Wednesday, January 22, 2025

ರಾಹುಲ್ ಗಾಂಧಿ ತಲೆ ಅಂದ್ರೆ ರೈಲ್ವೆ ಹಳಿ ಇದ್ದಂತೆ : ಸಿ.ಸಿ.ಪಾಟೀಲ

ಗದಗ : ಭಾರತವನ್ನ ವಿಭಜನೆ ಮಾಡುವಂಥ‌ ವಿಚಿತ್ರಕಾರಕ ಶಕ್ತಿಗಳನ್ನ ಒಗ್ಗೂಡಿಸುವ ಯಾತ್ರೆ ರಾಹುಲ್ ಗಾಂಧಿ ಮಾಡ್ತಿದಾರೆ ಎಂದು ಗದಗನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನಲ್ಲಿಯೂ ಆತ್ಮಸಾಕ್ಷಿ ಇದ್ದೋರಿದಾರೆ. ಗುಲಾಂ‌ನಬಿ ಆಜಾದ್, ಕಪಿಲ್ ಸಿಬಲ್, ಬ್ರಿಜೇಶಕಾಳಪ್ಪ ಇವರೆಲ್ಲ‌ ಯಾಕೆ ಪಕ್ಷ ಬಿಟ್ಟು ಹೋದರು. ಕರ್ನಾಟಕದವರಿಗೆ ಅಧ್ಯಕ್ಷ ಸ್ಥಾನ ಸಿಗುತ್ತೆ‌ ಅನ್ನೋದಕ್ಕೆ ಸಂತೋಷ ಪಡೋಣ. ಇವರು ಅಲ್ಲಿಯೇ ಹೋಗೋದು,ಅಲ್ಲಿಯೇ ಸಹಿ ಮಾಡಿ ಬರೋದು, ಇದರಿಂದ ಭಾರತೀಯ ಜ‌ನತಾ ಪಕ್ಷ ಒಂದಿಷ್ಟು ವಿಚಲಿತಗೊಳ್ಳುವದಿಲ್ಲ. ಭಾರತ್‌ ಜೋಡೋ ಹೆಸರಿಟ್ಟವರಿಗೆ ಸತ್ಕಾರ‌ ಮಾಡಬೇಕು ಎಂದರು.

ಇನ್ನು, ಭಾರತ್‌ ಜೋಡೋ ವಿಂಗಡನೆ, ವಿಭಜನೆಯಾದಾಗ ಬರುತ್ತೆ. ಭಾರತದಿಂದ ಜಮ್ಮುಕಾಶ್ಮೀರವನ್ನ ಬೇರೆ ಮಾಡಿಟ್ಟಿದ್ದರು ಇವರ ತಾತ,ಮುತ್ತಾತ ನಂತ್ರ ಬಂದಂಥ ಎಲ್ಲ ಕಾಂಗ್ರೆಸ್ ಪ್ರಧಾನಿಗಳು ಅದಕ್ಕೆ ಪೂರಕವಾಗಿ ನೀರು,ಗೊಬ್ಬರ ಹಾಕಿ ಬೆಳೆಸಿದರು. ಜವಾಹರ್ ಲಾಲ್ ನಿಂದು ಹಿಡಿದು ಮನ್ ಮೋಹನ್ ಸಿಂಗ್​​ವರೆಗೂ ಅದನ್ನೇ ಮಾಡಿದ್ರು. ದೇಶದ ಅಂಗವಾದ ಕಾಶ್ಮೀರಕ್ಕೆ ಹೋಗದ ಪರಿಸ್ಥಿತಿ ಇತ್ತು. ಯೇ ಭಾರತ್ ಜೋಡೋ? ಯಾ ತೋಡೋ? ಮೋದಿ ಹಾಗೂ ಅಮಿತ್ ಶಾ ಆರ್ಟಿಕಲ್ 370,375A ತೆಗೆದು ಹಾಕಿದ್ರು. ಕಾಶ್ಮೀರವನ್ನ ಭಾರತದ ಅವಿಭಾಜ್ಯ‌ ಅಂಗ ಮಾಡಿದ್ರು ಅಖಂಡ ಭಾರತ ಇದ್ರೆ ಮೊಹ್ಮದ್ ಅಲಿ‌ ಜಿನ್ನಾ ನನಗೆಲ್ಲಿ ಕುತ್ತು ತರ್ತಾನೆ ಅಂತ ನೆಹರೂ ಭಾರತ‌ ವಿಭಜನೆ ಮಾಡಿದ್ರು. ಯಾರು ಭಾರತವನ್ನು ವಿಭಜನೆ ಮಾಡಿದಾರೋ ಅವರು ಇಂದು ಭಾರತ ಜೋಡೋ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದಲ್ಲದೇ, ಹಿಂದುಸ್ಥಾನ ತುಕಡೆ ಕರೆಂಗೇ..ಇನ್ಶೆ‌ ಅಲ್ಲಾ ಅನ್ನುವ ಕನ್ಹಯ್ಯಲಾಲ್ ಭಾರತ‌ ಜೋಡೋ ಯಾತ್ರೆಯಲ್ಲಿ, ಭಾರತವನ್ನ ವಿಭಜನೆ ಮಾಡುವಂಥ‌ ವಿಚಿತ್ರಕಾರಕ ಶಕ್ತಿಗಳನ್ನ ಒಗ್ಗೂಡಿಸುವ ಯಾತ್ರೆ ರಾಹುಲ್ ಗಾಂಧಿ ಮಾಡ್ತಿದ್ದಾರೆ. ಅಂಥಹ ಪುಣ್ಯಾತ್ಮನಿಗೆ ನಮ್ಮ ರಾಜ್ಯದ ಇಬ್ಬರು ನಾಯಕರು ಕುಣಿಯುತ್ತಾ ಸಾತ್ ಕೊಡ್ತಿದ್ದಾರೆ. ವ್ಯಾಪಕ PFI ಸಂಘಟನೆ, ಪೊಲೀಸರ ರೈಫಲ್ಗಳು ಎಲ್ಲಿ ಕಳುವಾಗಿಯೋ,ಎಲ್ಲಿ ಜೀವಂತ ಗುಂಡುಗಳು ಕಳುವಾಗಿವೆಯೋ ಅಂಥ ಕೇರಳದಿಂದ ಇವರು ಯಾತ್ರೆ ಪ್ರಾರಂಭ ಮಾಡಿದ್ದಾರೆ. ಹಿಂದುಸ್ಥಾನದ ಬಗ್ಗೆ ಕೀಳಾಗಿ‌ ಮಾತನಾಡುವ ಪಾದ್ರಿ ಜೊತೆ ಇವರು ಸಂವಾದ ಮಾಡ್ತಾರೆ ಎಂದು ಗದಗನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

RELATED ARTICLES

Related Articles

TRENDING ARTICLES