Wednesday, January 22, 2025

ಗುಜರಿಗೆ ಸೇರುತ್ತಿರುವ ಬಸ್‌ಗೂ ಬರಲಿದೆ ಸಿಸಿಟಿವಿ..!

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಸುರಕ್ಷಿತ ಪ್ರಯಾಣ ಅಂದರೆ ಅದು ಬಿಎಂಟಿಸಿ ಬಸ್ ಗಳು. ನಗರದಲ್ಲಿ ರಾತ್ರಿಯಿಡೀ ಮಹಿಳೆಯರು ಓಡಾಟ ನಡೆಸುತ್ತಾರೆ.ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಬಸ್ ಗಳಲ್ಲಿ ಸಿಸಿ ಟಿವಿ ಅಳವಡಿಸಲು ಬಿಎಂಟಿಸಿ ಮುಂದಾಗಿದೆ. ಇದಕ್ಕಾಗಿ ನಿರ್ಭಯಾ ಯೋಜನೆ ಅಡಿ ಕೇಂದ್ರ ದಿಂದ 60 ಕೋಟಿ ಬಿಎಂಟಿಸಿಗೆ ಬಂದಿತ್ತು. ಆದ್ರೆ, ಈ ಹಣವನ್ನು ಬಿಎಂಟಿಸಿ ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ.ಈಗಲೂ ಆಗಲೂ ಗುಜರಿಗೆ ಸೇರೋ ಬಸ್‌ಗೆಲ್ಲಾ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

ನಿಗಮದ ನಿಯಮದ ಪ್ರಕಾರ 9 ಲಕ್ಷ ಕಿಲೋ ಮೀಟರ್ ಓಡಿದ ಬಸ್‌ಗಳು ಗುಜರಿಗೆ ಸೇರಬೇಕು.ಆದ್ರೆ, 8 ಲಕ್ಷ ಕಿಲೋಮೀಟರ್ ಓಡಿದ ಬಸ್ ಗೆಲ್ಲಾ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.ಹೊಸ ಬಸ್ ಗಳಿಗೆ ಸಿಸಿ ಕ್ಯಾಮರಾ ಆಳವಡಿಕೆ ಮಾಡುವ ಕೆಲಸ ಮಾಡ್ತಿಲ್ಲ.ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ..ಆದ್ರೆ, ಬಿಎಂಟಿಸಿ ಮಾತ್ರ ಬೇರೇನೋ ಕಥೆ ಹೇಳ್ತಿದೆ.1800 ಬಸ್ ಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.ಸದ್ಯ ಹಗಲು ರಾತ್ರಿ ಎನ್ನದೆ ಎಲ್ಲಾ ಬಸ್ ಗಳಿಗೂ ಕ್ಯಾಮರಾ ಅಳವಡಿಕೆ ಮಾಡುತ್ತೇವೆ ಅಂತ ಹೇಳ್ತಿದೆ.

ಒಟ್ಟಿನಲ್ಲಿ ಮಹಿಳೆಯ ಸುರಕ್ಷತೆಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಕೇಂದ್ರ ಸರ್ಕಾರ ಕೋಟಿ ಕೋಟಿ ಹಣ ಕೊಟ್ಟಿದೆ.ಆದ್ರೆ, ಬಿಎಂಟಿಸಿ ಇದನ್ನು ಸರಿಯಾಗಿ ಬಳಸಿಕೊಳ್ಳದೆ ಗುಜರಿ ಬಸ್‌ಗಳಿಗೆ ಸೇರೋ ಬಸ್‌ಗಳಿಗೂ ಸಿಸಿ ಟಿವಿ ಶೃಂಗಾರ ಮಾಡೋಕೆ ಹೊರಟಿರೋದು ಅಸಮರ್ಪಕ ಆಡಳಿತಕ್ಕೆ ಹಿಡಿತ ಕೈಕನ್ನಡಿಯಾಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES