Monday, December 23, 2024

T-20 ವಿಶ್ವಕಪ್​ನಿಂದ ಅಧಿಕೃತವಾಗಿ ಹೊರಬಿದ್ದ ವೇಗಿ ಜಸ್ಪ್ರೀತ್ ಬುಮ್ರಾ

ಬೆಂಗಳೂರು: ಬೆನ್ನು ನೋವಿನಿಂದ ಟಿ-20 ವಿಶ್ವಕಪ್​ನಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂಬರುವ ವಿಶ್ವಕಪ್​​ನಿಂದ ಹೊರಗಿಡಲಾಗಿದೆ ಎಂದು ಅಧಿಕೃತವಾಗಿ ಬಿಸಿಸಿಐ ತಿಳಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ T-20 ಸರಣಿಯಿಂದ ಬುಮ್ರಾ ಬೆನ್ನುನೋವಿನ ಕಾರಣದಿಂದ ಹೊರಗುಳಿದಿದ್ದರು. ಬಿಸಿಸಿಐ ಶೀಘ್ರದಲ್ಲೇ ವಿಶ್ವಕಪ್​ಗೆ ಬಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಹೆಸರಿಸಲಿದೆ.

ಬೆನ್ನುನೋವಿನಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಟಿ-20 ವಿಶ್ವಕಪ್‌ನಿಂದ ಹೊರಬೀಳಲಿದ್ದಾರೆ ಎಂದು ಈ ಮೊದಲೇ ವರದಿಯಾಗಿದ್ದರೂ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಈಗ ಅಧಿಕೃತವಾಗಿ ಬಿಸಿಸಿಐ ಬುಮ್ರಾ ವಿಶ್ವಕಪ್​ನಿಂದ ಹೊರಗುಳಿಯಲಿದ್ದಾರೆ ಎಂದಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ 16 ರಿಂದ ಟಿ-20 ವಿಶ್ವಕಪ್​ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್​ 23 ರಂದು ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಆಡಲಿದೆ.

RELATED ARTICLES

Related Articles

TRENDING ARTICLES