ಹಾಸನ : ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಅಧಿಕಗೊಂಡಿದೆ. ದಿನಬೆಳಗಾದರೆ ಜನರಿಗೆ ಆನೆಗಳ ಹಿಂಡು ದರ್ಶನವಾಗ್ತಿದೆ. ಗ್ರಾಮದೊಳಗೆ ಗುಂಪುಗುಂಪಾಗಿ ಕಾಡಾನೆಗಳು ದಾಪುಗಾಲು ಇಟ್ತಿವೆ.
ಬೆಳ್ಳಂಬೆಳಗ್ಗೆ ಹಾಸನದ ಸಕಲೇಶಪುರ ಪಟ್ಟಣದ ಸಮೀಪದಲ್ಲಿನ ಕೌಡಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆ ಕಂಡು ಜನರು ಜೀವ ಉಳಿಸಿಕೊಳ್ಳಲು ಮನೆಯೊಳಗೆ ಓಡಿ ಹೋಗ್ತಿದ್ದಾರೆ.
ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ಜನರು ಮನೆಯಿಂದ ಹೊರ ಬರಲು ಹೆದರ್ತಿದ್ದಾರೆ. ಇಷ್ಟು ದಿನ ಒಂಟಿ ಕಾಡಾನೆಗಳು ಮಾತ್ರ ಗ್ರಾಮಕ್ಕೆ ಬರುತ್ತಿದ್ದವು ಆದ್ರೆ ಇದೀಗ ಕಾಡಾನೆಗಳ ಹಿಂಡು ಕಂಡು ಮಲೆನಾಡಿನ ಜನ ಬೆಚ್ಚಿ ಬಿದ್ದಿದ್ದಾರೆ.