ಮೈಸೂರು: ಮೈಸೂರಿನಲ್ಲಿ ಇಂದು ದಸರಾ ಅಂಗವಾಗಿ ಜಂಬೂಸವಾರಿ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾಗಿ ನಡೆಸಲು 5000 ಪೊಲೀಸ್ ಸಿಬ್ಬಂದಿಗಳನ್ನ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ನೇಮಿಸಲಾಗಿದೆ.
ಇಂದು ಮದ್ಯಾಹ್ನ 5 ಗಂಟೆಗೆ ಜಂಬೂಸವಾರಿ ಮೆರವಣಿಗೆ ಯದುವೀರ್ ಹಾಗೂ ಸಿಎಂ ಅವರು ಚಾಲನೆ ನೀಡಲಿದ್ದು, ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ ಕೈಗೊಳ್ಳಲಾಗಿದೆ.
ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1255, ಹೊರ ಜಿಲ್ಲೆಯಿಂದ 3580, ಗೃಹ ರಕ್ಷಕ ದಳದ 650 ಸಿಬ್ಬಂದಿ ಸೇರಿಂದಂತೆ ಒಟ್ಟು ಒಟ್ಟು 5485 ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಇನ್ನು ಪೊಲೀಸ್ ಸಿಬ್ಬಂದಿ ಹೊರತಾಗಿ ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದು, ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 59 ಸಿಸಿ ಕ್ಯಾಮರಾ, ಹೆಚ್ಚುವರಿಯಾಗಿ ಜಂಬೂ ಸವಾರಿ ಮೆರವಣಿಗೆ ನಡೆಯುವ ಜಾಗದಲ್ಲಿ 110 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಇನ್ನು ಈ ವೇಳೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಸಿಸಿ ಕ್ಯಾಮರಾಗಳ ಜತೆಗೆ ಮೊಬೈಲ್ ಕಮಾಂಡಿಂಗ್ ವಾಹನದ ಮೂಲಕ ಹದ್ದಿನ ಕಣ್ಣು ಇಡಲಾಗುತ್ತದೆ.