Thursday, December 19, 2024

ಕೋಲಾರದಲ್ಲಿ ದಲಿತರು-ಸವರ್ಣಿಯರ ನಡುವೆ ಗಲಾಟೆ.!

ಕೋಲಾರ; ಇಡೀ‌ ರಾಜ್ಯ ದಸರಾ ಹಬ್ಬದ ಖುಷಿಯಲ್ಲಿರುವಾಗ ದಲಿತರ ಮೇಲೆ ಉತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ದೌರ್ಜನ್ಯಕ್ಕೆ ಒಳಗಾದ ಘಟನೆ ಮಾಲೂರು ತಾಲ್ಲೂಕಿನ ದಾನವಹಳ್ಳಿ‌ಯಲ್ಲಿ ನಡೆದಿದೆ. ಇತ್ತೀಚಿಗೆ ದಲಿತ ಕುಟುಂಬಕ್ಕೆ ಬಹಿಷ್ಕಾರ ಪ್ರಕರಣ ಮಾಸುವ ಮನ್ನವೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ದಸರಾ ಹಬ್ಬದ ಪ್ರಯುಕ್ತ ಗಂಗಮ್ಮ, ಕಾಟೇರಮ್ಮ ದೇವಿಯ ಉತ್ಸವವನ್ನ ದಾನವಹಳ್ಳಿ‌ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸವರ್ಣಿಯರಿಂದ ದಲಿತ ಮನೆಗಳ ಬಳಿ‌ ಹಾಗೂ ದಲಿತ ಬೀದಿಗಳ‌ ಕಡೆ ದೇವರ ಉತ್ಸವ ಬರುವುದಿಲ್ಲ ಎಂದು ದೌರ್ಜನ್ಯ ಆರೋಪ ಕೇಳಿಬಂದಿದೆ.

ಈ ವೇಳೆ ದಲಿತ ಸಮುದಾಯವರಿಂದ ಗ್ರಾಮ ದೇವತೆಯನ್ನ ನಮ್ಮ ಬೀದಿ ಹಾಗೂ ಮನೆಗಳ ಬಳಿ ಬರಬೇಕೆಂದು ಒತ್ತಾಯಿಸಲಾಯಿತು. ಇದರಿಂದ ಕೋಪಗೊಂಡ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ.

ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಹಲ್ಲೆಗೈಯಲಾಗಿದೆ ಎಂದು 8 ಮಂದಿ ವಿರುದ್ದ ದಲಿತ ದೌರ್ಜನ್ಯ ಹಾಗೂ ಜಾತಿ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES