Monday, December 23, 2024

ಭಾರತ ಮೂಲದ ಔಷಧಿ ಕುಡಿದು 66 ಮಕ್ಕಳು ಸಾವು

ಆಫ್ರಿಕಾ : ಶೀತದಿಂದ ಬರುವ ಕೆಮ್ಮಿನ ನಿಯಂತ್ರಣಕ್ಕೆ ಬಳಸುವ ಭಾರತದಲ್ಲಿ ತಯಾರಾದ ಔಷಧಗಳನ್ನು ಸೇವಿಸಿ ಆಫ್ರಿಕಾದ ಗಾಂಬಿಯಾ ದೇಶದಲ್ಲಿ 66ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ.

ಇನ್ನು, ಈ ಔಷಧಗಳ ಬಗ್ಗೆ ಎಚ್ಚರದಿಂದ ಇರುವಂತೆ ಸಂದೇಶವನ್ನು ರವಾನಿಸಿದೆ. ಈ ಮಕ್ಕಳ ಸಾವಿಗೆ ಕಿಡ್ನಿ ವೈಫಲ್ಯವೇ ಮುಖ್ಯ ಎಂದು ಗುರುತಿಸಿರುವ ಆರೋಗ್ಯ ಸಂಸ್ಥೆಯು ಈ ಔಷಧಗಳ ಬಳಕೆಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸೂಚಿಸಿದೆ.

ಹರಿಯಾಣ ಮೂಲದ ‘ಮೈಡನ್ ಫಾರ್ಮಾಸ್ಯುಟಿಕಲ್ಸ್​ ಲಿಮಿಟೆಡ್’ ತಯಾರಿಸಿರುವ ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ ಔಷಧಗಳು ಈ ಅನಾಹುತಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೊಸ್ ಅಧನೊಮ್ ಘೆಬ್ರಿಯೆಸಸ್ ಎಚ್ಚರಿಸಿದ್ದಾರೆ.

RELATED ARTICLES

Related Articles

TRENDING ARTICLES