Monday, December 23, 2024

ಜೋಡೋದಿಂದ ಯಾವುದೇ ಇಂಪ್ಯಾಕ್ಟ್ ಇಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು : ಕಾಂಗ್ರೆಸ್‌ನವರೆಲ್ಲ ಕಾಂಗ್ರೆಸ್ ಅಭಿಯಾನಕ್ಕೆ ಬರ್ತಿದ್ದಾರೆ, ಅದರಲ್ಲಿ ವಿಶೇಷತೆ ಏನಿಲ್ಲ. ಆದ್ದರಿಂದ  ನಮಗೇನು ಸಂಬಂಧವಿಲ್ಲ. ಯಾವುದೇ ಇಂಪ್ಯಾಕ್ಟ್ ಕೂಡ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಅರ್ಧಕಿಲೋ ಮೀಟರ್ ನಡೆದು ವಾಪಸ್ ಹೋಗಿದ್ದಾರೆ. ಸ್ವಾಭಾವಿಕವಾಗಿ ಪ್ರತಿಯೊಬ್ಬರು ಅವರ ಪಕ್ಷಕ್ಕಾಗಿ ಕೆಲಸ ಮಾಡ್ತಾರೆ. ಇದರಿಂದ ಯಾವುದೇ ಇಂಪ್ಯಾಕ್ಟ್ ಆಗೋದಿಲ್ಲ. ನಾಳೆ ಪ್ರಿಯಾಂಕಾ ಗಾಂಧಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ನಮಗೇನು ತೊಂದರೆಯಿಲ್ಲ. ಬಿಜೆಪಿ ಕೂಡ 6 ಸಮಾವೇಶಗಳು ಮಾಡ್ತೀವಿ. ಒಂದು ತಿಂಗಳ ಮುಂಚೆ ನಾವು ಕೂಡ ರಾಜ್ಯ ಪ್ರವಾಸಕ್ಕೆ ತೀರ್ಮಾನಿಸಿದ್ವಿ. ಅಧಿವೇಶನದ ಹಿನ್ನೆಲೆ ಮುಂದೂಡಲಾಗಿತ್ತು. ಈಗ ನಾವು ಕೂಡ ಯಾತ್ರೆ ಪ್ರಾರಂಭ ಮಾಡ್ತೀವಿ ಎಂದರು.

ಇನ್ನು ನಾಗರಹೊಳೆಯ ಆನೆಗೆ ಗಾಯವಾಗಿರುವ ಕುರಿತು ರಾಹುಲ್​ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ನಾಗರಹೊಳೆಯಲ್ಲಿ ಆನೆಗೆ ಗಾಯವಾಗಿರುವ ವಿಚಾರವಾಗಿ ಪತ್ರ ಬರೆದಿದ್ದಾರೆ. ಆನೆ ಮತ್ತು ಮರಿಗೆ ಗಾಯವಾಗಿದೆ. ಇನ್ನು ಸ್ವಲ್ಪ ಹೊತ್ತಲ್ಲಿ ಅರಣ್ಯ ಅಧಿಕಾರಿಗಳಿಂದ ಎಲ್ಲಾ ಮಾಹಿತಿ ತರಿಸಿಕೊಳ್ತೀನಿ. ಆನೆಗಳಿಗೆ ಏನೆಲ್ಲಾ ಮಾಡಬಹುದು, ಯಾವೆಲ್ಲ ಚಿಕಿತ್ಸೆ ನೀಡಬೇಕು ಎಂದು ಪರಿಶೀಲನೆ ಮಾಡಿ ಚಿಕಿತ್ಸೆ ನೀಡ್ತೀವಿ. ರಾಹುಲ್ ಗಾಂಧಿ ಪತ್ರಕ್ಕೆ ನಾನು ಸ್ಪಂದಿಸುತ್ತೇನೆ. ಮಾನವೀಯ ಮೌಲ್ಯದಡಿ ಅದಕ್ಕೆ ಸ್ಪಂದಿಸುವ ಅವಶ್ಯಕತೆ ಇದೆ ಎಂದರು.

RELATED ARTICLES

Related Articles

TRENDING ARTICLES