Thursday, October 31, 2024

ಚೌಡೇಶ್ವರಿ ದೇವಿ ದಸರಾ ಮಹೋತ್ಸವ

ಬೆಂಗಳೂರು : ಮೈಸೂರು ದಸರಾದಂತೇಯೆ ಬೆಂಗಳೂರು ಜಿಲ್ಲೆಯ ಆನೇಕಲ್‌ನ ಚೌಡೇಶ್ವರಿ ದೇವಿಯ ದಸರಾ ಸಹ ಸಾಕಷ್ಟು ಪ್ರಸಿದ್ದಿ ಕಳೆದ ಎರಡು ವರ್ಷಗಳಿಂದ ಕೊರೋನದಿಂದಾಗಿ ಸರಳವಾಗಿ ಆಚರಣೆ ಮಾಡಲಾಗಿದ್ದ ನವರಾತ್ರಿ ಉತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ.

ಸಾಕಷ್ಟು ಕಡೆಗಳಿಂದ ಜನ ಬಂದು ಈ ದೇವಿಯ ದರ್ಶನ ಪಡೆದು ಹೋಗುತ್ತಿದ್ದಾರೆ.‌‌ ಅದೇ ರೀತಿ ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗು ಪ್ರಬಲ ಆಕಾಂಕ್ಷಿಗಳಾದ ಮಂಜುನಾಥ್ ಮದ್ದೂರಪ್ಪ ಅವರು ಸಹ ಬಂದು ಚೌಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.

ಇನ್ನು, ಈ ಬಾರಿ ನವರಾತ್ರಿಯ ೧೦ ದಿನಗಳ ಹೂವಿನ ಅಲಂಕಾರದ ಜವಾಬ್ದಾರಿಯನ್ನು ಹೊತ್ತಿರುವ ಮಂಜುನಾಥ್ ಮದ್ದೂರಪ್ಪ ಸಮಿತಿಯವರ ಜೊತೆಗೂಡಿ ಬಹಳಷ್ಟು ಸುಂದರವಾಗಿ ಹೂವಿನ ಅಲಂಕಾರವನ್ನು ಮಾಡಿಸಿ ದೇವಿಯ ಸೇವೆಗೆ ಮುಂದಾಗಿದ್ದಾರೆ.‌ ಹಾಗಾಗಿ ಚೌಡೇಶ್ವರಿ ದೇವಾಲಯ ಸಮಿತಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಮಂಜುನಾಥ್ ಸಮಸ್ತ ನಾಗರೀಕರಿಗೆ ಭುದವಾರ ಆನೇಕಲ್ ನಲ್ಲಿ ನಡೆಯಲಿರುವ ಜಂಬೂ ಸವಾರಿ ಉತ್ಸವಕ್ಕೆ ಸ್ವಾಗತ ಕೋರಿದ್ದಾರೆ.

RELATED ARTICLES

Related Articles

TRENDING ARTICLES