Monday, December 23, 2024

ಕಾಂಗ್ರೆಸ್ ಪಕ್ಷವನ್ನೇ ಬ್ಯಾನ್ ಮಾಡಬೇಕು : ಬಸನಗೌಡ ಪಾಟೀಲ್​

ವಿಜಯಪುರ : RSS ಬ್ಯಾನ್ ಮಾಡಬೇಕೆಂಬ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​​ ನನ್ನನ್ನು ಕೇಳಿದ್ರೆ ಕಾಂಗ್ರೆಸ್ ಅನ್ನೇ ಬ್ಯಾನ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಕಾಂಗ್ರೆಸ್ ಈ‌‌ ದೇಶಕ್ಕೆ ಒಂದು ಶಾಪವಾಗಿದೆ ಎಂದ್ರು. ವಿಜಯಪುರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸುವಂತೆ ಗಾಂಧಿಜಿ ಹೇಳಿದ್ರು. ಆದ್ರೆ ಕಾಂಗ್ರೆಸ್​​ ರಾಜಕೀಯ ಪಕ್ಷವಾಗಿ ಮುಂದುವರೆದಿದೆ. ಸಿದ್ದರಾಮಯ್ಯ ಅವರು ಪೂರ್ತಿ ಹತಾಶೆಯಿಂದ BJP ವಿರುದ್ಧ ಸ್ಟೇಟ್​​ಮೆಂಟ್​​ಗಳನ್ನ​​ ಕೊಟ್ತಿದ್ದಾರೆ ಎಂದರು.

ಅದಲ್ಲದೇ, RSS ದೇಶಭಕ್ತ ಸಂಘಟನೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರು ಮಾಡುವಂತಹ ಕಾರ್ಖಾನೆ RSS. ದೇಶದಲ್ಲಿ PFI ಅನ್ನು ಸುಖಾಸುಮ್ಮನೆ ಬ್ಯಾನ್​ ಮಾಡಿಲ್ಲ. ಅದು ಹಿಂದೂಗಳ ಹತ್ಯೆ, ಲವ್ ಜಿಹಾದ್ ಮುಂತಾದವುಗಳನ್ನು ಮಾಡುತ್ತಾ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ಸಂಚು ರೂಪಿಸಿತ್ತು ಎಂಬುದು ಜಗಜ್ಜಾಹೀರಾಗಿದೆ. PFIನಿಂದ ಕಾಂಗ್ರೆಸ್ ಮತಬ್ಯಾಂಕ್ ಒಡೆದು ಹೋಗಿತ್ತು. ಹೀಗಾಗಿ PFI ನಿಷೇಧ ಆಗಿದ್ದಕ್ಕೆ ಕಾಂಗ್ರೆಸ್​​ ಒಳಗಿಂದೊಳಗೆ ಸಂತೋಷ ಪಟ್ಟಿದೆ ಎಂದು ಕಾಂಗ್ರೆಸ್​​ ವಿರುದ್ಧ ಯತ್ನಾಳ್​​ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES