Saturday, June 15, 2024

‘ನಮ್ಮ ಕ್ಲಿನಿಕ್’​ಗಳಿಗೆ ಸಚಿವ ಸುಧಾಕರ್​ ಭೇಟಿ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರೋ 243 ನಮ್ಮ ಕ್ಲಿನಿಕ್​ಗಳಿಗೆ ಆರೋಗ್ಯ ಸಚಿವ ಸುಧಾಕರ್ ಭೇಟಿ ಕೊಟ್ಟಿದ್ದಾರೆ.

ಪರಿಶೀಲನೆ ಬಳಿಕ ಮಾತನಾಡಿದ ಅವರು, ಪ್ರತಿ ಏರಿಯಾದಲ್ಲೂ ನಮ್ಮ ಕ್ಲಿನಿಕ್ ಆರಂಭಗೊಳ್ತಿದೆ. ಮಹಾಲಕ್ಷ್ಮಿ ಪುರಂನಲ್ಲಿ ನಮ್ಮ ಕ್ಲಿನಿಕ್ ಮಾಡೆಲ್ ಕಲರ್ ಕಾಂಬಿನೇಷನ್ ರೆಡಿಯಾಗಿದೆ. ಇದೇ ರೀತಿ 438 ಕ್ಲಿನಿಕ್ ರಾಜ್ಯಾದ್ಯಂತ ಆರಂಭವಾಗಲಿದೆ. 243 ಕ್ಲಿನಿಕ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರಲಿದೆ. 163 ವೈದ್ಯರ ನೇಮಕ ಬಿಬಿಎಂಪಿ ವ್ಯಾಪ್ತಿಗೆ ಆಗಿದೆ. 1 ಕ್ಲಿನಿಕ್‌ನಲ್ಲಿ 4 ಸಿಬ್ಬಂದಿ ಇರಲಿದ್ದಾರೆ. ವೈದ್ಯರು ಮಾತ್ರ 243ರಲ್ಲಿ 163 ಅಧೀಕೃತವಾಗಿ ನೇಮಕ ಆಗಿದೆ. ಬಾಕಿ 83 ಈಗಾಗಲೇ ನೋಟಿಫೀಕೇಶನ್ ಹೊರಡಿಸಲಾಗಿದೆ. ಒಂದು ವಾರದಲ್ಲಿ ನೇಮಕ ಆಗಲಿದೆ.

ನಮ್ಮ ಕ್ಲಿನಿಕ್ ಅತ್ಯಂತ ಬಡತನ ರೇಖೆಗಿಂತ ಕೆಳಗಿರೋ, ಗುಡಿಸಲು ನಿವಾಸಿಗಳಿಗೆ ಅನುಕೂಲ ಆಗುತ್ತೆ. ಟೆಲಿಮೆಡಿಸಿನ್ ಸೇವೆ ಕೂಡ ಆರಂಭಿಸಲಾಗುತ್ತೆ. ಪಿಎಚ್‌ಸಿ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ಆರ್ಥಿಕ ಸಹಕಾರ ನೀಡಿದೆ. ಹೆಚ್ಚು ಜನ ಬಂದು ತಪಾಸಣೆ ಮಾಡಿಸಿಕೊಳ್ಳಲು ಕೋರುತ್ತೇನೆ ಎಂದರು.

RELATED ARTICLES

Related Articles

TRENDING ARTICLES