ತೆಲಂಗಾಣ: ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಇಂದು ಅಧಿಕೃತವಾಗಿ ಭಾರತ್ ರಾಷ್ಟ್ರ ಸಮಿತಿ ಪಕ್ಷವನ್ನ ಸ್ಥಾಪನೆ ಮಾಡಿದರು.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷ ಎದುರಿಸಲು ಎದುರಿಸಲು ಮುಂಬರುವ ‘ಮಿಷನ್ 2024’ ಚುನಾವಣೆ ಗುರಿಯಾಗಿಸಿಕೊಂಡು ಮೊದಲಿದ್ದ ಟಿಆರ್‌ಎಸ್(ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷವನ್ನ “ಭಾರತ್ ರಾಷ್ಟ್ರ ಸಮಿತಿ”ಪಕ್ಷವಾಗಿ ಮರುನಾಮಕರಣವನ್ನು ಇಂದು ಅಧಿಕೃತವಾಗಿ ಮಾಡಲಾಯಿತು.
ಇದಕ್ಕೂ ಮೊದಲು ಟಿಆರ್‌ಎಸ್ ಪಕ್ಷವನ್ನ ಭಾರತ ರಾಷ್ಟ್ರ ಸಮಿತಿಯಾಗಿ ಮರುನಾಮಕರಣ ಮಾಡುವ ನಿರ್ಧಾರವನ್ನು ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಟಿಆರ್‌ಎಸ್ ಮಹಾಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಇಂದು ಬೆಳಿಗ್ಗೆ ನಡೆದ ಸಾಮಾನ್ಯ ಮಂಡಳಿ ಸಭೆಯು ಕೆಸಿಆರ್ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತೀಯ ರಾಷ್ಟ್ರ ಸಮಿತಿ ಎಂದು ಬದಲಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ಇದರಲ್ಲಿ ಜನತಾ ದಳ (ಜಾತ್ಯತೀತ) ನಾಯಕ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು.