Monday, January 20, 2025

ರಜನಿ ಫ್ಯಾನ್ಸ್​ಗೆ ಸಿಹಿಸುದ್ದಿ.. ಒಂದಾದ್ರು ಧನುಷ್- ಐಶ್ವರ್ಯಾ

ತಲೈವಾ ರಜನಿಕಾಂತ್ ಮಗಳ​​ ಫ್ಯಾಮಿಲಿಯಲ್ಲಿ ಮೂಡಿದ್ದ ಬಿರುಕು ಎಲ್ರಿಗೂ ಗೊತ್ತಿದೆ. ಕಾಲಿವುಡ್​ನಿಂದ ಹಾಲಿವುಡ್​​ವರೆಗೂ ಮಿಂಚ್ತಿರೋ ಧನುಷ್​​​​​​​ ಬಾಳಲ್ಲಿ ಎದ್ದಿರೋ ಬಿರುಗಾಳಿ ತಣ್ಣಗಾಗಲಿಲ್ಲ ಅಂತ ಫ್ಯಾನ್ಸ್​ ಕೂಡ ಬೇಸರವಾಗಿದ್ರು. ಇದೀಗ ಅಭಿಮಾನಿಗಳಿಗೆ ಸರ್​ಪ್ರೈಸ್​​ ನೀಡಿದ್ದಾರೆ ಸೂಪರ್ ಸ್ಟಾರ್ ಅಳಿಯ. ಅದೇನು ಅಂತೀರಾ..? ನೀವೇ ಓದಿ.

  • ಮಾವನ ಮಾತಿಗೆ ಮಣಿದುಬಿಟ್ರಾ ಸೂಪರ್​ ಸ್ಟಾರ್​ ಧನುಷ್..?

ದಿ ಗ್ರೇಟ್​​ ಇಂಡಿಯನ್​ ಸೂಪರ್​ ಸ್ಟಾರ್​ ರಜನಿಕಾಂತ್​​ ಮುದ್ದಿನ ಮಗಳು ಐಶ್ವರ್ಯಾ. ಪ್ರೀತಿಸಿದ ನಂತ್ರ ಮದ್ವೆ ಪ್ರಸ್ತಾಪ ಇಟ್ಟಾಗ್ಲೂ ರಜನಿ ವಿಚಲಿತರಾಗದೆ ಮಗಳ ಮಾತಿಗೆ ಯೆಸ್​ ಅಂದಿದ್ರು. 2004 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಧನುಷ್​​- ಐಶ್ವರ್ಯಾ ಜೋಡಿ 18 ವರ್ಷಗಳ ಕಾಲ ಸುಖ ಸಂಸಾರ ನಡೆಸಿ ಧಿಡೀರ್​​ ಡಿವೋರ್ಸ್​​​ ನಿರ್ಧಾರ ತೆಗೆದುಕೊಂಡ್ರು. ಇ ಸುದ್ದಿ ಧನುಷ್​​​, ರಜನಿಕಾಂತ್​​ ಫ್ಯಾನ್ಸ್​ಗೆ ಆಘಾತ ತಂದಿತ್ತು.

ಯೆಸ್​​​.. ಒಂದು ಕಪ್ಪು ಚುಕ್ಕೆಯಿಲ್ಲದೆ ಬಾಳಿ ಬದುಕಿದ ರಜನಿ ಫ್ಯಾಮಿಲಿಯಲ್ಲಿ ಮೂಡಿದ ಈ ಬಿರುಕಿನಿಂದ ತಲೈವಾ ಅಕ್ಷರಶಃ ಕುಗ್ಗಿ ಹೋಗಿದ್ರು. ಎಲ್ಲೂ ಒಬ್ಬರಿಗೊಬ್ರು ಮೀಡಿಯಾ ಎದ್ರು ಕಾಲೆಳೆದುಕೊಳ್ಳದೆ ಸೈಲೆಂಟ್​ ಆಗಿ ಡಿವೋರ್ಸ್​ ನಿರ್ಧಾರಕ್ಕೆ ಬಂದಿದ್ದು ಅಚ್ಚರಿಗೆ ಕಾರಣವಾಗಿತ್ತು. ಏನೇ ಮನಸ್ತಾಪ ಇದ್ರೂ ಪ್ಲೀಜ್​ ಮಾತನಾಡಿ ಬಗೆಹರಿಸಿಕೊಳ್ಳಿ ಅಂತಾ ಫ್ಯಾನ್ಸ್​​ ಕಮೆಂಟ್​​​ ಮಾಡ್ತಿದ್ರು.

ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ಈ ಜೋಡಿ ಕೈ ಕೈ ಹಿಡಿದೇ ಬರ್ತಿತ್ತು. ಕ್ಯೂಟ್​ ಕಪಲ್​ ಮೇಲೆ ಯಾರ ದೃಷ್ಟಿ ಬೀಳದೆ ಇರಲಿ ಅಂತಾ ಫ್ಯಾನ್ಸ್​ ಕೂಡ ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ರು. ಆದ್ರೆ, ಈ ಜೋಡಿ ಮಾತ್ರ ಒಟ್ಟಾಗಿ ಬಾಳೋಕೆ ಇಷ್ಟವಿಲ್ಲದೆ ಡಿವೋರ್ಸ್​​ ನಿರ್ಧಾರ ತೆಗೆದುಕೊಂಡ್ರು. ಕೊನೆಗೆ ಖುದ್ದಾಗಿ ರಜನಿಕಾಂತ್​ ಕೂಡ ಇಬ್ಬರಿಗೂ ಸಲಹೆ ಕೊಟ್ಟಿದ್ರು ಎನ್ನಲಾಗಿತ್ತು. ಕೊನೆಗೂ ರಜನಿಕಾಂತ್​ ಮಾತಿಗೆ ಮಣಿದು ಜೋಡಿ ಮತ್ತೆ ಒಂದಾಗ್ತಿದ್ದಾರಂತೆ.

ಯೆಸ್​​​.. ಕೊನೆಗೂ ಅಭಿಮಾನಿಗಳ ಹಾರೈಕೆ ಫಲಶೃತಿಯಾಗಿದೆ. ರಜನಿಕಾಂತ್​ ಫ್ಯಾಮಿಲಿ, ಧನುಷ್​ ಫ್ಯಾಮಿಲಿ ಒಟ್ಟಿಗೆ ಕೂತು ಚರ್ಚೆ ಮಾಡಿದ್ದಾರಂತೆ. ಎಲ್ರಿಗೂ ರೋಲ್​​ ಮಾಡೆಲ್​​ ಆಗಿರಬೇಕಾದವ್ರು ನೀವು. ವಿವಾದಗಳಿಗೆ ಈಡಾಗಬೇಡಿ ಎಂಬ ಕಿವಿಮಾತು ಹೇಳಿದ್ದಾರಂತೆ. ಒಟ್ಟಾಗಿರಿ ಎಂಬ ಮಾವನ ಮಾತಿಗೆ ಬೆಲೆಕೊಟ್ಟು ಮತ್ತೆ ಈ ಜೋಡಿ ಒಂದಾಗ್ತಿದೆಯಂತೆ. ಸದ್ಯ ಈ ಕುರಿತು ಇಬ್ರೂ ಅಫಿಶಿಯಲ್​​​ ಆಗಿ ಮೌನ ಮುರಿಯಬೇಕಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES