Wednesday, January 15, 2025

LED ಟಿವಿ ಸ್ಫೋಟಕ್ಕೆ ಗೋಡೆ ಕುಸಿತ; ಬಾಲಕ ಮೃತ್ಯು

ಉತ್ತರ ಪ್ರದೇಶ: ಮನೆಯೊಂದರಲ್ಲಿ ಎಲ್‌ಇಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕ ಸಾವನ್ನಪ್ಪಿ, ಆತನ ತಾಯಿ, ಅತ್ತಿಗೆ ಮತ್ತು ಸ್ನೇಹಿತ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಇನ್ನು ಈ ಸ್ಫೋಟಕಕ್ಕೆ ಮನೆಯ ಗೋಡೆಯ ಒಂದು ಭಾಗ ಕೂಡ ಕುಸಿದಿದ್ದು, ಬಾಲಕ ಓಮೇಂದ್ರಗೆ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಸಾವಿಗೀಡಾದ ಓಮೇಂದ್ರ ಅವರ ತಾಯಿ, ಸೊಸೆ ಮತ್ತು ಸ್ನೇಹಿತ ಕರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಗಾಜಿಯಾಬಾದ್ ಪೊಲೀಸ್ ಅಧಿಕಾರಿ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.

ಈ ಸಂಬಂಧ ಮಾತನಾಡಿದ ಪಕ್ಷದ ಮನೆಯವರಾದ ವಿನಿತಾ ಅವರು ತನಗೆ ದೊಡ್ಡ ಶಬ್ದ ಕೇಳಿಸಿತು. ಸಿಲಿಂಡರ್ ಸ್ಫೋಟಗೊಂಡಿದೆ ಎಂದು ನಾನು ಭಾವಿಸಿದ್ದೇವು. ಆದರೆ ಎಲ್​ಇಡಿ ಟಿ ಸ್ಪೋಟಗೊಂಡು ಪಕ್ಕದ ಗೋಡೆ ಸಹ ಕುಸಿದಿದೆ ಎಂದರು.

RELATED ARTICLES

Related Articles

TRENDING ARTICLES