Monday, January 20, 2025

ಕಂದಾಯ ಅಧಿಕಾರಿ ಮುನಿಸ್ವಾಮಿಯನ್ನು ಅಮಾನತುಪಡಿಸಿದ BBMP

ಬೆಂಗಳೂರು : ಪವರ್ ಟಿವಿ ವರದಿಗೆ ಈಗ ಬಿಗ್ ಇಂಪ್ಯಾಕ್ಟ್ ಸಿಕ್ಕಿದ್ದು, ಬಿಬಿಎಂಪಿ ಹೇರೋಹಳ್ಳಿ ವಾಡ್೯ ನ ಕಂದಾಯ ಅಧಿಕಾರಿ ಆರ್. ಐ ಮುನಿಸ್ವಾಮಿ ಅವರನ್ನು ಅಮಾನತು ಮಾಡಿದ್ದಾರೆ.

ಇನ್ನು, ಲಂಚಾವತಾರದ ಬಗ್ಗೆ ಪವರ್ ಟಿವಿ ಪವರ್ ಫುಲ್ ಸುದ್ದಿ ಪ್ರಸಾರ ಮಾಡಿತ್ತು. ಇನ್ನೂ ಆರ್. ಐ ಮುನಿಸ್ವಾಮಿ ಖಾತೆ ಬದಲಾವಣೆಗೆ ರಾಜಾರೋಷವಾಗಿ 20 ಸಾವಿರಾರ ಲಂಚ ಪಡೆದಿದ್ದು. ಪವರ್ ಟಿವಿಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಅದನ್ನ ಗಮನಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡಲೇ ಲಂಚಬಾಕ ಅಧಿಕಾರಿಯ ಅಮಾನತ್ತಿಗೆ ಆಡಳಿತ ವಿಭಾಗಕ್ಕೆ ಆದೇಶ ನೀಡಿದ್ರು. ಇದರಿಂದ ಆರ್. ಐ ಮುನಿಸ್ವಾಮಿ ಯನ್ನ ಬಿಬಿಎಂಪಿ ಅಮಾನತ್ತು ಮಾಡಿ ಆದೇಶ ಹೊರಡಿಸಿರೋದು‌ ಪವರ್ ಟಿವಿ ವರದಿಗೆ ಸಿಕ್ಕ ಜಯ ಅಂತ ಹೇಳಬಹುದು.

RELATED ARTICLES

Related Articles

TRENDING ARTICLES