Thursday, December 26, 2024

ಯಶ್ ಜೊತೆ ‘ಅವತಾರ್’ ಸ್ಟಂಟ್ ಮಾಸ್ಟರ್.. ಬಿಟ್ರು ಹುಳ..!

ನರಾಚಿ ರಕ್ತಸಿಕ್ತ ಸಾಮ್ರಾಜ್ಯದ ಮೇಲೆ ಚಿನ್ನದ ಚೇರು ಹಾಕಿ ಕೂತ ತೂಫಾನ್​ ರಾಕಿಭಾಯ್​​​​. ಕೆಜಿಎಫ್​​ ಸುವರ್ಣ ಯುಗದ ಗತವೈಭವ ಕಂಡ ನಂತ್ರ ಮಾಸ್ಟರ್​ಪೀಸ್​​ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದ್ದಾರೆ. ರಾಕಿಂಗ್​ ಸ್ಟಾರ್​ ನೆಕ್ಸ್ಟ್​​​ ವಾಟ್​​​​​​ ಅಂತ ಇಡೀ ಸಿನಿದುನಿಯಾ ತಲೆ ಕೆಡಿಸಿಕೊಂಡಿದೆ. ಈ ನಡುವೆ ಹಾಲಿವುಡ್​ಗೆ ಜಿಗಿಯೋಕೆ ರಾಕಿಭಾಯ್​ ಸಜ್ಜಾಗಿದ್ದಾರೆ. ಅಬ್ಬಬ್ಬಾ..! ಇದು ನಿಜಾನಾ ಅಂತ ಪ್ರಶ್ನೆ ಮಾಡ್ಬೇಡಿ..? ಈ ಮಾತು ಹೇಳೋಕೆ ಕಾರಣ ಇದೆ. ಈ ಸ್ಟೋರಿ ಓದಿ.

  • ಖಲಾಶ್​​ ನಿಕಾವೋ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ರಾಕಿಭಾಯ್​

ಸ್ಯಾಂಡಲ್​ವುಡ್​​ ನಿಂದ ಹಾಲಿವುಡ್​​​​ವರೆಗೂ ರಾಕಿಭಾಯ್​ ಗತ್ತು, ಗೈರತ್ತು ಗೊತ್ತಾಗಿದೆ. ನರಾಚಿ ರಕ್ಕಸರ ನಡುವೆ ಗರುಡನ ರುಂಡ ಚೆಂಡಾಡಿದ ಧೀರ ಚಿನ್ನದ ಸಾಮ್ರಾಜ್ಯದ ಮೇಲೆ ಸಿಂಹಾಸನ ಹಾಕಿ ಕೂತಿದ್ದಾರೆ. ಸದ್ಯ ಯಾರ ಕೈಗೂ ಸಿಗದ ರಾಜಾಹುಲಿಯ ನೆಕ್ಸ್ಟ್​​ ಪ್ರಾಜೆಕ್ಟ್​​ ಬಗ್ಗೆ ಇಡೀ ಇಂಡಿಯಾ ತಲೆಕೆಡಿಸಿಕೊಂಡಿದೆ. ಆದ್ರೆ, ರಾಕಿಭಾಯ್​ ಮಾತ್ರ ಕೈಯಲ್ಲಿ ಗನ್​ ಹಿಡಿದು ಇಟ್ಟ ಗುರಿಗೆ ದಿಟ್ಟತನದಿಂದ ಶೂಟ್​ ಮಾಡ್ತಿದ್ದಾರೆ.

ಯೆಸ್​​.. ರಾಕಿಭಾಯ್​ ಇಟ್ಟಿರೋ ಗುರಿ ಇಟ್ಸ್​​ ನಾಟ್​​ ಅ್ಯನ್​ ಆರ್ಡಿನರಿ. ಆತ ತಲುಪೋ ಜಾಗ ಕೂಡ ಸಿಂಪಲ್​ ಆಗಿರೋಲ್ಲ. ತನಗೆ ಬೇಕಾದಂತೆ ಭವಿಷ್ಯ ಬರೆಯಬಲ್ಲ ಚಾಣಕ್ಯ ಅನ್ನೋದು ಇಡೀ ಇಂಡಸ್ಟ್ರಿಗೆ ಗೊತ್ತಿದೆ ಬಿಡಿ. ಇದೆಲ್ಲಾ ಹಳೆ ವಿಷ್ಯ ಅನ್ನಿಸಬಹುದು. ಆದ್ರೆ ಸದ್ಯ ರಾಕಿಭಾಯ್ ಶೂಟ್​ ಮಾಡೋ ವೇಳೆ​, ಹಿಂದೆ ನಿಂತಿರೋದು ಕಾಮನ್​ ಮ್ಯಾನ್​ ಅಲ್ಲ. ಹಾಲಿವುಡ್​​ನ ಅವತಾರ್​​ ಚಿತ್ರದ ಸ್ಟಂಟ್​ ಮಾಸ್ಟರ್​​ ಜೆ.ಜೆ ಪೆರ್ರಿ.

ರಾಜಮೌಳಿ, ಶಂಕರ್​​​, ನರ್ತನ್​ ಅಂತಾ ಆಸುಪಾಸಿನ ಸ್ಟಾರ್​ ಡೈರೆಕ್ಟರ್​ ಬಗ್ಗೆ ನಾವೆಲ್ಲಾ ತಲೆಗೆ ಕಂಬಳಿ ಹುಳ ಬಿಟ್ಕೊಂಡ್ರೆ, ರಾಕಿಂಗ್​ ಸ್ಟಾರ್​ ಹಾಲಿವುಡ್​​ಗೆ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ದುಷ್ಮನಿಗಳ ನೆತ್ತರಲ್ಲಿ ಮತ್ತೊಂದು ರಕ್ತ ಚರಿತ್ರೆ ಬರೆಯೋಕೆ ಹೊರಟಿದ್ದಾರೆ ಮಾಸ್ಟರ್​ ಪೀಸ್​. ಯೆಸ್​​​.. ಪೆರ್ರಿ ಜತೆಗೆ ಫೈರಿಂಗ್​​​ ಮಾಡ್ತಿರೋ ವೀಡಿಯೋ ಸಖತ್​ ವೈರಲ್​ ಆಗಿದೆ.

ದೊಡ್ಡಮ್ಮನ ಘನಘೋರ ಘರ್ಜನೆಗೆ ಕಿವಿ ಮುಚ್ಚಿಕೊಂಡಿದ್ದ ಚಿತ್ರರಸಿಕರು ಮತ್ತೆ ಹಾಲಿವುಡ್​ ಮಷಿನ್​ ಗನ್​ಗಳ ಸಪ್ಪಳಕ್ಕೆ ಸ್ಟನ್​ ಆಗಲಿದ್ದಾರೆ. ಸವಾಲಿನ ಗುರಿ ತಲುಪೋಕೆ ಪರ್ರಿ ಸಹಾಯ ನೆನೆದು ಯಶ್​ ತ್ಯಾಂಕ್ಸ್​ ಹೇಳಿದ್ದಾರೆ. ಜತೆಗೆ ಮುಂದೆ ಇದು ಖಲಾಶ್​ ನಿಕಾವೋ ಆಗಿರಬೇಕು ಎಂದು ಬರೆದುಕೊಂಡಿರೋ ರಾಕಿಭಾಯ್​​​ ಟೈಟಲ್​​ ಗುಟ್ಟು ರಟ್ಟು ಮಾಡಿದಂತಿದೆ. ಎನಿವೇ, ಲಾಸ್​ ಏಂಜಲೀಸ್​​​​ನಲ್ಲೂ ಕನ್ನಡದ ಹೆಮ್ಮೆಯ ಕಳಸ ರಾಕಿಭಾಯ್​​​ ಸಿನಿಮಾಗಳು ಅಬ್ಬರಿಸುವಂತಾಗಲಿ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES