ರಾಮನಗರ; ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಮಾರು 15 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಡಿವೈಎಸ್ಪಿ ಕಛೇರಿಗೆ ಭೇಟಿ ನೀಡಿ ಈ ಬಗ್ಗೆ ಮಾಹಿತಿ ಪಡೆದರು.
ನಿನ್ನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ಕಾಮಗಾರಿಯೊಂದಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಿ ತೆರಳುವಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಆ ಹಿನ್ನೆಲೆಯಲ್ಲಿ ಸಿಪಿ ಯೋಗೇಶ್ವರ್ ಚಾಲಕ ನಿನ್ನೆ ತಡರಾತ್ರಿ 15 ಜೆಡಿಎಸ್ ಕಾರ್ಯಕರ್ತರ ವಿರುದ್ಧ ಚನ್ನಪಟ್ಟಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಬಗ್ಗೆ ಇಂದು ಚನ್ನಪಟ್ಟಣ ಡಿವೈಎಸ್ಪಿ ಓಂ ಪ್ರಕಾಶ್ ಗೆ ನಿಖಿಲ್ ಕುಮಾರಸ್ವಾಮಿ ಅವರನ್ನ ಭೇಟಿ ನೀಡಿಯಾಗಿ ಜಿಲ್ಲೆಯಲ್ಲಿ ಎಸ್ಪಿ ಸಾಹೇಬರು ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಇದು ಪ್ರಜಾಪ್ರಭುತ್ವವದ ಕಗ್ಗೊಲೆಯಾಗಿದೆ. ಸರ್ಕಾರ ಆಗಲಿ, ಅಧಿಕಾರವಾಗಲಿ ಯಾವತ್ತು ಶಾಶ್ವತವಲ್ಲ ಎಂದು ಕಾರ್ಯಕರ್ತರ ಮೇಲಿನ ಪ್ರಕರಣ ದಾಖಲಿಸಿದ್ದನ್ನ ಖಂಡಿಸಿದ್ದಾರೆ.
ಕುಮಾರಣ್ಣ ಯಾವತ್ತು ಆದ್ರೂ ಒಬ್ಬ ಅಧಿಕಾರಿಗೆ ಏಕವಚನದಲ್ಲಿ ಮಾತನಾಡಿರುವುದನ್ನ ನೋಡಿದ್ದೀರಾ, ಕಾರ್ಯಕರ್ತರ ತಪ್ಪು ಮಾಡಿದಾಗ ಪೊಲಿಸ್ ಠಾಣೆಗೆ ಪೋನ್ ಮಾಡಿ ಅವರನ್ನು ಬಿಡಿ ಅಂದಿದ್ದಾರೆ. ಮೊದಲು ಉಸ್ತುವಾರಿ ಮಂತ್ರಿಗಳು ಗೌರವ ಉಳಿಸಿಕೊಳ್ಳಬೇಕು. ನಮ್ಮ ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಿದ್ದೀರಾ, ಅವರಿಗೆ ಹೊಡೆದಿದ್ದೀರಿ ಅಲ್ವಾ ಅವರ ಪರಿಸ್ಥಿತಿ ಏನಾಗಿದೆ ನಿಮಗೆ ಗೊತ್ತಾ ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.