Wednesday, January 22, 2025

ಅಭಿ ಹುಟ್ದಬ್ಬಕ್ಕೆ ಸುಕ್ಕಾ ಸೂರಿ BM ಟೀಸರ್ ಉಡುಗೊರೆ

ಸುಕ್ಕಾ ಸೂರಿಯ ಮತ್ತೊಂದು ಕಲ್ಟ್ ಆ್ಯಕ್ಷನ್ ಎಂಟರ್​ಟೈನರ್ ಟೀಸರ್ ರಿಲೀಸ್ ಆಗಿದೆ. ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜನುಮ ದಿನಕ್ಕೆ ಒಲವಿನ ಉಡುಗೊರೆ ನೀಡಿರೋ ಚಿತ್ರತಂಡ, ಮಾಸ್ ಎಲಿಮೆಂಟ್ಸ್​​ನಿಂದ ಮೇಳೈಸಿದೆ. ಇಷ್ಟಕ್ಕೂ ಅಂಬಿ ನಿವಾಸದಲ್ಲಿ ಬರ್ತ್ ಡೇ ಸೆಲೆಬ್ರೇಷನ್ ಹೇಗಿತ್ತು ಅನ್ನೋದನ್ನ ಟೀಸರ್ ಝಲಕ್ ಸಮೇತ ತೋರಿಸ್ತೀವಿ, ಎಂಜಾಯ್.

  • ಸೀಕ್ವೆಲ್ ಚಿತ್ರಗಳಂತೆ ‘ಅಂಬಿ ಪಾರ್ಟ್​ 2’ ಅಭಿ – ಸುಮಕ್ಕ
  • ಕೋವಿಡ್ ನಡುವೆ ಪುಟಿದೆದ್ದ ಅಭಿಷೇಕ್ ಖಾಕಿ ಪವರ್..!
  • ಇದು ಐಡಿಯಾ ಸಾಯಬಾರ್ದು ಎಂದ ರುದ್ರನ ಖದರ್

28 ವಸಂತಗಳನ್ನ ಪೂರೈಸಿ 29ನೇ ವರ್ಷಕ್ಕೆ ಕಾಲಿಟ್ಟಿರೋ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್​ಗೆ ಈ ದಿನ ಬಹಳ ವಿಶೇಷ. ಕಾರಣ ಅಪ್ಪನಿಲ್ಲದ ಬರ್ತ್ ಡೇ ಅನ್ನೋ ಕೊರಗಿಗಿಂತ ಅಮ್ಮ ಸಂಸದೆ ಅನ್ನೋ ಖುಷಿ. ಅಲ್ಲದೆ, ತಮ್ಮ ಎರಡನೇ ಚಿತ್ರ ಬ್ಯಾಡ್ ಮ್ಯಾನರ್ಸ್​ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ.

ದುನಿಯಾ ಸೂರಿ ಆ್ಯಕ್ಷನ್ ಕಟ್​ನಲ್ಲಿ ತಯಾರಾಗ್ತಿರೋ ಈ ಸಿನಿಮಾಗೆ ಪಾಪ್​ಕಾರ್ನ್​ ಸುಧಿ ಬಂಡವಾಳ ಹೂಡಿದ್ದು, ಟೈಟಲ್ ಮತ್ತು ಮೇಕಿಂಗ್​ನಿಂದ ಅತೀವ ನಿರೀಕ್ಷೆ ಮೂಡಿಸಿದೆ. ​ಇದೀಗ ಅಭಿಷೇಕ್ ರುದ್ರನಾಗಿ ರೌದ್ರಾವತಾರ ತಾಳಲಿದ್ದಾರೆ ಅನ್ನೋ ಹಿಂಟ್ ಕೊಟ್ಟಿರೋ ಸೂರಿ, ಕಲ್ಟ್ ಮೇಕಿಂಗ್​ನ ಅಸಲಿಯತ್ತು ಪರಿಚಯಿಸಿದ್ದಾರೆ.

ಅಲ್ಲದೆ, ಮಾಸ್ ಡೈಲಾಗ್ಸ್ ಖದರ್ ಜೊತೆ ಖಾಕಿ ಪವರ್ ಝಲಕ್ ಕೂಡ ಬಿಟ್ಟುಕೊಟ್ಟಿದ್ದಾರೆ ಸುಕ್ಕಾ ಸೂರಿ. ಇನ್ನು ಬರ್ತ್ ಡೇಗಾಗಿ ನಿನ್ನೆಯಿಂದಲೇ ಸಕಲ ತಯಾರಿ ನಡೆಸಿದ ಆಪ್ತ ಬಳಗ, ಜೆಪಿ ನಗರದ ಅಂಬಿ ನಿವಾಸದ ಎದುರು ಫ್ಯಾನ್ಸ್ ಸರತಿ ಸಾಲಿನಲ್ಲಿ ಬರಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಸಹಸ್ರಾರು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದ ಬಂದು ನೆಚ್ಚಿನ ನಟನಿಗೆ ಶುಭ ಹಾರೈಸಿದ್ರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು.

ಇನ್ನು ಸುಮಲತಾ ಅಂಬರೀಶ್, ಸೀಕ್ವೆಲ್ ಸಿನಿಮಾಗಳ ಟ್ರೆಂಡ್​ನಂತೆ ಅಭಿ ಕೂಡ ಅಂಬರೀಶ್ ಅವ್ರ ಪಾರ್ಟ್​-2 ಎಂದರು. ಅಲ್ಲದೆ, ಅಂಬರೀಶ್ ಅವ್ರ ರೀತಿ ನಟನಾಗಷ್ಟೇ ಅಲ್ಲದೆ, ಸಮಾಜಮುಖಿ ಕಾರ್ಯಗಳನ್ನ ಮಾಡೋ ವ್ಯಕ್ತಿಯಾಗಿ ಗುರ್ತಿಸಿಕೊಳ್ಳಬೇಕು ಅನ್ನೋದು ನನ್ನ ಆಶಯ ಅಂತ ಮಗನ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ರು.

ಅದಕ್ಕೆ ಪ್ರತಿಕ್ರಿಯಿಸಿದ ಅಭಿ, ಅವ್ರಂತೆ ನಾನಾಗಲು ಸಾಧ್ಯವೇ ಇಲ್ಲ ಅಂತ ಅಪ್ಪನ ಸ್ಟೈಲ್​ನಲ್ಲಿ ಡೈಲಾಗ್ ಬಿಟ್ರು. ತಮಾಷೆ ಮಾಡಿದ ಬಳಿಕ ಖಂಡಿತಾ ಪ್ರಯತ್ನಿಸುವೆ ಅಮ್ಮ ಅಂತ ಸುಮಕ್ಕನಿಗೆ ಪ್ರಾಮಿಸ್ ಮಾಡಿದ್ರು.

ಇನ್ನು ಬ್ಯಾಡ್ ಮ್ಯಾನರ್ಸ್​ ಟೀಸರ್ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ಕೋವಿಡ್ ಚಾಲೆಂಜಸ್ ನಡುವೆ ಚಿತ್ರಿಸಿರೋ ಈ ಸಿನಿಮಾ ಮೇಕಿಂಗ್ ಚೆನ್ನಾಗಿದೆ. ಎಲ್ಲರ ಪ್ರೀತಿ, ಅಭಿಮಾನ, ಪ್ರೋತ್ಸಾಹ ಅಭಿ ಮೇಲಿರಲಿ ಎಂದರು.

ಒಟ್ಟಾರೆ ಅಭಿಮಾನಿಗಳ ಅಭಿಮಾನದ ಜೊತೆ ಮಾಧ್ಯಮಗಳಿಗೂ ವಿಶೇಷ ಕೃತಜ್ಞತೆ ಸಲ್ಲಿಸಿದ ಅಭಿಷೇಕ್, ಎಲ್ಲರ ಪ್ರೀತಿಗೆ ಪಾತ್ರರಾದ್ರು. ಹ್ಯಾಪಿ ಬರ್ತ್ ಡೇ ಅಭಿ ಅಂತ ಹೇಳ್ತಾ, ಮುಂದಿನ ಎರಡು ಸಿನಿಮಾಗಳಿಗೆ ಆಲ್ ದಿ ಬೆಸ್ಟ್ ಹೇಳೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES