Monday, December 23, 2024

ಕೊರೋನಾ ಬಳಿಕ ನಗರದಲ್ಲಿ ಅದ್ದೂರಿ ಹಬ್ಬದ ಸಂಭ್ರಮ..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನವರಾತ್ರಿ ಸಂಭ್ರಮ ಜೋರಾಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬಹುತೇಕ ಕಡೆ ಹೂ, ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದರು.ಆಯುಧಪೂಜೆಗಾಗಿ ಬಾಳೆಕಂದು, ಬೂದುಕುಂಬಳಕಾಯಿ ಅಂಗಡಿಗಳ ಮುಂದೆಯೂ ಜನರ ದಂಡೇ ಕಾಣ್ತಿತ್ತು. ಕೆ.ಆರ್ ಮಾರುಕಟ್ಟೆಯಲ್ಲಂತೂ ಜನಜಾತ್ರೆಯೇ ಕಂಡು ಬಂತು.

ಹೌದು, ಕಳೆದ ಎರಡು ವರ್ಷಗಳಿಂದ ಕೊವಿಡ್​ನಿಂದ ಹಬ್ಬ ಬಂದರೂ ಸಂಭ್ರಮ ಇರಲಿಲ್ಲ. ಆದ್ರೆ ಈ ಬಾರಿ ಎಲ್ಲವೂ ಮಾಯವಾಗುತ್ತಿದ್ದಂತೆ ಹಬ್ಬದ ಸಂಭ್ರಮ ಜೋರಾಗಿ ಇತ್ತು. ದಸರಾ ಒಂಬತ್ತನೆ ದಿನ ಆಯುಧ ಪೂಜೆ ಹಿನ್ನೆಲೆ ವಾಹನ ಹಾಗೂ ಯಂತ್ರೋಪಕರಣಗಳಿಗೆ ಭರ್ಜರಿ ಪೂಜೆ ಮಾಡಲು ಹೂ ಹಣ್ಣು ಬಾಳೆಕಂದು, ಬೂದುಕುಂಬಳಕಾಯಿ ಖರೀದಿಗೆ ಜನ ಮುಗಿಬಿದ್ದರು.

ಇನ್ನೂ ಗ್ರಾಹಕರು ಹೆಚ್ಚಾಗಿದ್ದರಿಂದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿತ್ತು. ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿ ಇದ್ದೆವು. ಆದರೆ, ಈ ಬಾರಿ ಭರ್ಜರಿ ವ್ಯಾಪಾರ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಆಯುಧ ಪೂಜೆಗೆ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಬುಧವಾರ ವಿಜಯದಶಮಿಯ ಅದ್ದೂರಿ ಆಚರಣೆಗೆ ನಗರದ ಜನತೆ ಸಿದ್ಧರಾಗಿದ್ದಾರೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES