Wednesday, January 22, 2025

ವಿಜಯ್ ಬರ್ತ್ ಡೇಗೆ ‘ಡಿವೈನ್ ಬ್ಲಾಕ್​ಬಸ್ಟರ್’ ಗಿಫ್ಟ್

ಕೆಜಿಎಫ್​ ಸಿನಿಮಾದಿಂದ ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸ್ಟ್ಯಾಂಡರ್ಡ್ಸ್​ನ ಸೆಟ್ ಮಾಡಿದ ಹೊಂಬಾಳೆ ಫಿಲಂಸ್​​ನ ಧಣಿ ವಿಜಯ್ ಕಿರಗಂದೂರ್​ಗೆ ಜನುಮ ದಿನದ ಸಂಭ್ರಮ. ರಿಷಬ್ ಶೆಟ್ಟಿ, ತಮ್ಮ ನಿರ್ಮಾಪಕರ ಬರ್ತ್ ಡೇಗೆ ಕಾಂತಾರ ಅನ್ನೋ ಡಿವೈನ್ ಬ್ಲಾಕ್​ಬಸ್ಟರ್ ಗಿಫ್ಟ್ ನೀಡಿ, ಹೊಂಬಾಳೆಯ ಕೀರ್ತಿ ಪತಾಕೆಯನ್ನ ಮತ್ತಷ್ಟು ಉತ್ತುಂಗಕ್ಕೇರಿಸಿದ್ದಾರೆ.

  • ಬುಕ್ ಮೈ ಶೋನಲ್ಲಿ 99%.. IMDb ರೇಟಿಂಗ್ 9.8..!
  • ರಿಷಬ್​ಗೆ ರಕ್ಷಿತ್ ಅಪ್ಪುಗೆ.. ಕ್ಲೈಮ್ಯಾಕ್ಸ್​ಗೆ ಪ್ರಭಾಸ್ ಫಿದಾ
  • ವಿದೇಶಗಳಲ್ಲಿ ಹೆಚ್ಚುವರಿ ಶೋಗಳಿಗೆ ಹೆಚ್ಚಿತು ಡಿಮ್ಯಾಂಡ್

ದಸರಾದಲ್ಲಿ ಅರ್ಜುನನ ಅಂಬಾರಿ ದರ್ಬಾರ್​ಗೂ ಮುನ್ನ ಕಾಂತಾರ ಅಬ್ಬರ ಸಖತ್ ಜೋರ್​ದಾರ್ ಆಗಿದೆ. ಯೆಸ್.. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ ಕಾಂತಾರ ಕಥೆ, ಅಕ್ಷರಶಃ ದಂತಕಥೆಯಾಗಿ ವಿಶ್ವದ ಮೂಲೆ ಮೂಲೆಯಿಂದ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆಯುತ್ತಿದೆ. ಅದ್ರ ಹಿಂದಿನ ಅಸಲಿ ಶಕ್ತಿ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು.

ಬರ್ತ್ ಡೇ ಸಂಭ್ರಮದಲ್ಲಿರೋ ನಿರ್ಮಾಪಕ ವಿಜಯ್ ಕಿರಗಂದೂರ್​ಗೆ ಡಿವೈನ್ ಬ್ಲಾಕ್​ಬಸ್ಟರ್ ನೀಡಿದ್ದಾರೆ ರಿಷಬ್ ಶೆಟ್ಟಿ. ಅಲ್ಲದೆ, ಅವ್ರ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕೆಜಿಎಫ್​ನಂತಹ ಮೈಲುಗಲ್ಲು ಸಿನಿಮಾ ನೀಡಿ, ಸಾವಿರಾರು ಕೋಟಿ ಬ್ಯುಸಿನೆಸ್ ಮಾಡೋ ಮುಖೇನ ನಮ್ಮ ಕನ್ನಡ ಚಿತ್ರರಂಗದ ಕೋಟೆ ಕೊತ್ತಲುಗಳನ್ನ ಜಗದಗಲಕ್ಕೆ ವಿಸ್ತರಿಸಿದ ಹೊಂಬಾಳೆಯ ಯಜಮಾನನಿಗೆ ಸಕ್ಸಸ್ ಮೇಲೆ ಸಕ್ಸಸ್ ಸಿಗ್ತಿರೋದು ಅವ್ರ ಅತ್ಯುತ್ತಮ ಆಯ್ಕೆಗಳು ಹಾಗೂ ಎಕ್ಸಿಕ್ಯೂಷನ್​ನಿಂದ ಅನ್ನೋದು ಮರೆಯೋ ಹಾಗಿಲ್ಲ.

ಪಂಜುರ್ಲಿ ದೈವಾರಾಧನೆಯಲ್ಲಿ ಸಾಕ್ಷಾತ್ ಗುಳಿಗನಾಗಿಯೇ ಮಿಂಚು ಹರಿಸಿದ್ದಾರೆ ರಿಷಬ್ ಶೆಟ್ಟಿ. ಅದಕ್ಕೆ ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ, ಅಜನೀಶ್ ಸಂಗೀತ, ಸಪ್ತಮಿ ಗೌಡ, ಅಚ್ಯುತ್, ಪ್ರಮೋದ್, ಕಿಶೋರ್ ಪಾತ್ರಗಳು ಕೂಡ ಪಿಲ್ಲರ್​ಗಳಾಗಿ ನಿಂತಿವೆ. ಕರಾವಳಿಯ ಸೊಬಗನ್ನ ಇಡೀ ವಿಶ್ವಕ್ಕೆ ಹರಡಿದ ಗರಿಮೆ ರಿಷಬ್​ಗೆ ಸಲ್ಲುತ್ತೆ.

ಬುಕ್ ಮೈ ಶೋನಲ್ಲಿ 99 ಪರ್ಸೆಂಟ್ ಬುಕಿಂಗ್ ನಡೀತಿದ್ರೆ, ಪ್ರತಿಷ್ಠಿತ IMDbಯಿಂದ 9.8 ರೇಟಿಂಗ್ ಸಿಕ್ಕಿರೋದು ಸಿನಿಮಾದ ಗಮ್ಮತ್ತಿನ ಪ್ರತೀಕವಾಗಿದೆ. ಪ್ರೀಮಿಯರ್ ಶೋನಲ್ಲಿ ಕ್ಲೈಮ್ಯಾಕ್ಸ್ ನೋಡಿ ಓಡೋದಿ ಬಂದು ರಿಷಬ್​ನ ತಬ್ಬಿದ ರಕ್ಷಿತ್ ಶೆಟ್ಟಿ, ವ್ಹಾವ್ ಫೀಲ್ ವ್ಯಕ್ತಪಡಿಸಿದ್ರು. ಅತ್ತ ಬಾಹುಬಲಿ ಫೇಮ್ ಡಾರ್ಲಿಂಗ್ ಪ್ರಭಾಸ್ ಕೂಡ ಕ್ಲೈಮ್ಯಾಕ್ಸ್​ಗೆ ಫಿದಾ ಆಗಿ ಇನ್ಸ್​ಟಾ ಪೋಸ್ಟ್ ಮಾಡಿದ್ರು.

ಇನ್ನು ಕೆಜಿಎಫ್ ಅಂತಹ ಬಿಗ್ ಸ್ಕೇಲ್ ಮೂವಿಯನ್ನೇ ಬಹುಭಾಷೆಗೆ ಕೊಟ್ಟಂತಹ ಹೊಂಬಾಳೆ ಫಿಲಂಸ್​ಗೆ ಕಾಂತಾರ ಚಿತ್ರವನ್ನ ಪರಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡೋದು ಕಷ್ಟವೇನೂ ಆಗಿರಲಿಲ್ಲ. ಆದ್ರೆ ಕನ್ನಡದಲ್ಲೇ ನಮ್ಮ ನಾಡಿನ ಕಥೆ ವಿಶ್ವದ ಜನತೆಗೆ ರೀಚ್ ಆಗ್ಬೇಕು ಅನ್ನೋ ರಿಷಬ್ ಕನಸನ್ನ ಹೊಂಬಾಳೆ ನನಸು ಮಾಡಿದೆ. ಸಿನಿಮಾದ ಕಥೆಯಲ್ಲಿನ ಧಮ್ಮು, ಪಾತ್ರಗಳಲ್ಲಿನ ರಿಧಮ್, ರಿಷಬ್ ಟೆರಿಫಿಕ್ ಪರ್ಫಾಮೆನ್ಸ್​ಗೆ ವಿದೇಶಗಳಲ್ಲಿ ಸ್ಕ್ರೀನ್ಸ್​ನ ಹೆಚ್ಚಿಸೋಕೆ ಡಿಮ್ಯಾಂಡ್ ಆಗ್ತಿರೋದು ಕನ್ನಡಿಗರ ತಾಕತ್ತು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗುವಂತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES