Wednesday, January 22, 2025

ಕಾಶ್ಮೀರ ಕಾರಾಗೃಹ ಅಧಿಕಾರಿ ಹತ್ಯೆ ಪ್ರಮುಖ ಶಂಕಿತ ಆರೋಪಿ ಅರೆಸ್ಟ್​.!

ಜಮ್ಮು ಕಾಶ್ಮೀರ: ನಿನ್ನೆ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಉಸ್ತುವಾರಿ ಅಧಿಕಾರಿ​ ಹೇಮಂತ್ ಕುಮಾರ್​​ ಲೋಹಿಯಾ ಅವರನ್ನ ಕೊಲೆಗೈದ ಪ್ರಮುಖ ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

57 ವರ್ಷದ ಹೇಮಂತ್ ಕುಮಾರ್​​ ಲೋಹಿಯಾ ನಿನ್ನೆ ತಡರಾತ್ರಿ ಜಮ್ಮುವಿನ ಹೊರವಲಯದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಲೋಹಿಯಾ ಅವರನ್ನು ಕತ್ತು ಸೀಳಿ ಭಯಾನಕವಾಗಿ ಕೊಲೆ ಮಾಡಲಾಗಿತ್ತು. ಅವರ ದೇಹದ ಮೇಲೆ ಸುಟ್ಟ ಗಾಯದ ಗುರುತುಗಳು ಕೂಡ ಕಂಡುಬಂದಿದ್ದವು.

ಕೊಲೆಯಾದ ನಂತರ ಹೇಮಂತ್​ ಕುಮಾರ್​ ಅವರ ಮನೆ ಕೆಲಸದವ ಮನೆಯಿಂದ ಪರಾರಿಯಾಗಿದ್ದ, ಈಗ ಮನೆಕೆಲಸದವನನ್ನು ಎನ್ನಲಾದ ಶಂಕಿತನನ್ನು ಅರಸ್ಟ್​ ಮಾಡಲಾಗಿದೆ. ಜಮ್ಮ ಕಾಶ್ಮೀರ ಕಾರಾಗೃಹಗಳ ಅಧಿಕಅರಿ ಹೇಮಂತ್ ಲೋಹಿಯಾ ಅವರನ್ನು ಕೊಂದ ಆರೋಪಿಗಾಗಿ ನಿನ್ನೆ ತಡರಾತ್ರಿಯಿಂದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಈಗ ಶಂಕಿಸಿದ ಆರೋಪಿಯನ್ನ ಬಂಧಿಸಲಾಗಿದೆ.

RELATED ARTICLES

Related Articles

TRENDING ARTICLES