Sunday, December 22, 2024

ಸಿಎಂ ಭೇಟಿಯಾದ ರಮೇಶ್​ ಜಾರಕಿಹೊಳಿ; 7 ಖಾಲಿ ಸಚಿವ ಸ್ಥಾನಕ್ಕೆ ಹಲವು ಶಾಸಕರ ದುಂಬಾಲು.!

ಬೆಂಗಳೂರು: ದಸರಾ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಅವರನ್ನ ಮಾಜಿ ಸಚಿವ ರಮೇಶ್​ ಜಾರಿಕಿಹೊಳಿ ಅವರು ಭೇಟಿಯಾದರು.

ಬೆಂಗಳೂರಿನ ಆರ್​ಟಿ ನಗರದ ನಿವಾಸದಲ್ಲಿ ಸಿಎಂ ಅವರನ್ನ ಭೇಟಿಯಾದ ರಮೇಶ್​ ಜಾರಕಿಹೊಳಿ ಅವರು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಲೈಂಗಿಕ ಸಿಡಿ ಪ್ರಕರಣದಲ್ಲಿ ರಮೇಶ್​ ಜಾರಿಕಿಹೊಳಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿತ್ತು. ಹೀಗಾಗಿ ಆಗ ರಮೇಶ್​ ಜಾರಕಿಹೊಳಿ ತಮ್ಮ ಜಲ ಸಂಪನ್ಮೂಲ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಲೈಂಗಿಕ ಸಿಡಿ ಬಗ್ಗೆ ರಮೇಶ್​ ಜಾರಿಕಿಹೊಳಿಗೆ ಅವರಿಗೆ ಇತ್ತೀಚಿಗೆ ಕ್ಲೀನ್​ ಚಿಟ್​ ಸಿಕ್ಕಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲೆಯಲ್ಲಿ ಈಗ ಮತ್ತೆ ಸಂಪುಟ ಸಚಿವ ಸ್ಥಾನಕ್ಕೆ ಸೇರಲು ರಮೇಶ್​ ಕಸರತ್ತು ನಡೆಸಿದ್ದು, ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸಿಎಂಗೆ ಒತ್ತಡ ಹಾಕಿದ್ದಾರೆ.

ಖಾಲಿ ಇರುವ 7 ಸ್ಥಾನಗಳ ಭರ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ ತೋರಿದ್ದು, ದಸರಾ ನಂತರ ದೆಹಲಿಗೆ ತೆರಳಿ ಈ ಬಗ್ಗೆ ಹೈಕಮಾಂಡ್​ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮವಾಗಿ ಖಾಲಿ ಇರುವ ಸಂಪುಟ ರಚನೆ ಮಾಡಲಿದ್ದಾರೆ.

ಹೀಗಾಗಿ ದಸರಾ ಬಳಿಕ ದೆಹಲಿ ಗೆ ಹೋಗಲು ಸಿಎಂ ‌ನಿರ್ಧಾರವಾಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಎಂಪಿ ರೇಣುಕಾಚಾರ್ಯ, ಸುರಪುರ ರಾಜೂಗೌಡ, ಎಸ್ ಎ ರಾಮದಾಸ್, ಅಪ್ಪಚ್ಚು ರಂಜನ್, ಪಿ ರಾಜೀವ್, ಜಿ ಹೆಚ್ ತಿಪ್ಪಾರೆಡ್ಡಿ, ರಾಜಕುಮಾರ್ ಪಾಟೀಲ್, ಕೆ ಪೂರ್ಣಿಮಾ ಶ್ರೀನಿವಾಸ್, ದತ್ತಾತ್ರೇಯ ಪಾಟೀಲ್ ರೇವೂರ, ಎನ್ ಮಹೇಶ್, ಬಸನಗೌಡ ಪಾಟೀಲ್ ಯತ್ನಾಳ್​, ಅರವಿಂದ ಬೆಲ್ಲದ, ಎಂಎಲ್​ಸಿ ಆರ್ ರವಿಶಂಕರ್, ಎಂಎಲ್​ಸಿ ಲಕ್ಷ್ಮಣ ಸವದಿ ಅವರು ಕಸರತ್ತು ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES