಲಿ ಆರ್ನವ್ ಜೊತೆ ದಿವ್ಯಾ ನಟನೆ ಮಾಡಿದ್ದಾರೆ. ಸ್ನೇಹ ಪ್ರೀತಿಗೆ ತಿರುಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಆರ್ನವ್-ದಿವ್ಯಾ, ಹೊಸ ಮನೆ ಖರೀದಿಸಿ, ಶಿಫ್ಟ್ ಆಗ್ತಿರೋದಾಗಿ ಹೇಳಿಕೊಂಡಿದ್ದ ನಟಿ. ಆರ್ನವ್ ಹೆಸರು ಅಮ್ಜದ್ ಖಾನ್ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಇದೀಗ ಗಂಡನಿಂದಲೇ ಕಿರುಕುಳ ಆರೋಪ ಉಂಟಾಗಿದ್ದು, ಈಗಾಗಲೇ ಮದ್ವೆ ಆಗಿ ಡಿವೋರ್ಸ್ ಪಡೆದಿದ್ದ ದಿವ್ಯಾ ಮೊದಲನೇ ಪತಿಯೊಂದಿಗಿನ ದಾಂಪತ್ಯಕ್ಕೆ ಹೆಣ್ಣು ಮಗು ಸಾಕ್ಷಿಯಾಗಿದ್ದು, ಇದೀಗ ಆರ್ನವ್ ಜೊತೆ 2ನೇ ಮದ್ವೆ ಆಗಿ ತಾಯಿ ಆಗಲಿದ್ದಾರೆ.

ದಿವ್ಯಾ ಶ್ರೀಧರ್​​ ಆರೋಪವೇನು..?
2017ರಿಂದ ನಾನು ಮತ್ತು ಅರ್ನವ್ ಲಿವಿಂಗ್​​ ಟು ಗೆದರ್ ಇದ್ದೆವು, 5 ವರ್ಷದಿಂದ ನಾವು ಒಟ್ಟಿಗೆ ಇದ್ದೇವೆ. ಮಗುವಿನ ತರಹ ಅವನಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೇನೆ. ಆದರೆ, ಅವನಿಂದಲೇ ಈಗ ಕಿರುಕುಳ ಉಂಟಾಗಿದೆ. ನಿನ್ನೆ ನನ್ನ ಗಂಡ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದು ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಆಗ ಲೋ ಬಿಪಿಯಾಗಿ ಅಸ್ವಸ್ಥಳಾಗಿದ್ದೆ. ತುಂಬಾ ಸಮಯವಾದ ಮೇಲೆ ನನಗೆ ಪ್ರಜ್ಞೆ ಬಂತು. ನನ್ನ ಗಂಡ ಮನೆಯಲ್ಲೇ ಇದ್ದ. ಆದರೂ ನನ್ನನ್ನು ಆಸ್ಪತ್ರೆಗೆ ಸೇರಿಸಿಲ್ಲ. ನನಗೆ ಪ್ರಜ್ಞೆ ಬಂದ ಮೇಲೆ ಮನೆಯಿಂದ ಹೊರಗಡೆ ಹೋದ. ಅಲ್ಲದೇ ಹೊಟ್ಟೆ ನೋವಿನಿಂದ ನಾನು ನರಳಿದೆ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ವಾಯ್ತು. ಹೊಟ್ಟೆಗೆ ತುಂಬಾ ಪೆಟ್ಟಾಗಿರೋದ್ರಿಂದ ಗರ್ಭಪಾತವಾಗಬಹುದು. ಅವನಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ಆದ್ರೆ ಅವನು ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ. ನನ್ನ ಮೆಸೇಜ್‍ಗೆ ರಿಪ್ಲೈ ಕೂಡ ಮಾಡ್ತಿಲ್ಲ. ನನಗೆ ನನ್ನ ಗಂಡ ಬೇಕು. ನನ್ನ ಮಗುವಿಗೆ ಏನೂ ಆಗಬಾರದು ಎಂದು ವಿಡಿಯೋ ಮೂಲಕ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES