Wednesday, January 22, 2025

ಜನರನ್ನ ಸಾಯಿಸೋದು ಬಿಟ್ರೆ ಬೇರೆನು ಗೊತ್ತಿಲ್ಲ; ಕಣ್ಣೀರು ಹಾಕಿದ ಪರೇಶ್​ಮೆಸ್ತಾ ತಂದೆ

ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್​ಮೆಸ್ತಾ ಸಾವಿನ ಪ್ರಕರಣ ಬಿ ರಿಪೋರ್ಟ್ ವಿಚಾರ ಪ್ರಕರಣದಲ್ಲಿ ಸಂಸದ ಅನಂತಕುಮಾರ ಹೆಗಡೆಗೆ ಮೊದಲ ಆರೋಪಿಯನ್ನಾಗಿ ಮಾಡಬೇಕು ಎಂದು ಕುಮಟಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್​ಮೆಸ್ತಾ ಸಾವು ಆಕಸ್ಮಿಕ ಸಾವು ಎಂದು ಸಿಬಿಐ ಕೋರ್ಟ್​ಗೆ​ ಸಲ್ಲಿಸಿದ ಬಿ ರಿಪೋರ್ಟ್​ನಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಬಿಜೆಪಿ ನಾಯಕರುಗಳನ್ನ ಆರೋಪಿಗಳನ್ನಾಗಿ ಮಾಡಬೇಕು. ಬಿಜೆಪಿಯವರು ಹಿಂದೂ ಮುಸ್ಲಿಂ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದರು.

ಬಿ ರಿಪೋರ್ಟ್ ನಿಂದ ಕಾಂಗ್ರೆಸ್ ನಾಯಕರೆಲ್ಲರೂ ದೋಷ ಮುಕ್ತರಾಗಿದ್ದಾರೆ. ಬಿಜೆಪಿಯವರು ದೇಶದಲ್ಲಿ ಡೋಂಗಿ ರಾಜಕಾರಣ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಪರೇಶಮೆಸ್ತಾ ಘಟನೆಯಲ್ಲಿ ಅನೇಕ ಹಿಂದೂ ಯುವಕರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಸಿಗುವಂತಾಗಬೇಕು. ಬಿಜೆಪಿಯ ಕಳ್ಳಾಟ ಜನರಿಗೆ ಈಗ ಅರ್ಥವಾಗಬೇಕಿದೆ ಎಂದು ಅವರು ಹೇಳಿದರು.

ಈ ಸಂಬಂಧಿಸಿದಂತೆ ಮಾತನಾಡಿದ ಪರೇಶಮೆಸ್ತಾ ತಂದೆ, ನಾವೇನು ಕೂಲಿ ಕೆಲಸ ಮಾಡಕೊಂಡು ಜೀವನ ಮಾಡುತ್ತಿದ್ದೇವೆ. ನಿಮ್ಮಗೆಲ್ಲಾ ನಮಸ್ಕಾರ ಎಂದು ಮಾದ್ಯಮಗಳ ಎದುರು ಕಣ್ಣೀರು ಹಾಕಿದರು. ಎಲ್ಲಾ ರಾಜಕೀಯ ಪಕ್ಷದವರು ನಮ್ಮನ್ನ ಬಳಸಿಕೊಂಡಿದ್ದಾರೆ ಅಷ್ಟೆ, ಜನರಿಗೆ ಸಾಯಿಸೋದು ಬಿಟ್ಟರೆ ಬೇರೆನು ಇಲ್ಲ ಎಂದು ಮೃತ ಪರೇಶಮೆಸ್ತಾ ತಂದೆ ಕಮಲಾಕರ ಮೇಸ್ತಾ ಹೇಳಿದರು.

RELATED ARTICLES

Related Articles

TRENDING ARTICLES