Thursday, January 23, 2025

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಬೊಂಬಾಟ್​ ಬ್ಯಾಟಿಂಗ್​.!

ಗುಹವಾಟಿ: ಗುವಾಹಟಿ ಬರ್ಸಾಪರಾ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ 237 ರನ್ ಕಲೆಹಾಕಿದೆ.

ಈಗಾಗಲೇ ಮೊದಲನೇ ಟಿ-20 ಪಂದ್ಯ ಗೆದ್ದಿರುವ ಭಾರತ ತಂಡ, ಇಂದು ಎರಡನೇ ಟಿ-20 ಪಂದ್ಯ ಆಡುತ್ತಿದೆ. ಮೊದಲು ದಕ್ಷಿಣ ಆಫ್ರಿಕಾ ತಂಡ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತು. ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 20 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 237 ರನ್​ ಕಲೆಹಾಕಿತು.

ಭಾರತದ ಪರ ಕೆ.ಎಲ್ ರಾಹುಲ್​ 57, ರೋಹಿತ್​ ಶರ್ಮಾ 43, ಸೂರ್ಯಕುಮಾರ್​ ಯಾದವ್​ 61, ವಿರಾಟ್​ ಕೊಹ್ಲಿ 49, ದಿನೇಶ್​ ಕಾರ್ತಿಕ್​ 17, ​ ಹೊಡೆದು ಮಿಂಚಿದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 1, ಲುಂಗಿ ಎನ್ಗಿಡಿ 1, ಅನ್ರಿಚ್ ನಾರ್ಟ್ಜೆ 1 ವಿಕೆಟ್​ ಪಡೆದರು. ಇನ್ನು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಲು 238 ರನ್​ ಕಲೆಹಾಕಬೇಕಾದ ಅನಿವಾರ್ಯತೆವಿದೆ.

RELATED ARTICLES

Related Articles

TRENDING ARTICLES