Monday, December 23, 2024

ತೋತಾಪುರಿಯಲ್ಲಿ ಭುಗಿಲೆದ್ದ ರಾಮಮಂದಿರ ವಿವಾದ

ಒಂದ್ಕಡೆ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯಗಳು ಭರದಿಂದ ಸಾಗ್ತಿವೆ. ಮತ್ತೊಂದ್ಕಡೆ ಬಿಜೆಪಿ ಪಕ್ಷದವ್ರೇ ಆದ ಜಗ್ಗೇಶ್, ಅದೇ ರಾಮಮಂದಿರದ ಕುರಿತು ಮುಸ್ಲಿಂ ಮಹಿಳೆಯಿಂದ ಪಾಠ ಹೇಳಿಸಿಕೊಳ್ತಿದ್ದಾರೆ. ಇದೊಂಥರಾ ಸಾಮರಸ್ಯ ಸಾರುವ ವಿಷ್ಯವಾದ್ರೂ, ವಿವಾದಕ್ಕೆ ನಾಂದಿ ಹಾಡೋ ರೀತಿ ಕಾಣ್ತಿದೆ. ಅದ್ರ ಅಸಲಿ ಇನ್​ಸೈಡ್ ಮ್ಯಾಟರ್ ಏನು ಅಂತೀರಾ..? ನೀವೇ ಓದಿ.

  • ಮುಸ್ಲಿಂ ಮಹಿಳೆಯಿಂದ ಜಗ್ಗೇಶ್​ಗೆ ಶ್ರೀರಾಮನ ಪಾಠ..!
  • BJPಗೆ ಡೈರೆಕ್ಟರ್ ವಿಜಯ್ ಪ್ರಸಾದ್ ಕೊಟ್ರಾ ತಿರುಗೇಟು..?
  • ಸಾಮರಸ್ಯದ ಸಂದೇಶವೋ..? ವಿವಾದಕ್ಕೆ ನಾಂದಿಯೋ..?

ಶುಕ್ರವಾರ ತೆರೆಕಂಡ ತೋತಾಪುರಿ, ಹತ್ತು ಹಲವು ಕಾರಣಗಳಿಂದ ಪ್ರೇಕ್ಷಕರ ದಿಲ್ ದೋಚುತ್ತಿದೆ. ಒಂದ್ಕಡೆ ವಿಜಯ್ ಪ್ರಸಾದ್ ಅವ್ರ ಪೋಲಿ ಜೋಕ್ಸ್. ಮತ್ತೊಂದ್ಕಡೆ ಜಾತಿ, ಸಮುದಾಯಗಳನ್ನ ಮೀರಿದ ಸಾಮರಸ್ಯ ಜೀವನದ ಪಯಣ. ಜಗ್ಗೇಶ್, ಅದಿತಿ, ದತ್ತಣ್ಣ, ಸುಮನ್ ರಂಗನಾಥ್, ಡಾಲಿ, ವೀಣಾ ಸುಂದರ್ ಅಂತಹ ನುರಿತ ಕಲಾವಿದರ ದಂಡಿರೋ ತೋತಾಪುರಿಯ ಘಮಲು ಜೋರಾಗೇ ಎಲ್ಲೆಡೆ ಹಬ್ಬಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಈರೇಗೌಡನ ಪಾತ್ರದಾರಿ ಜಗ್ಗೇಶ್, ಶಕೀಲಾ ಭಾನು ಅನ್ನೋ ಮುಸ್ಲಿಂ ಸಮುದಾಯದ ಪಾತ್ರದಾರಿ ಅದಿತಿಯ ಪ್ರೇಮ ಪ್ರಸಂಗ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇಲ್ಲಿ ಸಾಮರಸ್ಯ ಸಾರುವಂತಹ ಕಂಟೆಂಟ್ ಇದ್ರೂ, ರಾಮಮಂದಿರ ವಿವಾದವನ್ನು ಮತ್ತೆ ಎಳೆದು ತಂದಂತೆ ಕಾಣ್ತಿದೆ. ನಿರ್ದೇಶಕ ವಿಜಯ್ ಪ್ರಸಾದ್ ಮತ್ತೆ ವಿವಾದಕ್ಕೆ ನಾಂದಿ ಹಾಡ್ತಿದ್ದಾರಾ ಅಥ್ವಾ ಭಾವೈಕ್ಯತೆಯ ಸಂದೇಶ ನೀಡ್ತಿದ್ದಾರಾ ಅನ್ನೋ ಪ್ರಶ್ನೆ ಕಾಡ್ತಿದೆ.

ಶ್ರೀರಾಮಚಂದ್ರನಿಗೆ ಮಂದಿರ ಇಷ್ಟವೋ ಅಥ್ವಾ ಮಳೆಯೋ ಅಂತ ಮುಸ್ಲಿಂ ಪಾತ್ರದಾರಿಯನ್ನ ಕೇಳೋ ಜಗ್ಗೇಶ್​​, ಕೊನೆಗೆ ಆಕೆಯಿಂದಲೇ ಪಾಠ ಹೇಳಿಸಿಕೊಳ್ಳುವಂತಾಗುತ್ತೆ. ಸಾಮ್ರಾಜ್ಯವೇ ಬಿಟ್ಟು ದೊಡ್ಡವನಾದವ, ಮಂದಿರ ಕೇಳಿ ಸಣ್ಣವನಾಗ್ತಾನಾ..? ಶ್ರೀರಾಮನನ್ನ ಮಂದಿರದಲ್ಲಿ ಇಟ್ರೆ ಒಂಟಿಯಾಗೇ ಇರ್ತಾನೆ ಅನ್ನೋ ಡೈಲಾಗ್​ಗಳು ಬಹಿರಂಗವಾಗಿ ಬಿಜೆಪಿ ಹಾಗೂ ರಾಮಭಕ್ತರಿಗೆ ತಿರುಗೇಟು ನೀಡಿದಂತಿದೆ.

ಸಿನಿಮಾದಲ್ಲಿ ನಾವು ಜಾತಿ, ಧರ್ಮಗಳನ್ನ ದಾಟೋದಕ್ಕೆ ಇಷ್ಟು ಸಾಕು ಅನ್ನೋ ಜಗ್ಗೇಶ್ ಅವ್ರು ಕೂಡ ಬಿಜೆಪಿ ಪಕ್ಷದವರೇ ಅನ್ನೋದು ವಿಶೇಷ. ಇಲ್ಲಿ ರಾಮನಿಗೆ ಮಂದಿರ ಅನ್ನೋದ್ರ ಅವಶ್ಯಕತೆ ಇರಲಿಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದಂತಿದೆ. ಶಕೀಲಾ ಭಾನು- ಈರೇಗೌಡ ಮದ್ವೆ ವಿಚಾರಕ್ಕೆ ಬಂದು ನಡೆಯೋ ಈ ಸಂಭಾಷಣೆ ಚಿತ್ರದ ಓಪನಿಂಗ್​ಗೆ ಬೂಸ್ಟರ್ ಡೋಸ್​​ನಂತಿದೆ. ಆದ್ರೆ ವಿವಾದ ಸೃಷ್ಟಿಸೋ ಸೂಚನೆ ನೀಡಿದೆ.

ನಿರ್ದೇಶಕರು ಬಿಜೆಪಿ ವರ್ಸಸ್ ಕಾಂಗ್ರೆಸ್​ನ ಮನದಲ್ಲಿಟ್ಟುಕೊಂಡು ಈ ಸೀಕ್ವೆನ್ಸ್​ನ ಸೃಷ್ಟಿಸಿದ್ರಾ ಅಥ್ವಾ ಇಂದಿನ ಪ್ರಸ್ತುತ ಸಮಾಜದ ಉದ್ಧಾರಕ್ಕಾಗಿ, ಕೋಮುಗೆ ಮುಲಾಮಾಗಿಸೋಕೆ ಇದನ್ನ ಮಾಡಿದ್ರಾ ಅನ್ನೋದು ಅವ್ರೇ ಸ್ಪಷ್ಟಪಡಿಸಬೇಕಿದೆ. ಒಟ್ಟಾರೆ ತೋತಾಪುರಿ ಸಿನಿಮಾ ಜಗ್ಗೇಶ್ ಕರಿಯರ್​ಗೆ ಬಿಗ್ ಟ್ವಿಸ್ಟ್ ನೀಡಿದ್ದು, ಕೆಎ ಸುರೇಶ್ ನಿರ್ಮಾಣದ ಒನ್ ಆಫ್ ದಿ ಬೆಸ್ಟ್ ಸಿನಿಮಾ ಆಗಿ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES