Monday, December 23, 2024

ಬಿಬಿಎಂಪಿ ಎಡವಟ್ಟಿಗೆ ಕೊಚ್ಚಿ ಹೋಯ್ತು 446 ಕೋಟಿ ರೂ.!

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಸುರಿದ ಮಳೆಗೆ ಈ ವೆರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 446 ಕೋಟಿ ರೂ ನಷ್ಟವಾಗಿದೆ ಎಂದು ಬಿಬಿಎಂಪಿ ಅಂದಾಜಿಸಿದೆ.

ಎರಡು ದಶಕದಿಂದ ಕಂಡು ಕೇಳರಿಯದ ಮಹಾಮಳೆ ಬೆಂಗಳೂರಿನಲ್ಲಿ ಆಗಿತ್ತು. ಇದರಿಂದ ಅಪಾರ ಪ್ರಮಾಣದಲ್ಲಿ ರಸ್ತೆಗೆಳು, ಮನೆಗಳು, ಅಪಾರ ಪ್ರಮಾಣದ ಮನೆಯ ಸಾಮಾಗ್ರಿಗಳು ಹಾನಿಯಾಗಿದ್ದವು. ಈಗ ನಷ್ಟ ಪ್ರಮಾಣವನ್ನ ಬಿಬಿಎಂ ಅಂದಾಜಿಸಿದೆ.

ಬಿಬಿಎಂಪಿ ವ್ಯಾಪ್ತಿಯ 83.46 ಕಿಮೀ ರಸ್ತೆ, ಮನೆಗಳು 1549 ಹಾನಿಗೊಳಾಗಿದೆ. ಪಶ್ಚಿಮ ವಲಯದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಬಿಬಿಎಂಪಿ ಲೆಕ್ಕ ಮಾಡಿದೆ.

ಪೂರ್ವ ವಲಯದಲ್ಲಿ 37.53 ಕೋಟಿ ರೂ, ದಕ್ಷಿಣ ವಲಯದಲ್ಲಿ 50 ಕೋಟಿ ರೂ ಸೇರಿದಂತೆ 56.45 ಕಿಮೀ ರಸ್ತೆ ಮನೆಗಳು 88 ಹಾನಿಯಾಗಿವೆ. ಬೊಮ್ಮನಹಳ್ಳಿ ವಲಯದಲ್ಲಿ 15 ಕೋಟಿ ರೂ ಹಾಳಾದ ರಸ್ತೆಯ ಉದ್ದ 23ಕಿಮೀ ಹಾಗೂ ಹಾನಿಗೊಳಾಗದ ಮನೆಗಳ ಸಂಖ್ಯೆ 340 ಆಗಿದೆ.

ಇನ್ನು ದಾಸರಹಳ್ಳಿ ವಲಯದಲ್ಲಿ ಯಾವುದೇ ಹಾನಿಯಾಗಿಲ್ಲ. ಮಹದೇವಪುರ ವಲಯದಲ್ಲಿ ಒಟ್ಟು ಹಾನಿ 331 ಕೋಟಿ, ಯಾವುದೇ ರಸ್ತೆ ಹಾಗೂ ಮನೆ ಹಾಳಾಗಿಲ್ಲ. ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು ಹಾನಿ 10 ಕೋಟಿ, ಹಾಳಾದ ರಸ್ತೆಯ ಉದ್ದ 39 ಕಿಮೀ ಆದರೆ ಇಲ್ಲಿ ಯಾವುದೆ ಮನೆಗಳಿಗೆ ಹಾನಿಯಾಗಿಲ್ಲ. ಯಲಹಂಕ ವಲಯದಲ್ಲಿ ಒಟ್ಟು ಹಾನಿ 1.5 ಕೋಟಿ ರೂ ಆಗಿದ್ದು ಹಾಳಾದ ರಸ್ತೆಯ ಉದ್ದ 2.5 ಕಿಮೀ ಹಾಗೂ 342 ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ ಎಂದು ಲೆಕ್ಕಾಚಾರ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ತಿಂಗಳು ನಗರದಲ್ಲಿ ಸುರಿದ ರಣಮಳೆಗೆ ಇದುವರೆಗೂ 445 ಕೋಟಿ ರೂ.ಗಳ ನಷ್ಟ ಆಗಿದ್ದು, ಒಟ್ಟು 204 ಕಿ.ಮೀ ರಸ್ತೆಗಳು ಹಾಗೂ 2319 ಮನೆಗಳು ಹಾಳು ಆಗಿವೆ.

RELATED ARTICLES

Related Articles

TRENDING ARTICLES