Sunday, January 19, 2025

ಸೀತೆಗಾಗಿ ಹನುಮನೊಂದಿಗೆ ಲಂಕೆಯತ್ತ ‘ಆದಿಪುರುಷ್’

ಸೀತೆಯನ್ನ ಹುಡುಕಿ ಹನುಮನೊಂದಿಗೆ ಲಂಕೆಯತ್ತ ಹೊರಟಿದ್ದಾರೆ ಆದಿಪುರುಷ ಪ್ರಭಾಸ್. ಯೆಸ್.. ಬಹುನಿರೀಕ್ಷಿತ 500 ಕೋಟಿ ಬಜೆಟ್​ನ ಆದಿಪುರುಷ್ ಟೀಸರ್ ಲಾಂಚ್ ಆಗಿದ್ದು, ಡಾರ್ಲಿಂಗ್ ಫ್ಯಾನ್ಸ್ ಜೊತೆ ಇಡೀ ಭಾರತೀಯ ಚಿತ್ರರಂಗ ಬೇಸರಗೊಂಡಿದೆ. ಕಾರಣ ಚಿತ್ರದ ಗ್ರಾಫಿಕ್ಸ್. ಯಾವ ರೇಂಜ್​ಗೆ ಟ್ರೋಲ್ ಆಗ್ತಿದೆ ಸಿನಿಮಾ ಅನ್ನೋದ್ರ ಜೊತೆ ಪಾತಾಳಕ್ಕೆ ಕುಸಿದ ಪ್ರಭಾಸ್ ಸಕ್ಸಸ್​ ಬಗ್ಗೆಯೂ ತೋರಿಸ್ತೀವಿ. ನೀವೇ ಓದಿ.

  • ತಳಬುಡ ಇಲ್ಲದ ಗ್ರಾಫಿಕ್ಸ್.. ಕ್ಲಾಸಿಕ್ ಕಥೆಗೆ ವೆಸ್ಟರ್ನ್​ ಟಚ್
  • ಸಾಹೋ, ರಾಧೆ ಶ್ಯಾಮ್ ನಂತ್ರ ಪ್ರಭಾಗೆ ಹ್ಯಾಟ್ರಿಕ್ ಫ್ಲಾಪ್
  • 700 ಕೋಟಿ ಟೆಂಪಲ್ ರನ್..? ಪೋಗೋಗೆ ಟಿವಿ ರೈಟ್ಸ್..?

ಹಂತ ಹಂತವಾಗಿ ಮಾಸ್ ಹೀರೋ ಆಗಿ ಬೆಳೆದ ಯಂಗ್ ರೆಬೆಲ್​ಸ್ಟಾರ್ ಪ್ರಭಾಸ್​ಗೆ ಬಾಹುಬಲಿ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ತಂದುಕೊಟ್ಟಿತು. ಆದ್ರೆ ಅದಾದ ಬಳಿಕ ಅವ್ರ ಸ್ಟಾರ್​ಡಮ್​ಗೆ ತಕ್ಕನಾದ ಒಂದು ಸಿನಿಮಾ ಕೂಡ ಬರಲಿಲ್ಲ. ಹೌದು.. ಸಾಹೋ ಸಿನಿಮಾ ನಿರೀಕ್ಷಿತ ಮಟ್ಟ ತಲುಪಲಿಲ್ಲ. ರಾಧೆ ಶ್ಯಾಮ್ ಆದ್ರೂ ಸಕ್ಸಸ್ ಆಗುತ್ತೆ ಅಂದುಕೊಂಡ್ರೆ ಅದೂ ಸಹ ನೆಲ ಕಚ್ಚಿತು.

ಡಾರ್ಲಿಂಗ್ ಫ್ಯಾನ್ಸ್ ಎಲ್ಲಾ ಆದಿಪುರುಷ್ ಮೇಲೆ ಭರವಸೆ ಇಟ್ಟರು. ಸಾಹೋ ಮತ್ತು ರಾಧೆ ಶ್ಯಾಮ್ ಚಿತ್ರಗಳಾದ್ರೂ ರಿಲೀಸ್ ಆದ್ಮೇಲೆ ನಿರೀಕ್ಷೆ ಹುಸಿಗೊಳಿಸಿದ್ವು. ಆದ್ರೆ ಆದಿಪುರುಷ್ ಟೀಸರ್​ನಲ್ಲೇ ಠುಸ್ ಆಗಿದೆ. ಕಾರಣ ಕೆಟ್ಟ ಗ್ರಾಫಿಕ್ಸ್ ಹಾಗೂ ಕ್ಲಾಸಿಕ್ ಕಥೆಗೆ ವೆಸ್ಟರ್ನ್​ ಟಚ್ ನೀಡಿರೋ ಡೈರೆಕ್ಟರ್​ ಮಂಕುಬುದ್ಧಿ.

ಸಾಕಷ್ಟು ಮಂದಿ ತರಹೇವಾರಿ ರೀತಿಯಲ್ಲಿ ಟ್ರೋಲ್ ಮಾಡ್ತಿದ್ದಾರೆ. ಒಬ್ರು ಇದೊಂದು 700 ಕೋಟಿ ಟೆಂಪಲ್ ರನ್ ಗೇಮ್ ಅಂತಿದ್ದಾರೆ. ಮತ್ತೊಬ್ರು ಇದ್ರ ಟಿವಿ ರೈಟ್ಸ್ ಪೋಗೋ ಚಾನಲ್​ಗೆ ಅಂತಿದ್ದಾರೆ. ತಲೆ ಬುಡ ಇಲ್ಲದೆ ಮಾಡಿರೋ ಗ್ರಾಫಿಕ್ಸ್, ಚಿತ್ರದ ಕ್ಯಾರೆಕ್ಟೆರ್​ಗಳನ್ನ ಕಾರ್ಟೂನ್​ಗಳಂತೆ ಬಿಂಬಿಸಲಾಗಿದೆ. 500 ಕೋಟಿ ಬಜೆಟ್​ನಲ್ಲಿ ತಯಾರಾಗ್ತಿದ್ದ ಸಿನಿಮಾದ ಔಟ್​ಪುಟ್ ಇಷ್ಟು ಕೆಟ್ಟದಾಗಿರೋದಕ್ಕೆ ಇಡೀ ಟೀಂಗೆ ಮುಖಭಂಗವಾಗಿದೆ.

ಓಂ ರಾವತ್ ಅನ್ನೋರು ತ್ಹಾನಾಜಿ ಅನ್ನೋ ಒಂದೇ ಒಂದು ಸಿನಿಮಾ ಮಾಡಿದ್ರು. ಅವ್ರಿಗೆ ಅನುಭವದ ಕೊರತೆಯೂ ಇತ್ತು. ಅಂತಹ ಡೈರೆಕ್ಟರ್ ಮೇಲೆ ಭರವಸೆ ಇಟ್ಟ ಪ್ರಭಾಸ್ ಒಂಥರಾ ನಂಬಿ ಕೆಟ್ಟಂತಾಗಿದೆ. ಸಾಲದು ಅಂತ ಬಾಲಿವುಡ್ ಅಂಗಳದಿಂದ ಸೀತೆಯಾಗಿ ಕೃತಿ ಸನನ್, ರಾವಣನಾಗಿ ಸೈಫ್ ಅಲಿ ಖಾನ್ ಕಾಣಸಿಗಲಿದ್ದು, ಅವ್ರೂ ಟ್ರೋಲ್ ಆಗ್ತಿದ್ದಾರೆ.

ರಾಮಾಯಣದಲ್ಲಿ ರಾಮ- ರಾವಣನ ಲಂಕಾಯುದ್ಧದ ಕಥಾನಕ ಇದಾಗಿದ್ದು, ಸದ್ಯ ಬಂದಿರೋ ಔಟ್​ಪುಟ್​ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಆಡಿಕೊಳ್ತಿದ್ದಾರೆ. ಒಂಥರಾ ಸೂಪರ್ ಸ್ಟಾರ್ ರಜಿನೀಕಾಂತ್​- ದೀಪಿಕಾ ಪಡುಕೋಣೆ ಜೋಡಿಯ ಕೊಚಾಡಿಯನ್ ಫ್ಲೇವರ್​ನಲ್ಲಿ ಈ ಸಿನಿಮಾ ಇರಲಿದ್ದು, ಒಂದು ಕೋಟಿ ಗಳಿಸೋದು ಕೂಡ ಡೌಟ್ ಇದೆ. ಅಲ್ಲದೆ, ಮುಂದಿನ ಸಲಾರ್​ಗೂ ಇದ್ರ ಎಫೆಕ್ಟ್ ಆಗೋ ಸಾಧ್ಯತೆ ಹೆಚ್ಚಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES