ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಅವರ ತಾಯಿ ಮತ್ತೊಂದು ಕಿರಿಕ್ ಮಾಡಿಕೊಂಡ ಹಿನ್ನಲೆಯಲ್ಲಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ಇತ್ತೀಚಿಗೆ ಬೆಂಗಳೂರಿನ ಅಲೆನ್ಸ್ ವಿವಿಗೆ ಅಕ್ರಮವಾಗಿ ನುಗ್ಗಿ ರೌಡಿಗಳಿಂದ ಧಾಂದಲೆ ಮಾಡಿದ್ದರು. ಅಲ್ಲದೇ, ಇಲ್ಲೊಬ್ಬ ಮಹಿಳೆ ಕಪಾಳ ಮೋಕ್ಷ ಮಾಡಿದ್ದರು. ಇದೆಲ್ಲಾ ಬೆಳವಣಿಗೆ ನಡುವೆ ಗಂಡನೆ ಮನೆಗೆ ಹೋಗಿ ನಟಿ ಶ್ರೀಲಿಲಾ ಅವರ ತಾಯಿ ಕಿರಿಕ್ ಮಾಡಿಕೊಂಡಿದ್ದಾರೆ.
20 ವರ್ಷದಿಂದ ಗಂಡನಿಂದ ದೂರ ಇರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರು ತಮ್ಮ ಗಂಡನ ಮನೆಯ ಬೀಗ ಮುರಿದು ಅಕ್ರಮವಾಗಿ ಮನೆಯೊಳಗೆ ಪ್ರವೇಶ ಪಡೆದು ದಾಂಧಲೆ ಮಾಡಿದ್ದಾರೆ. ಸ್ವರ್ಣಲತಾ ಹಾಗೂ ಗಂಡನ ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ಇರುವಾಗಲೇ ಮನೆಗೆ ನುಗ್ಗಿ ಧಾಂಧಲೆ ನಡೆಸಿದ್ದಾರೆ.
ಈ ಸಂಬಂಧ ನಟಿ ಶ್ರೀಲಿಲಾ ತಾಯಿ ಸ್ವರ್ಣಲತಾ ವಿರುದ್ಧ ಗಂಡ ಅಕ್ರಮವಾಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಅಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.