Monday, December 23, 2024

ಪೊಲೀಸ್​ ಠಾಣೆಯಲ್ಲಿ ಆಯುಧ ಪೂಜೆ; ಮುಸ್ಲಿಂ PSI ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ

ವಿಜಯಪುರ; ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್ಐ ಆರೀಫ ಮುಷಾಪುರಿ ಅವರು ವಿಜಯದಶಮಿಯ ಆಯುಧ ಪೂಜೆ ಹಿನ್ನೆಲೆ ಸ್ವತಃ ತಾವೇ ಶ್ವೇತ ವಸ್ತ್ರಧಾರಿಯಾಗಿ, ಹಣೆಗೆ ಕುಂಕುಮದ ತಿಲಕ ಇಟ್ಟುಕೊಂಡು, ಕುಂಬಳಕಾಯಿ ಒಡೆದು, ನಾಡದೇವಿಗೆ ಮಂಗಳಾರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಅಲ್ಲದೇ ಕೋಮು ಸೌಹಾರ್ದತೆಯ ಸಂದೇಶವನ್ನೂ ಸಾರಿ ಸಮಾಜದ ಗಮನ ಸೆಳೆದಿದ್ದಾರೆ.

ಬಂದೂಕುಗಳು, ವೈರಲೆಸ್ ಯಂತ್ರಗಳು, ಸಿಸಿ ಕ್ಯಾಮೆರಾ ಸಲಕರಣೆ, ಪೊಲೀಸ್ ವಾಹನಗಳು ಮುಂತಾದವುಗಳನ್ನು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದ್ದು ಪಿಎಸ್ಐ ಆರೀಫ ಅವರ ಹೆಚ್ಚು ಜನಾಕರ್ಷಕವಾಗಿತ್ತು.

ಇನ್ನೂ ಠಾಣೆಯ ಮುಂದೆ ಸುಂದರವಾದ ರಂಗೋಲಿ ಬಿಡಿಸಿ, ಬಲೂನುಗಳಿಂದ ಅಲಂಕರಿಸಿ ತಳಿರು ತೋರಣ ಕಟ್ಟಿ ದೇವಸ್ಥಾನದಂತೆ ಬಿಂಬಿಸಿ ನೋಡುಗರಿಗೆ ಪೂಜ್ಯನೀಯ, ಗೌರವದ ಭಾವನೆ ಬರುವಂತೆ ಮಾಡಲಾಗಿತ್ತು. ಮುಸ್ಲಿಂ ಪಿಎಸ್ಐ ಒಬ್ಬರ ಈ ವಿಶೇಷ ಕಾಳಜಿ, ಆಚರಣೆ ಸಾಕಷ್ಟು ಗಮನ ಸೆಳೆದು ಇಡೀ ಪಟ್ಟಣದಾದ್ಯಂತ ಚರ್ಚೆಯ ವಿಷಯವಾಗಿತ್ತು.

ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮವಸ್ತ್ರದಲ್ಲಿ, ಕರ್ತವ್ಯದಲ್ಲಿರದ ಸಿಬ್ಬಂದಿ ಶ್ವೇತವಸ್ತ್ರದಲ್ಲಿ, ಮಹಿಳಾ ಪೊಲೀಸ್, ಪುರುಷ ಪೊಲೀಸರ ಪತ್ನಿಯರು ಇಲಕಲ್ಲ ಸೀರೆ ತೊಟ್ಟು ಪಾಲ್ಗೊಂಡಿದ್ದು ವಿಶೇಷ ಮೆರುಗು ನೀಡಿತ್ತು. ಸಿಪಿಐ ಆನಂದ ವಾಘ್ಮೋಡೆ, ಎಸೈಗಳು ಎಲ್ಲ ರೀತಿಯ ಸಹಕಾರ ನೀಡಿ ಆಯುಧ ಪೂಜೆ ಸಂಪ್ರದಾಯಕ್ಕನುಗುಣವಾಗಿ ನಡೆಯುವಂತೆ ನೋಡಿಕೊಂಡರು.

RELATED ARTICLES

Related Articles

TRENDING ARTICLES