Wednesday, January 22, 2025

ಮೌಳಿ ಮೆಚ್ಚಿದ ಕಿರೀಟಿ ಸೌತ್​ ದುನಿಯಾಗೆ ‘ಜೂನಿಯರ್’..!

ಅಪ್ಪು ಅಭಿಮಾನಿ ಕಿರೀಟಿಗೆ ರಾಜಮೌಳಿ ಅಂತಹ ಖ್ಯಾತ ನಿರ್ದೇಶಕರೇ ಬೆಸ್ಟ್ ವಿಶಸ್ ಹೇಳಿದ್ರು. ನಂತ್ರ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಕೂಡ ಬೆನ್ನು ತಟ್ಟಿದ್ರು. ಆ ಕಿರೀಟಿ ಈಗ ಸೌತ್ ದುನಿಯಾದ ಜೂನಿಯರ್ ಆಗಿ ಮಿಂಚಲಿದ್ದಾರೆ. ಇಷ್ಟಕ್ಕೂ ಗಣಿಧಣಿ ಪುತ್ರನ ಟೈಟಲ್ ಟೀಸರ್ ಹೇಗಿದೆ ಅಂತೀರಾ..? ನೀವೇ ಓದಿ.

  • ರಿಯಲಿಸ್ಟಿಕ್​​​​​​​ ಸ್ಟಂಟ್ಸ್​​ ಮೂಲಕ ಮೈನವಿರೇಳಿಸಿದ್ದ ಗಣಿಧಣಿ..?

ಚೊಚ್ಚಲ ಸಿನಿಮಾದಲ್ಲೇ ಕನ್ನಡಿಗರ ದಿಲ್​ ಗೆಲ್ಲೋದು ಅಷ್ಟು ಸುಲಭ ಅಲ್ಲಾ ಬಿಡಿ. ಆ್ಯಕ್ಟಿಂಗ್​​​, ಡ್ಯಾನ್ಸಿಂಗ್​​​, ಫೈಟಿಂಗ್​​ ಎಲ್ಲಾ ವಿಭಾಗದಲ್ಲೂ ಸಕಲ ತಯಾರಿ ನಡೆಸಿ ಎಂಟ್ರಿ ಕೊಡಬೇಕಾಗುತ್ತೆ ಅಲ್ವಾ..? ಯೆಸ್​​.. ಈ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿ, ಜಿಮ್​​ನಲ್ಲಿ ಕಸರತ್ತು ಮಾಡಿ, ಸಿಕ್ಕಾಪಟ್ಟೆ ಬೆವರಿಳಿಸಿ, ಸಿನಿಮಾರಂಗದಲ್ಲಿ ಮಿಂಚ್ಬೇಕು ಅಂತ ಕನಸು ಕಾಣ್ತಿದ್ದಾರೆ ಕಿರೀಟಿ. ಅರೇ.. ಈ ಕಿರೀಟಿ ಯಾರು ಅಂತ ಕೇಳ್ಬೇಡಿ. ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅವ್ರ ಮುದ್ದಿನ ಮಗ.

ಈಗಾಗ್ಲೇ ಸಿಂಗಲ್​ ಟೀಸರ್​ ಮೂಲಕ ಸಂಚಲನ ಮೂಡಿಸಿರೋ ಸಖತ್ ಪ್ರಾಮಿಸಿಂಗ್​ ಹೀರೋ ಈತ. ಸ್ಯಾಂಪಲ್​​ನಲ್ಲೇ ಆ್ಯಕ್ಷನ್​ ಸೀಕ್ವೆನ್ಸ್​​ ಮೂಲಕ ರಕ್ತ ಹರಿಸಿರೋ ಕಿರೀಟಿ, ಚಿತ್ರರಸಿಕರಲ್ಲಿ ಬೆಟ್ಟದಷ್ಟು ಭರವಸೆ ಮೂಡಿಸಿದ್ದಾರೆ. ಇದೀಗ ಬರ್ತ್​ ಡೇಗೆ ಕೋಟ್ಯಂತರ ಕನ್ನಡಿಗರಿಗೆ ಗುಡ್​ ನ್ಯೂಸ್​ ಕೊಟ್ಟು ಕ್ಯೂರಿಯಾಸಿಟಿಯ ಚಿಟ್ಟೆ ಹರಿಬಿಟ್ಟಿದ್ದಾರೆ. ಯೆಸ್​​.. ಮೌಳಿ ಬೆನ್ನು ತಟ್ಟಿ ತಲೆ ಸವರಿದ್ದ ಕಿರೀಟಿ, ಜೂನಿಯರ್​​​​​ ಟೈಟಲ್​​​​ನೊಂದಿಗೆ ಎಂಟ್ರಿ ಕೊಡ್ತಿದ್ದಾರೆ.

  • ಪ್ಯಾನ್​ ಇಂಡಿಯಾ ಕಾನ್ಸೆಪ್ಟ್​​​​.. ಅದ್ಧೂರಿ ತಾರಾ ಸಂಗಮ
  • ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ಜೂನಿಯರ್​ ಕಥೆ

ಪೊಲಿಟಿಕಲ್​ ಬ್ಯಾಕ್​​ಡ್ರಾಪ್​ ಇರೋ ಕಿರೀಟಿಗೆ ಫೈನಾನ್ಶಿಯಲ್​ ಕೊರತೆ ಏನಿಲ್ಲ. ಬಜೆಟ್​ ವಿಚಾರದಲ್ಲಿ ಕಾಂಪ್ರಮೈಸ್​ ಇಲ್ಲ. ಹಾಗಂತ ಅವ್ರ ತಂದೆ ನಿರ್ಮಿಸ್ತಿಲ್ಲ. ಟಾಲಿವುಡ್​ನ ಸಾಯಿ ಕೊರ್ರಪಾಟಿ, ಯಾವುದಕ್ಕೂ ಕೊರತೆ ಆಗದಂತೆ ಪ್ರತಿ ಪ್ರೇಮು ಕೂಡ ರಿಚ್​ ಆಗಿ ತೆಗೆಯೋಕೆ ಪ್ಲಾನ್​ ಮಾಡಿಕೊಂಡಿದೆ. ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಕಮಾಲ್​ ಮಾಡೋಕೆ ಭರ್ಜರಿ ತಯಾರಿ ಕೂಡ ನಡೀತಿದೆ. ಈ ನಡುವೆ ಕಿರೀಟಿ ಬರ್ತ್​​ ಡೇಗೆ ಜೂನಿಯರ್ ಅನ್ನೋ​ ಟೈಟಲ್​​ ರಿವೀಲ್​ ಮಾಡಿ ಕುತೂಹಲಕ್ಕೆ ತೆರೆ ಎಳೆದಿದೆ. ​

ಮಾಯಾಬಜಾರ್​ ಚಿತ್ರದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಜೂನಿಯರ್​​ ಕಥೆಗೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಟಾಲಿವುಡ್​ನ ಚಿತ್ರದಲ್ಲಿ ಬೆರಗುಟ್ಟಿಸೋ ಅಂತಹ ತಾರಾ ಬಳಗವೇ ಇದೆ. ಜೆನಿಲಿಯಾ, ಕ್ರೇಜಿಸ್ಟಾರ್ ರವಿಚಂದ್ರನ್​​​, ರಿತೇಶ್​ ದೇಶ್​ ಮುಖ್​​, ಶ್ರೀಲೀಲಾ ಸೇರಿದಂತೆ ಘಟಾನುಘಟಿಗಳು ಚಿತ್ರದ ಭಾಗವಾಗಿದ್ದಾರೆ.

ಟಕ್ನಿಕಲ್​ ತಂಡವೂ ವೆರಿ ಕಾಸ್ಟ್ಲಿಯಾಗಿದ್ದು ಟಾಲಿವುಡ್​​ನ ಸ್ಟಾರ್​​ ಮ್ಯೂಸಿಕ್​ ಕಂಪೋಸರ್ ರಾಕ್​ಸ್ಟಾರ್​​​​ ದೇವಿಶ್ರೀ ಪ್ರಸಾದ್​​ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಬಾಹುಬಲಿ ದೃಶ್ಯವೈಭವವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದ ಸೆಂಥಿಲ್​​ ಕ್ಯಾಮೆರಾ ಕೈಚಳ ಇರಲಿದೆ. ಇಂಡಿಯಾದ​​ ಫೇಮಸ್​​ ಸ್ಟಂಟ್​ ಮಾಸ್ಟರ್ ​​​ಪೀಟರ್​​ ಹೇನ್ ಸಾಹಸವಿದೆ. ಒಟ್ಟಾರೆ ಹೆಜ್ಜೆ ಹೆಜ್ಜೆಗೂ ಬಹು ಕೋಟಿ ವೆಚ್ಚದಲ್ಲಿ ರಿಸ್ಕಿ ಸೀನ್​ಗಳ ಜತೆಗೆ ಅದ್ಧೂರಿ ಕಥೆಯೊಂದಿಗೆ ಬರ್ತಿದೆ ಜೂನಿಯರ್​​​​ ಸಿನಿಮಾ.

ಅಪ್ಪು ಅಪ್ಪಟ ಅಭಿಮಾನಿಯಾಗಿರೋ ಕಿರೀಟಿ, ಬಾಲ್ಯದಲ್ಲೇ ಅವ್ರ ನಟನೆಯಿಂದ ಪ್ರೇರೇಪಿತರಾಗಿದ್ರು. ಅಲ್ಲದೆ, ರೀಸೆಂಟ್ ಆಗಿ ಶಿವಣ್ಣ ಕೂಡ ಸೆಟ್​ಗೆ ಭೇಟಿ ನೀಡಿ, ಕಿರೀಟಿ ಬೆನ್ನು ತಟ್ಟಿದ್ರು. ಬಹುಭಾಷಾ ಕಲಾವಿದರಿರೋ ಈ ಸಿನಿಮಾ ಹಿಂದಿ ಹೊರತು ಪಡಿಸಿ, ಸೌತ್​ನ ನಾಲ್ಕೂ ಭಾಷೆಯಲ್ಲಿ ತಯಾರಾಗ್ತಿರೋದು ಕೂತೂಹಲ ಮತ್ತಷ್ಟು ಹೆಚ್ಚಿಸಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ರಿಪೋರ್ಟರ್​​, ಪವರ್​ ಟಿವಿ​​ ​​

RELATED ARTICLES

Related Articles

TRENDING ARTICLES