‘ಆದಿಪುರುಷ್’ ಟೀಸರ್ ನೋಡಿ ಕೆಂಡಕಾರಿದ ಬಿಜೆಪಿ ನಾಯಕರು ಹಿಂದೂ ಧರ್ಮದ ವ್ಯಕ್ತಿಗಳನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರಿಂದ ಚಿತ್ರ ನಿರ್ದೇಶಕರ ವಿರುದ್ಧ ಕಿಡಿ ಕಾಡಿದ್ದು, ಕೂಡಲೇ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಧ್ಯಪ್ರದೇಶ ಗೃಹ ಸಚಿವರಿಂದ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಬಿಜೆಪಿ ಆಕ್ರೋಶಕ್ಕೆ ತಿರುಗೇಟು ನೀಡಿದ ನಿರ್ದೇಶಕ ಓಂ ರಾವುತ್, ನನಗೆ ಬಿಜೆಪಿ ನಾಯಕರ ಆಕ್ರೋಶದಿಂದ ಅಚ್ಚರಿಯಾಗಿಲ್ಲ. ಆದಿಪುರುಷ್ ಕಿರುತೆರೆಗಾಗಿ ಮಾಡಿದ್ದಲ್ಲ ಎಂದು ಡೈರೆಕ್ಟರ್ ಓಂ ರಾವುತ್ ಹೇಳಿದರು.
ಏನಿದು ‘ಆದಿಪುರುಷ್’ ವಿವಾದ..?
ಆದಿಪುರುಷ್ನಲ್ಲಿ ರಾಮನ ಪಾತ್ರ ಮಾಡಿರುವ ಪ್ರಭಾಸ್, ‘ರಾವಣ’ನಾಗಿ ಕಾಣಿಸಿಕೊಂಡಿರುವ ಸೈಫ್ ಅಲಿ ಖಾನ್ ಸೀತಾ ಮಾತೆಯಾಗಿ ಕೃತಿ ಸನೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ದೇವರ ಪಾತ್ರಗಳನ್ನು ಕಾರ್ಟೂನ್ನಂತೆ ತೋರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಹಿಂದೂ ದೇವತೆಗಳ ಉಡುಪು ತೋರಿಸಲಾಗಿರುವ ರೀತಿ ಸರಿಯಿಲ್ಲ, ಹನುಮಾನ್ ಚರ್ಮ ಧರಿಸಿದಂತೆ ತೋರಿಸಲಾಗಿದೆ. ದೇವರ ವೇಷಭೂಷಣಗಳು ಶಾಸ್ತ್ರಗಳಲ್ಲಿ ಬೇರೆ ರೀತಿ ಇದೆ ಎನ್ನುತ್ತಿರುವ ಬಿಜೆಪಿ, ಚಿತ್ರದಲ್ಲಿನ ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತಿವೆ, ಸೈಫ್ ಅಲಿಖಾನ್ ರಾವಣದ ಪಾತ್ರಕ್ಕೂ ನೆಟ್ಟಿಗರಿಂದ ಟೀಕಾ ಪ್ರಹಾರ ಮಾಡಿದ್ದು, ಸೈಫ್ ಅಲ್ಲಾವುದ್ದೀನ್ ಖಿಲ್ಜಿಯಂತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.