Wednesday, January 22, 2025

ನಾಳೆಯಿಂದ ಗಾಡ್​ಫಾದರ್ ಚಿರಂಜೀವಿ ಪೊಲಿಟಿಕಲ್ ಎಂಟ್ರಿ

ಪಾಲಿಟಿಕ್ಸ್ ಸಹವಾಸವೇ ಬೇಡ ಅಂತ ದೂರ ಉಳಿದಿದ್ದ ಮೆಗಾಸ್ಟಾರ್ ಚಿರಂಜೀವಿ, ಮತ್ತೆ ಭರ್ಜರಿ ಕಂಬ್ಯಾಕ್ ಮಾಡೋ ಮನ್ಸೂಚನೆ ನೀಡಿದ್ದಾರೆ. ಅದಕ್ಕೆ ಮುಹೂರ್ತ ಕೂಡ ನಿಗದಿ ಆಗಿದ್ದು, ದಸರಾ ಧಮಾಕದಲ್ಲಿ ನಾಳೆಯಿಂದಲೇ ಪೊಲಿಟಿಕಲ್ ಎಂಟ್ರಿಗೆ ನಾಂದಿ ಹಾಡಲಿದ್ದಾರೆ. ಎಲ್ಲಿ, ಹೇಗೆ, ಯಾವ ಪಕ್ಷ ಅನ್ನೋ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ನೀವೇ ಓದಿ.

  • ಮೆಗಾಸ್ಟಾರ್ ಮೆಗಾ ಪ್ಲಾನ್​ಗೆ ಬಿಟೌನ್ ಸಲ್ಮಾನ್ ಖಾನ್ ಸಾಥ್
  • ರಾಜಕಾರಣದಿಂದ ದೂರವಿದ್ದೆ.. ನನ್ನಿಂದ ಅದು ದೂರ ಆಗಿಲ್ಲ
  • ಬಿಗ್​ಸ್ಕ್ರೀನ್ ಮೇಲೆ ಸತ್ಯದೇವ್ ವಿಲನ್ ಖದರ್.. ಚಿರು ಪವರ್

ನಾಳೆಯಿಂದ ಅಫಿಶಿಯಲ್ ಆಗಿ ಪೊಲಿಟಿಕಲ್ ಅಖಾಡಕ್ಕೆ ಇಳಿಯುತ್ತಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಅರೇ ಅವ್ರು ಪಾಲಿಟಿಕ್ಸ್​ನಿಂದ ಅಂತರ ಕಾಯ್ದುಕೊಂಡು ಬಹಳ ದಿನಗಳಾಯ್ತು ಅಲ್ವಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ನಾವು ಹೇಳ್ತಿರೋದು ರೀಲ್ ಪಾಲಿಟಿಕ್ಸ್. ಹೌದು.. ರಾಜಕಾರಣದಿಂದ ನಾನು ದೂರವಿದ್ದೆ. ಆದ್ರೆ ನನ್ನಿಂದ ರಾಜಕಾರಣ ದೂರವಿರಲಿಲ್ಲ ಅಂತ ಮೆಗಾ ಡೈಲಾಗ್ ಹೊಡೀತಿದ್ದಾರೆ ಮೆಗಾಸ್ಟಾರ್.

ಮೋಸ್ಟ್ ಎಕ್ಸ್​ಪೆಕ್ಟೆಡ್ ಗಾಡ್​ಫಾದರ್ ಸಿನಿಮಾ ನಾಳೆ ವರ್ಲ್ಡ್​ವೈಡ್ ರಿಲೀಸ್ ಆಗ್ತಿದ್ದು, ಚಿರು ಸಿನಿಯಾನದ ಬಿಗ್ಗೆಸ್ಟ್ ಸಿನಿಮಾ ಆಗಿ ಧೂಳೆಬ್ಬಿಸಲಿದೆ. ಮೋಹನ್ ರಾಜ ನಿರ್ದೇಶನದ ಈ ಸಿನಿಮಾನ ರಾಮ್ ಚರಣ್ ತೇಜಾ ತಮ್ಮ ತಂದೆ ಚಿರುಗಾಗಿ ಹೋಮ್ ಪ್ರೊಡಕ್ಷನ್​ನಲ್ಲಿ ತಾವೇ ನಿರ್ಮಾಣ ಮಾಡಿದ್ದಾರೆ.

ಹಂಡ್ರೆಡ್ ಪರ್ಸೆಂಟ್ ಪೊಲಿಟಿಕಲ್ ಥ್ರಿಲ್ಲರ್ ಆಗಿರೋ ಈ ಸಿನಿಮಾದಲ್ಲಿ ಚಿರಂಜೀವಿ ಎರಡೆರಡು ಶೇಡ್​ಗಳಲ್ಲಿ ಕಾಣಸಿಗಲಿದ್ದಾರೆ. ಹಾಗಾಗಿಯೇ ಅವ್ರ ಪಾತ್ರಕ್ಕೆ ಬ್ರಹ್ಮ ಅನ್ನೋ ಟೈಟಲ್ ಸಿಕ್ಕಿದೆ. ಇದೇ ಮೊದಲ ಬಾರಿ ಸೌತ್​ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿರು ಸಹೋದರಿಯಾಗಿ ಕಾಣಸಿಗಲಿದ್ದು, ಗ್ಯಾಂಗ್​ಸ್ಟರ್ ಆಗಿ ಸಲ್ಮಾನ್ ಖಾನ್ ಮಿಂಚಲಿದ್ದಾರೆ.

ಮೆಗಾಸ್ಟಾರ್​ಗಾಗಿ ಬಾಲಿವುಡ್ ಭಾಯಿಜಾನ್ ನಮ್ಮ ಸೌತ್​ಗೆ ಬಂದಿದ್ದು, ರೆಮ್ಯುನರೇಷನ್ ಇಲ್ಲದೇನೇ ಸಿನಿಮಾ ಮಾಡಿಕೊಟ್ಟಿರೋದು ವಿಶೇಷ. ಇನ್ನು ಸಲ್ಲು- ಚಿರು ಡ್ಯಾನ್ಸ್ ನೋಡೋಕೆ ಫ್ಯಾನ್ಸ್ ಬಹಳ ಕಾತರರಾಗಿದ್ದು, ಪ್ರಭುದೇವ ಕೊರಿಯೋಗ್ರಫಿಯಲ್ಲಿ ಥಾರ್ ಮಾರ್ ಥಕ್ಕರ್ ಮಾರ್ ಸಾಂಗ್ ಎಲ್ಲರ ಮೈಕೈ ಕುಣಿಸಲಿದೆ.

ಚಿರಂಜೀವಿ ಎದುರು ಖಡಕ್ ಖಳನಾಯಕನಾಗಿ ಅಬ್ಬರಿಸೋಕೆ ಸತ್ಯದೇವ್ ಸಜ್ಜಾಗಿದ್ದಾರೆ. ಹೌದು. ಸತ್ಯದೇವ್ ಇದೇ ಮೊದಲ ಬಾರಿ ನೆಗೆಟೀವ್ ಶೇಡ್​ನಲ್ಲಿ ಕಾಣಿಸಿಕೊಳ್ತಿದ್ದು, ಚಿರುಗಾಗಿ ಹೀರೋ ಆದ ಬಳಿಕವೂ ವಿಲನ್ ಆಗಿದ್ದಾರೆ. ಚಿರುಗಾಗಿ ಸಲ್ಲು ಕೈಜೋಡಿಸಿದ ಹಿನ್ನೆಲೆ, ಈ ಸಿನಿಮಾನ ಬಾಲಿವುಡ್​ನಲ್ಲೂ ಹಿಂದಿ ವರ್ಷನ್​ನಲ್ಲಿ ರಿಲೀಸ್ ಮಾಡಲಾಗ್ತಿದೆ.

ಮಲಯಾಳಂ ಚಿತ್ರದ ರಿಮೇಕ್ ಆದ್ರೂ, ತೆಲುಗು ನೇಟಿವಿಟಿಗೆ ತಕ್ಕನಾಗಿ ಕಥೆ, ಪಾತ್ರಗಳಲ್ಲಿ ಜೀವಂತಿಕೆ ಕಾಪಾಡಿಕೊಳ್ಳೋ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಒಟ್ಟಾರೆ ಈ ಸಿನಿಮಾ ಮೂಲಕ ನಾನು ಮತ್ತೆ ಪಾಲಿಟಿಕ್ಸ್​​ಗೆ ಕಂಬ್ಯಾಕ್ ಮಾಡ್ತೀನಿ ಅನ್ನೋ ಸಂದೇಶ ಸಾರಿದ್ದಾರೆ ಗಾಡ್​ಫಾದರ್. ಹಬ್ಬಕ್ಕೆ ಚಿರು ಫ್ಯಾನ್ಸ್​ಗೆ ಈ ಸಿನಿಮಾ ಮತ್ತಷ್ಟು ಕಿಕ್ ಕೊಡೋದು ಪಕ್ಕಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES