Monday, December 23, 2024

ಪ್ರೀತಿಯ ವ್ಯಾಮೋಹಕ್ಕೆ ಕುಟುಂಬವೇ ಬಲಿ

ಚಿಕ್ಕಬಳ್ಳಾಪುರ : ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿಯಾದ ಹಿನ್ನೆಲೆ ಮಾನ ಮರ್ಯಾದೆಗೆ ಅಂಜಿದ ತಂದೆ, ತಾಯಿ ಹಾಗೂ ಆಕೆಯ ತಮ್ಮ ಮೂವರು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ತಾಯಿ ಸರೋಜಮ್ಮ, ತಂದೆ ಶ್ರೀರಾಮಪ್ಪ ಹಾಗೂ ಮಗ ಮನೋಜ್ ಮೃತ ದುರ್ದೈವಿಗಳು. ಮಗಳು ಅನ್ಯ ಜಾತಿಯ ಯುವಕನ ಜೊತೆ ಪರಾರಿಯಾಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ. 26 ವರ್ಷದ ಮಗಳು ಅರ್ಚನಾ, ನಾರಾಯಣಸ್ವಾಮಿ ಎಂಬಾತನ ಜೊತೆ ಪರಾರಿಯಾಗಿದ್ದಾಳೆ. ಯುವಕ ಅನ್ಯಜಾತಿಯವನಾಗಿರುವುದರಿಂದ ಊರಿನವರಿಂದ ನಿಂದನೆ ಒಳಗಾಗಬಹುದು ಎಂದು ಹೆದರಿ ಮನೆಯಲ್ಲಿಯೇ ಸಾಮೂಹಿಕವಾಗಿ ವಿಷ ಸೇವಿಸಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES